Viral Video: ಬೀದಿ ಪಾಲಾಗಿ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ. ಇದರಲ್ಲಿ ನಾಯಿಯೊಂದು ಮನೆಯಿಲ್ಲದೆ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮುದ್ದಾಡುವುದನ್ನು ಕಾಣಬಹುದು.

Viral Video: ಬೀದಿ ಪಾಲಾಗಿ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್
ಫುಟ್​​ಪಾತ್​​ನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 07, 2022 | 3:06 PM

ನವದೆಹಲಿ: ನಾಯಿಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂಬುದು ನಿಜವಾಗಿಯೂ ಸತ್ಯವಾದ ಮಾತು. ಅದೇ ಕಾರಣಕ್ಕೆ ನಿಯತ್ತಿನ ಪ್ರಾಣಿಯಾದ ನಾಯಿ ಇಂದಿಗೂ ಜನರ ಫೇವರೆಟ್ ಸಾಕುಪ್ರಾಣಿಯಾಗಿದೆ. ಮಾತನಾಡಲು ಬರುವುದಿಲ್ಲ ಎನ್ನುವುದನ್ನು ಬಿಟ್ಟರೆ ನಾಯಿ ಮನುಷ್ಯನ ಎಲ್ಲ ಭಾವನೆಗಳಿಗೂ ಸ್ಪಂದಿಸುತ್ತದೆ, ಬೇಸರವಾದಾಗ ಆತನನ್ನು ಸಾಂತ್ವನಗೊಳಿಸುತ್ತದೆ, ಖುಷಿಯಾಗಿದ್ದಾಗ ಆತನೊಂದಿಗೆ ಸಂಭ್ರಮಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮ್ಮ ಮನೆಯಲ್ಲೂ ಒಂದು ನಾಯಿ ಇರಬೇಕು ಎನಿಸುವುದರಲ್ಲಿ ಅನುಮಾನವೇ ಇಲ್ಲ.

ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ. ಇದರಲ್ಲಿ ನಾಯಿಯೊಂದು ಮನೆಯಿಲ್ಲದೆ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮುದ್ದಾಡುವುದನ್ನು ಕಾಣಬಹುದು. ಮನೆಯಿಲ್ಲದೆ ಬೀದಿಗೆ ಬಿದ್ದಿದ್ದ ವೃದ್ಧ ನಿರಾಶ್ರಿತ ವ್ಯಕ್ತಿಯನ್ನು ನಾಯಿಯೊಂದು ತಬ್ಬಿಕೊಳ್ಳುತ್ತಿರುವ ವೀಡಿಯೊ ಕ್ಲಿಪ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಆನ್​ಲೈನ್​ನಲ್ಲಿ ಸಾವಿರಾರು ಜನರನ್ನು ಭಾವುಕರನ್ನಾಗಿಸಿದೆ.

ವೈರಲ್ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬೀದಿಗಳಲ್ಲಿ ಫುಟ್​ಪಾತ್​ನಲ್ಲಿ ಕುಳಿತಿರುವುದನ್ನು ಕಾಣಬಹುದು. ನಾಯಿಯೊಂದು ಆತನ ಬಳಿ ಬಂದು ಆ ಅಪರಿಚಿತ ವ್ಯಕ್ತಿಯನ್ನು ತಬ್ಬಿಕೊಂಡಿದೆ. ಇದರಿಂದ ಆ ವ್ಯಕ್ತಿ ಕೂಡ ಆಶ್ಚರ್ಯಗೊಂಡಿದ್ದಾನೆ. ತನ್ನನ್ನು ಅಪ್ಪಿಕೊಂಡ ನಾಯಿಯನ್ನು ಆತನೂ ಪುನಃ ತಬ್ಬಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2021ರ ಡಿಸೆಂಬರ್ 30ರಂದು ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಅವರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ದಿನಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರಸ್ತುತ, ಈ ವಿಡಿಯೋ ಕ್ಲಿಪ್ 5 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಈ ವಿಡಿಯೋಗೆ ಸಾವಿರಾರು ಹೃದಯಸ್ಪರ್ಶಿ ಕಾಮೆಂಟ್‌ಗಳು ಮತ್ತು ಲೈಕ್​ಗಳು ಬಂದಿವೆ.

ಇದನ್ನೂ ಓದಿ: Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

Published On - 3:05 pm, Fri, 7 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್