Goldfish: ಗೋಲ್ಡ್ ಫಿಶ್ಗಳಿಗೆ ವಾಹನ ಚಲಾಯಿಸುವ ತರಬೇತಿ ನೀಡಿದ ವಿಜ್ಞಾನಿಗಳು
6 ಗೋಲ್ಡ್ ಫೀಶ್ಗಳಿಗೆ ವಾಹನ ಚಲಾಯಿಸುವ ತರಬೇತಿ ನೀಡಿದ್ದಾರೆ. ಮೀನುಗಳು ವಾಹನವನ್ನು ಚಲಾಯಿಸುವ ವೀಡಿಯೋವನ್ನು ವಿಜ್ಞಾನಿಗಳ ತಂಡ ಹಂಚಿಕೊಂಡಿದ್ದು ಜಗತ್ತಿನಾದ್ಯಂತ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಸ್ರೆಲ್ನ ವಿಜ್ಞಾನಿಗಳ ತಂಡವು ಗೋಲ್ಡ್ ಫಿಶ್ಗೆ ವಾಹನ ಚಲಾಯಿಸುವ ತರಬೇತಿ ನೀಡಿದ್ದಾರೆ. ಬೆನ್ ಗುರಿಯನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಕೋಣೆಯ ಒಳಗೆ ಫಿಶ್ ಆಪರೇಟೆಡ್ ವೆಹಿಕಲ್ ಅನ್ನು ನಿರ್ಮಿಸಿದ್ದು ಅದನ್ನು ಚಲಾಯಿಸಲು ಗೋಲ್ಡ್ ಫಿಶ್ಗೆ ತರಬೇತಿ ನೀಡಿದ್ದಾರೆ. ಒಟ್ಟು 6 ಗೋಲ್ಡ್ ಫೀಶ್ಗಳಿಗೆ ವಾಹನ ಚಲಾಯಿಸುವ ತರಬೇತಿ ನೀಡಿದ್ದಾರೆ. ಮೀನುಗಳು ವಾಹನವನ್ನು ಚಲಾಯಿಸುವ ವೀಡಿಯೋವನ್ನು ವಿಜ್ಞಾನಿಗಳ ತಂಡ ಹಂಚಿಕೊಂಡಿದ್ದು ಜಗತ್ತಿನಾದ್ಯಂತ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಜ್ಞಾನಿಗಳು ಬಿಹೇವಿಯರಲ್ ಬ್ರೈನ್ ರಿಸರ್ಚ್ ಜರ್ನಲ್ನಲ್ಲಿ ಮೀನುಗಳು ಕೂಡ ವಾಹನವನ್ನು ನಿಯಂತ್ರಿಸುವುದನ್ನು ಕಲಿಯಬಹುದು ಎನ್ನುವ ಬಗ್ಗೆ ನಡೆಸಿದ ಸಂಶೋಧನೆಯ ವರದಿಯನ್ನು ಪ್ರಕಟಿಸಿದ್ದಾರೆ. ಮೀನು ವಾಹನ ಚಲಾಯಿಸುತ್ತಿರುವ ವಿಡಿಯೋದಲ್ಲಿ ಮೋಟಾರ್ ಅಳವಡಿಸಿದ ನಾಲ್ಕು ಚಕ್ರದ ವಾಹನವನ್ನು ಕಾಣಬಹುದು, ಚಕ್ರದ ಮೇಲೆ ಗ್ಲಾಸ್ನ ಟ್ಯಾಂಕನ್ನು ನಿಲ್ಲಿಸಿದ್ದಾರೆ. ಅದರಲ್ಲಿ ನೀರನ್ನು ಹಾಕಲಾಗಿದೆ. ನೀರಿನೊಳಗೆ ಗೋಲ್ಡ್ ಫೀಶ್ಗಳನ್ನು ಬಿಡಲಾಗಿದೆ. ಅದರಲ್ಲಿರುವ ಮೀನುಗಳು ತಮ್ಮ ಬಾಯಿಯ ಮೂಲಕ ಗ್ಲಾಸ್ ಟ್ಯಾಂಕ್ಅನ್ನು ಮುಟ್ಟುತ್ತವೆ. ಆಗ ವಾಹನವು ಚಲಿಸುತ್ತದೆ.
Hey @TheEllenShow, we wanted to say that BGU can help Dory. Our interdisciplinary researchers’ team (@OhadBenShahar, @ronen_segev) discovered that a goldfish’s navigational ability supersedes its watery environs, even if they were interrupted in the middle. See it in the video. pic.twitter.com/knEPrEWeov
— Ben-Gurion University of the Negev (@bengurionu) January 5, 2022
ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮರವಾವನ್ನು ಅಳವಡಿಸಲಾಗಿದೆ. ಮೀನುಗಳು ಮೂರರಿಂದ ನಾಲ್ಕು ಮೀಟರ್ ಕೋಣೆಯಲ್ಲಿ ನ್ಯಾವಿಗೇಟ್ ಮಾಡುವುದನ್ನು ಮೊದಲು ಕಲಿತಿವೆ. ನಂತರ ಕೆಲವು ದಿನಗಳ ತರಬೇತಿಯ ಬಳಿಕ ಮೀನುಗಳು ಯಶಸ್ವಿಯಾಗಿ ವಾಹನವನ್ನು ಸರಿಯಾದ ಮಾರ್ಗದಲ್ಲಿ ಚಲಾಯಿಸುವುದನ್ನು ಕಲಿತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಗೋಲ್ಡ್ ಫೀಶ್ಗಳ ವಾಹನ ಚಲಾವಣೆಯನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಇದನ್ನೂ ಓದಿ:
ಪುಷ್ಪ ಚಿತ್ರದ ‘ಓ ಅಂಟಾವಾ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ಡ್ಯಾಡ್: ವಿಡಿಯೋ ವೈರಲ್