ಅಪಘಾತದಲ್ಲಿ ಗಾಯಗೊಂಡ ಮಾಲೀಕನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್ ನಾಯಿ: ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನ ಕಾರು ಅಪಘಾತವಾದ ಸಂದರ್ಭದಲ್ಲಿ ಪೊಲೀಸರ ಬಳಿ ತೆರಳಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಇಬ್ಬರ ಪ್ರಾಣ ಉಳಿಸಿದೆ.
ಸಾಮಾನ್ಯವಾಗಿ ನಾಯಿಗಳು ತನ್ನನ್ನು ಸಾಕಿದ ಮಾಲೀಕನಿಗೆ ಋಣಿಯಾಗಿರುತ್ತವೆ. ಎಂಥಹದ್ದೆ ಕಷ್ಟಗಳು ಎದುರಾದರೂ ಮಾಲೀಕನ ಸಹಾಯಕ್ಕೆ ನಿಂತು ತನ್ನ ನಿಷ್ಠೆಯನ್ನು ಸಾಬೀತುಪಡಿಸುತ್ತವೆ. ಅಂತಹ ಗುಣಗಳನ್ನು ಜರ್ಮನ್ ಶೆಫರ್ಡ್ ನಾಯಿಗಳಲ್ಲಿ ಅತಿ ಹೆಚ್ಚು ಕಾಣಬಹುದು. ಜರ್ಮನ್ ಶೆಫರ್ಡ್ ನಾಯಿಗಳು ಹೆಚ್ಚು ಚಾಣಾಕ್ಷತೆಯನ್ನು ಹೊಂದಿರುತ್ತವೆ. ತಮ್ಮ ಮಾಲೀಕನ ರಕ್ಷಣೆಗೆ ಸದಾ ಸಿದ್ಧವಾಗಿರುತ್ತವೆ. ಒಡೆಯನ ಕಷ್ಟಕ್ಕೆ ಸದಾ ಹೆಗಲಾಗಿರುವ ಜರ್ಮನ್ ಶೆಫರ್ಡ್ ನಾಯಿಗಳು ಒಂದು ಬಾರಿ ತನ್ನ ಮಾಲೀಕನನ್ನು ಪರಿಚಯಿಸಿಕೊಂಡ ಮೇಲೆ ಜೀವಿತಾವಧಿಯಲ್ಲಿ ಅವರನ್ನು ಮರೆಯುವುದಿಲ್ಲ. ಇಲ್ಲೊಂದು ಅಪರೂಪದ ಸಾಹಸ ಜರ್ಮನ್ ಶೆಫರ್ಡ್ ನಾಯಿಂದ ನಡೆದಿದೆ. ಹೌದು, ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನ ಕಾರು ಅಪಘಾತವಾದ ಸಂದರ್ಭದಲ್ಲಿ ಪೊಲೀಸರ ಬಳಿ ತೆರಳಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಇಬ್ಬರ ಪ್ರಾಣ ಉಳಿಸಿದೆ.
ಈ ಘಟನೆ ಲೆಬನಾನ್ನಲ್ಲಿ ನಡೆದಿದೆ. ಈ ಜರ್ಮನ್ ಶೆಫರ್ಡ್ ನಾಯಿಯ ಹೆಸರು ಟಿನ್ಸ್ಲೇ ಎಂದಾಗಿದೆ. ಟಿನ್ಸ್ಲೇ ಮಾಲೀಕರ ಕುಟುಂಬದೊಂದಿಗೆ ಕಾರಿನಲ್ಲಿ ತೆರಳತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ನಾಯಿಯು ನುಜ್ಜುಗುಜ್ಜಾದ ಕಾರಿನಿಂದ ಹೊರಬಂದು ಪೋಲೀಸರ ಬಳಿ ತೆರಳಿದೆ. ಟಿನ್ಸ್ಲೇಯನ್ನು ನೋಡಿ ಪೋಲೀಸರು ಮೊದಲು ನಾಯಿ ತಪ್ಪಿಸಿಕೊಂಡಿದೆ ಎಂದುಕೊಂಡರು. ಆದರೆ ಅದರ ಸನ್ನೆಯನ್ನು ನೋಡಿ ಹಿಂಬಾಲಿಸಿಕೊಂಡು ಹೋದರು. ಟಿನ್ಸ್ಲೇ ನೇರವಾಗಿ ಅಪಘಾತವಾದ ಸ್ಥಳಕ್ಕೆ ಅವರನ್ನು ಕರೆತಂದಿತ್ತು. ಅಪಘಾತವಾದ ಸ್ಥಳದಲ್ಲಿ ಹಿಮದ ಮಧ್ಯೆ ಸಿಲುಕಿದ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡು ಬಿದ್ದಿರುವುದನ್ನು ನೋಡಿ ಪೋಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.
This is Tinsley. She was in a car accident with her humans last night. She escaped the wreckage, got the attention of police, and led them all the way back to the site of the crash. Her humans are being treated and expected to survive. Tinsley is awarded our very rare… 15/10 pic.twitter.com/E3HRQf0sF3
— WeRateDogs® (@dog_rates) January 5, 2022
ಪೋಲೀಸರು ಸ್ಥಳದಲ್ಲಿ ನಡೆದ ಘಟನೆಯ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಜರ್ಮನ್ ಶೆಫರ್ಡ್ ಜಾತಿಗೆ ಸೇರಿದ ಟಿನ್ಸ್ಲೇಯ ಬುದ್ಧಿವಂತಿಕೆ, ಸಮಯಕ್ಷಮತೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಸಾಕಿದ ಕೋಳಿಯ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಕುಟುಂಬ: ವಿಡಿಯೋ ವೈರಲ್
Published On - 10:54 am, Thu, 6 January 22