Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Wedding Story: 11 ವರ್ಷಗಳ ಹಿಂದೆ ಮದುವೆಯಾಗಿದ್ದ ಛತ್ತೀಸ್​ಗಢದ ದಂಪತಿಗೆ ಮೊದಲ ರಾತ್ರಿಗೆ ಇದುವರೆಗೂ ಶುಭ ಮುಹೂರ್ತ ಸಿಗಲೇ ಇಲ್ಲ. ಹೀಗಾಗಿ, ಆ ಮಹಿಳೆಯ ಮನೆಯವರು ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಲೇ ಇಲ್ಲ.

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 05, 2022 | 9:32 PM

ರಾಯ್ಪುರ: ಗಂಡ-ಹೆಂಡತಿ ಎಂದಮೇಲೆ ಸಣ್ಣ ಪುಟ್ಟ ಮನಸ್ತಾಪಗಳು ಸಾಮಾನ್ಯ. ‘ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ’ ಎಂಬ ಗಾದೆ ಮಾತೇ ಇದೆ. ಕೆಲವೊಮ್ಮೆ ಅಡುಗೆ ಚೆನ್ನಾಗಿ ಮಾಡುವುದಿಲ್ಲ, ರಾತ್ರಿ ಮಲಗಿದಾಗ ಗೊರಕೆ ಹೊಡೆಯುತ್ತಾರೆ, ಎಣ್ಣೆ ಹೊಡೆಯುತ್ತಾರೆ, ಜಗಳವಾಡುತ್ತಾರೆ ಎಂಬಿತ್ಯಾದಿ ಕಾರಣಗಳಿಗೆ ಡೈವೋರ್ಸ್​ ಪಡೆದವರೂ ಇದ್ದಾರೆ. ಆದರೆ, ಛತ್ತೀಸ್​ಗಢದಲ್ಲೊಬ್ಬ ಗಂಡ ತನ್ನ ಹೆಂಡತಿಯಿಂದ ಡೈವೋರ್ಸ್​ ಪಡೆದಿದ್ದು, ಅದಕ್ಕೆ ನೀಡಿರುವ ಕಾರಣ ಕೇಳಿದರೆ ನೀವೂ ಶಾಕ್ ಆಗುತ್ತೀರ. ಏಕೆಂದರೆ ಇದು ನೀವು ಇದುವರೆಗೂ ಕಂಡು, ಕೇಳಿರದ ವಿಚಿತ್ರವಾದ ಸಮಸ್ಯೆ. 11 ವರ್ಷದ ಹಿಂದೆ ಮದುವೆಯಾಗಿದ್ದ ಇವರಿಬ್ಬರೂ ಇದುವರೆಗೂ ಒಂದು ದಿನವೂ ಒಟ್ಟಿಗೇ ಮಲಗಿಲ್ಲವಂತೆ. ಅಷ್ಟೇ ಅಲ್ಲ, ಮದುವೆಯಾದ ದಿನದಿಂದ ಆಕೆ ಗಂಡನ ಮನೆಗೇ ಬಂದಿಲ್ಲವಂತೆ. ಹೀಗಾಗಿ, ಗಂಡ-ಹೆಂಡತಿ ಜಗಳ ಉಂಡು ‘ಮಲಗೋ’ ತನಕ ಎಂಬ ಗಾದೆ ಮಾತು ಇವರಿಗೆ ಅನ್ವಯವಾಗುವುದಿಲ್ಲ!

ಮದುವೆಯೆಂದರೆ ಎರಡು ಮನಸುಗಳನ್ನು, ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಆದರೆ, ಛತ್ತೀಸ್​ಗಢದ ದಂಪತಿಯ ಕತೆಯೇ ಬೇರೆ. ಮದುವೆಯಾಗಿ 11 ವರ್ಷ ಕಳೆದರೂ ಅವರಿಬ್ಬರೂ ಒಟ್ಟಿಗೇ ಸಂಸಾರ ಮಾಡಲು ಒಳ್ಳೆಯ ಮುಹೂರ್ತವೇ ಸಿಕ್ಕಿಲ್ಲ. ಹೀಗಾಗಿ, ಇನ್ನು ಮುಂದೂ ಆ ‘ಮುಹೂರ್ತ’ ಕೂಡಿಬರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿದ ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ಈ ವಿಚಿತ್ರವಾದ ಸಮಸ್ಯೆಯನ್ನು ಆಲಿಸಿದ ಹೈಕೋರ್ಟ್​ ನ್ಯಾಯಮೂರ್ತಿಗಳಿಗೂ ಆಘಾತವಾಗಿದ್ದು, ಆ ಗಂಡನಿಗೆ ಮದುವೆಯಿಂದ ಹಾಗೂ ಹೆಂಡತಿಯಿಂದ ಮುಕ್ತಿ ಕೊಡಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಪ್ರಸ್ಥಕ್ಕೂ ಮುಹೂರ್ತ ನೋಡುವ ಪದ್ಧತಿ ಕೆಲವು ಕಡೆಯಿದೆ. 11 ವರ್ಷಗಳ ಹಿಂದೆ ಮದುವೆಯಾಗಿದ್ದ ಛತ್ತೀಸ್​ಗಢದ ದಂಪತಿಗೆ ಮೊದಲ ರಾತ್ರಿಗೆ ಇದುವರೆಗೂ ಶುಭ ಮುಹೂರ್ತ ಸಿಗಲೇ ಇಲ್ಲ. ಹೀಗಾಗಿ, ಆ ಮಹಿಳೆಯ ಮನೆಯವರು ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಲೇ ಇಲ್ಲ. ಬರೋಬ್ಬರಿ 11 ವರ್ಷ ಹೆಂಡತಿಗಾಗಿ ಕಾದ ಗಂಡ ಕೊನೆಗೆ ಬೇಸತ್ತು ಇದೀಗ ಡೈವೋರ್ಸ್ ಪಡೆದಿದ್ದಾನೆ

ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸಿದ ಛತ್ತೀಸ್​ಗಢ ಹೈಕೋರ್ಟ್, ಶುಭ ಮುಹೂರ್ತವೆಂಬುದು ಕುಟುಂಬದಲ್ಲಿ ಸಂತೋಷವಾಗಿರಲು ಮುಖ್ಯವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನ ಜೊತೆ ಬಾಳಲು ಮತ್ತು ಗಂಡನ ಮನೆಗೆ ಹೋಗದಂತೆ ಈ ಶುಭ ಮುಹೂರ್ತ ಅಡ್ಡಿಯಾಗಿದೆ. ಇದನ್ನೇ ಮುಂದಿಟ್ಟುಕೊಂಡು 11 ವರ್ಷಗಳ ದಾಂಪತ್ಯ ಜೀವನದಿಂದ ಗಂಡ-ಹೆಂಡತಿಯಿಬ್ಬರೂ ದೂರ ಉಳಿದಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯ್ದೆಯಡಿ ಈ ಮದುವೆಯನ್ನು ಅನುರ್ಜಿತಗೊಳಿಸಲಾಗಿದೆ ಎಂದು ಹೇಳಿದೆ.

ಏನಿದು ಪ್ರಕರಣ?: ಛತ್ತೀಸ್​ಗಢದ ಸಂತೋಷ್ ಸಿಂಗ್​ಗೆ 2010ರಲ್ಲಿ ಮದುವೆಯಾಗಿತ್ತು. ಮದುವೆಯಾದ ನಂತರ 1 ವಾರ ಆಕೆ ಗಂಡನ ಮನೆಯಲ್ಲಿದ್ದಳು. ಆದರೆ, ಅವರಿಬ್ಬರ ಪ್ರಸ್ಥಕ್ಕೆ ಒಳ್ಳೆ ಮುಹೂರ್ತವಿಲ್ಲ ಎಂಬ ಕಾರಣಕ್ಕೆ ಅವರಿಬ್ಬರಿಗೂ ಒಟ್ಟಿಗೇ ಮಲಗಲು ಅವಕಾಶ ನೀಡಿರಲಿಲ್ಲ. ಹೀಗೆ ಗಂಡನ ಮನೆಯಲ್ಲಿ 1 ವಾರ ದೂರವೇ ಇದ್ದ ಸಂತೋಷ್​ನ ಹೆಂಡತಿ 11 ವರ್ಷದ ಹಿಂದೆ ತವರಿಗೆ ಹೋದವಳು ವಾಪಾಸ್ ಬರಲೇ ಇಲ್ಲ. ಅವರಿಬ್ಬರೂ ದಾಂಪತ್ಯ ಆರಂಭಿಸಲು ಒಳ್ಳೆ ಮುಹೂರ್ತ ಸಿಕ್ಕಿಲ್ಲ ಎಂಬ ಕಾರಣವೊಡ್ಡಿ ಆತನ ಹೆಂಡತಿಯ ಮನೆಯವರು ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಲ್ಲ. ಹೀಗೆ 2-3 ವರ್ಷದಲ್ಲಿ ಆಗಾಗ ಸಂತೋಷನೇ ತನ್ನ ಹೆಂಡತಿಯ ಮನೆಗೆ ಹೋಗಿ ಆಕೆಯನ್ನು ನೋಡಿಕೊಂಡು ಬರುತ್ತಿದ್ದ. ಆದರೆ, ಅಷ್ಟರಲ್ಲಿ ಆಕೆಗೂ ಗಂಡನ ಮೇಲೆ ಆಸಕ್ತಿ ಇಲ್ಲದಂತಾಗಿದ್ದರಿಂದ ಆತನಿಂದ ದೂರವೇ ಇರಲು ಬಯಸುತ್ತಿದ್ದಳು. ಕಳೆದ 11 ವರ್ಷದಲ್ಲಿ ಅವರಿಬ್ಬರೂ ದೂರವೇ ಇದ್ದರೂ ಗಂಡ-ಹೆಂಡತಿಯಾಗಿಯೇ ಇದ್ದಾರೆ.

ಹೀಗಾಗಿ, ಇಬ್ಬರಿಗೂ ಡೈವೋರ್ಸ್​ ನೀಡಿದರೆ ನಮ್ಮ ಜೀವನವನ್ನು ನಾವು ನೋಡಿಕೊಳ್ಳುತ್ತೇವೆ, ಬೇರೆ ಮದುವೆಯಾಗಲು ಕೂಡ ಅವಕಾಶ ಸಿಗುತ್ತದೆ ಎಂದು ಸಂತೋಷ್ ಸಿಂಗ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಇಂತಹ ಸಣ್ಣ ಕಾರಣಕ್ಕೆ ಡೈವೋರ್ಸ್ ನೀಡಲು ಸಾಧ್ಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದ ಸಂತೋಷ್ ಸಿಂಗ್ ಹೈಕೋರ್ಟ್​ ಮೊರೆ ಹೋಗಿದ್ದರು. ಇದೊಂದು ಗಂಭೀರವಾದ ಪ್ರಕರಣ ಹಾಗೂ ಕಾರಣವೆಂದು ಪರಿಗಣಿಸಿದ ಹೈಕೋರ್ಟ್​ ವಿಚ್ಛೇದನಕ್ಕೆ ಅಸ್ತು ಎಂದಿದೆ. ಹೆಂಡತಿ ತನ್ನ ಗಂಡನೊಂದಿಗೆ 11 ವರ್ಷದಿಂದ ದೂರವೇ ಇರುವುದರಿಂದ ಈ ಮದುವೆಯನ್ನು ಅಮಾನ್ಯಗೊಳಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ: Shocking News: ಮೊದಲ ರಾತ್ರಿಯಲ್ಲೇ ಹೆಂಡತಿ ಗರ್ಭಿಣಿ ಎಂದು ಗೊತ್ತಾಗಿ ಗಂಡ ಶಾಕ್!

Shocking News: ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

Published On - 9:28 pm, Wed, 5 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್