‘ಟಿಪ್​ ಟಿಪ್​ ಬರ್ಸಾ ಪಾನಿ’ ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?

ಬಾಲಿವುಡ್​ನ ಹಿಟ್​ ಸಾಂಗ್​ ಟಿಪ್​ ಟಿಪ್​  ಬರ್ಸಾ ಪಾನಿ ಹಾಡಿಗೆ ವ್ಯಕ್ತಿಯೊಬ್ಬ ಮೈಮರೆತು ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಅಸೆಂಬ್ಲಿಯ ಸಚಿವ ಅಮೀರ್ ಲಿಯಾಕತ್​​ ಹುಸೇನ್​ ಎನ್ನಲಾಗಿದೆ. 

'ಟಿಪ್​ ಟಿಪ್​ ಬರ್ಸಾ ಪಾನಿ' ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?
Follow us
TV9 Web
| Updated By: Pavitra Bhat Jigalemane

Updated on: Jan 07, 2022 | 10:32 AM

ಬಾಲಿವುಡ್​ನ  ಹಾಡಿಗೆ ವ್ಯಕ್ತಿಯೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.  ಬಾಲಿವುಡ್​ನ ಮೊಹ್ರಾ ಚಿತ್ರದ ಹಿಟ್​ ಸಾಂಗ್​ ಟಿಪ್​ ಟಿಪ್​  ಬರ್ಸಾ ಪಾನಿ ಹಾಡಿಗೆ ವ್ಯಕ್ತಿಯೊಬ್ಬ ಮೈಮರೆತು ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಅಸೆಂಬ್ಲಿಯ ಸದಸ್ಯ ಅಮೀರ್ ಲಿಯಾಕತ್​​ ಹುಸೇನ್​ ಎನ್ನಲಾಗಿದೆ.  ಅಮೀರ್​ ಲಿಯಾಕತ್​  ಇಮ್ರಾನ್ ಖಾನ್​ ನೇತೃತ್ವದ  ಪಾಕಿಸ್ತಾನ್​ ತೆಹ್ರಿಕ್​ ಇ ಇನ್ಸಾಫ್​ ಪಕ್ಷದ ಸದಸ್ಯರಾಗಿದ್ದಾರೆ.  ಹಿಂದಿ ಹಾಡಿಗೆ ಡ್ಯಾನ್ಸ್​ ಮಾಡುತ್ತಿದ್ದ ವ್ಯಕ್ತಿಯನ್ನು ಅಮೀರ್​ ಎಂದುಕೊಂಡು ಪತ್ರಕರ್ತರೊಬ್ಬರು ವಿಡಿಯೋ ಶೇರ್​ ಮಾಡಿದ್ದರು. ಅವರ ಬಳಿಕ ವಿಡಿಯೋವನ್ನು ಸಾವಿರಾರು ಮಂದಿ ರೀ ಶೇರ್​ ಮಾಡಿದ್ದರು. ಹೀಗಾಗಿ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಆದರೆ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿರುವ ವ್ಯಕ್ತಿ ಡ್ಯಾನ್ಸ್ ಕೊರಿಯೋಗ್ರಾಫರ್​ ಶೊಯೆಬ್​ ಶಕೂರ್​ ಎಂದು ಗುರುತಿಸಲಾಗಿದೆ. ವಿಡಿಯೋವನ್ನು ಪಾಕಿಸ್ತಾನದ ಫೋಟೋಗ್ರಫಿ ಸ್ಟುಡಿಯೋವೊಂದು ಫೇಸ್ಬುಕ್​ನಲ್ಲಿ ಹಂಚಿಕೊಂಡಿತ್ತು. ಬಳಿಕ ಸ್ವತಃ ಶೊಯೆಬ್​ ಶಕೂರ್ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆದರೆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಶೊಯೆಬ್​ ಶಕೂರ್ ಎಂದು ಪತ್ರಕರ್ತರೊಬ್ಬರು ಬರೆದು ಟ್ವೀಟ್​ ಮಾಡಿದ್ದರು.  ವಿಡಿಯೋವನ್ನು ಮೊದಲು ಅಮೀರ್​ ಲಿಯಾಕತ್​ ಹೆಸರಿನಲ್ಲಿ ಹಂಚಿಕೊಂಡ ಪತ್ರಕರ್ತ ಅಮನ್​ ಮಲ್ಲಿಕ್​ ತಪ್ಪಾದ ಮಾಹಿತಿಯನ್ನು ಶೇರ್​ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

ಪಾಕಿಸ್ತಾನಿ ಸಚಿವರೆನ್ನುವ  ನಕಲಿ ವಿಡಿಯೋ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ  ಫವಾದ್​ ಚೌದರಿ ಅವರು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಇಳಿಕೆಯಾಗಿದೆ ಎನ್ನುವಾಗ ಗೊಂದಲವಾಗಿ ಊಪ್ಸ್​ ಎಂದಿದ್ದಾರೆ ಎನ್ನುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಅಮೀರ್​ ಲಿಯಾಕತ್ ಹಿಂದಿ ಹಾಡಿಗೆ​ ನೃತ್ಯ ಮಾಡುತ್ತಿದ್ದಾರೆ ಎನ್ನುವ ನಕಲಿ ವೀಡಿಯೋ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ವಿಡಿಯೋ 8 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಇದನ್ನೂ ಓದಿ:

ವ್ಯಾಕ್ಸಿನೇಷನ್​ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್​ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ