AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮೊದಲ ರಾತ್ರಿಯಲ್ಲೇ ಹೆಂಡತಿ ಗರ್ಭಿಣಿ ಎಂದು ಗೊತ್ತಾಗಿ ಗಂಡ ಶಾಕ್!

Wedding Story: ಮದುವೆಯ ಮೊದಲ ರಾತ್ರಿಯಲ್ಲೇ ತನ್ನ ಹೆಂಡತಿ 5 ತಿಂಗಳ ಗರ್ಭಿಣಿ ಎಂಬ ವಿಷಯ ಗೊತ್ತಾಗಿ ಗಂಡ ಆಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

Shocking News: ಮೊದಲ ರಾತ್ರಿಯಲ್ಲೇ ಹೆಂಡತಿ ಗರ್ಭಿಣಿ ಎಂದು ಗೊತ್ತಾಗಿ ಗಂಡ ಶಾಕ್!
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Jan 01, 2022 | 6:59 PM

Share

ನವದಂಪತಿಗಳ ಪಾಲಿಗೆ ಮೊದಲ ರಾತ್ರಿಯೆಂಬುದು ಜೀವನಪೂರ್ತಿ ನೆನಪಿರುವ ಒಂದು ಮಧುರವಾದ ಕ್ಷಣ. ಆದರೆ, ಆ ಮೊದಲ ರಾತ್ರಿಯೇ ಉತ್ತರ ಪ್ರದೇಶದ ದಂಪತಿಯ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಹೆಂಡತಿಯೊಂದಿಗೆ ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯ ತಿಳಿದರೆ ಏನಾಗಬಹುದು?! ಈ ವಿಷಯ ಗೊತ್ತಾಗುತ್ತಿದ್ದಂತೆ ರಸಮಯವಾಗಿರಬೇಕಾಗಿದ್ದ ಆ ಸಮಯ ಕಹಿಸಮಯವಾಗಿ ಇಡೀ ಕುಟುಂಬದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು.

ಮದುವೆಯ ಮೊದಲ ರಾತ್ರಿಯಲ್ಲೇ ತನ್ನ ಹೆಂಡತಿ 5 ತಿಂಗಳ ಗರ್ಭಿಣಿ ಎಂಬ ವಿಷಯ ಗೊತ್ತಾಗಿ ಗಂಡ ಆಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಈ ವಿಷಯವನ್ನು ಆತ ಕುಟುಂಬಸ್ಥರಿಗೂ ತಿಳಿಸಿದ್ದು, ಗಲಾಟೆ ಮಾಡಿದ ಆತನ ಕುಟುಂಬದವರ ವಿರುದ್ಧ ವಧುವಿನ ಕಡೆಯವರು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಹೆಂಡತಿ ಬೇರೆಯವರ ಮಗುವಿಗೆ ತಾಯಿಯಾಗುತ್ತಿದ್ದಾಳೆ ಎಂದು ತಿಳಿದ ನಂತರವೂ ಆ ವ್ಯಕ್ತಿ ಸುಮ್ಮನಾಗಿದ್ದಾನೆ. ನಂತರ ಹುಡುಗಿಯ ಮನೆಯವರೇ ಆತನಿಗೆ ಬ್ಲಾಕ್​ಮೇಲ್ ಮಾಡಲು ಶುರುಮಾಡಿದ್ದು, 10 ಲಕ್ಷ ರೂ. ಕೊಡದಿದ್ದರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹೀಗಾಗಿ, ಬೇರೆ ದಾರಿ ಕಾಣದೆ ಆ ವ್ಯಕ್ತಿ ತನ್ನ ಹೆಂಡತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಮದುವೆಯ ರಾತ್ರಿಯೇ ವಧುವಿಗೆ ಜೋರಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದರು. ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇದ್ದರೂ ಆಕೆ ಯಾರಿಗೂ ಮೊದಲೇ ಈ ವಿಷಯವನ್ನು ಹೇಳಿರಲಿಲ್ಲ.

ಈ ವಿಷಯವನ್ನು ಆ ವಧುವಿನ ಮನೆಯವರಿಗೆ ಹೇಳಿದಾಗ ಅವರು ತಮ್ಮ ಮಗಳು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ನೀವೇ ಬೇಕೆಂದೇ ಸುಳ್ಳು ಹೇಳುತ್ತಿದ್ದೀರಿ ಎಂದು ವಾದಿಸಿದರು. ಅಷ್ಟೇ ಅಲ್ಲದೆ, ಸುಳ್ಳು ಕೇಸ್ ಹಾಕಿ ಜೈಲಿಗಟ್ಟುವ ಬೆದರಿಕೆಯೊಡ್ಡಿದರು. ಬಳಿಕ ಪೊಲೀಸರ ಮಧ್ಯ ಪ್ರವೇಶದ ನಂತರ ಆ ಯುವತಿ ತನಗೆ ಬೇರೊಬ್ಬನೊಂದಿಗೆ ಸಂಬಂಧವಿದ್ದು, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!

Shocking News: ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್