Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

Shocking Video: ಎಲ್ಲರೂ ಬೆಕ್ಕು, ನಾಯಿ, ಹಸು, ಕೋಳಿ, ಕುರಿಗಳನ್ನು ಸಾಕಿದರೆ ಕುವೈತ್​ನ ಮಹಿಳೆ ತನ್ನ ಮನೆಯಲ್ಲಿ ಹೆಣ್ಣು ಸಿಂಹದ ಮರಿಯೊಂದನ್ನು ಸಾಕಿದ್ದಳು!

Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್
ಹೆಣ್ಣು ಸಿಂಹವನ್ನು ಕಂಕುಳಲ್ಲಿ ಹೊತ್ತು ನಡೆದ ಮಹಿಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 05, 2022 | 1:52 PM

ನಿಮ್ಮ ಮನೆಯಲ್ಲಿ ಸಾಕುಪ್ರಾಣಿ ಇದೆಯೇ? ನಿಮ್ಮ ಮುದ್ದಿನ ನಾಯಿ ಅಥವಾ ಬೆಕ್ಕು, ಹಸುಗಳು ನೀವು ಹೇಳಿದ ಮಾತನ್ನು ಕೇಳುವುದಿಲ್ಲವೇ? ನಿಮ್ಮ ಮನೆಯ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ, ನಿಮಗೆ ದಿನವೂ ತಲೆನೋವು ತಂದಿಡುತ್ತಾವೆಯೇ? ನಿಮ್ಮ ಉತ್ತರ ಹೌದು ಎಂದಾದರೆ ಕುವೈತ್​ನ ಈ ಮಹಿಳೆಯ ಕಷ್ಟ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಸಿಂಹಿಣಿಯನ್ನು ಹೊತ್ತಿರುವ ದೃಶ್ಯವನ್ನು ನೋಡಬಹುದು. ಈ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಅಷ್ಟಕ್ಕೂ ಆಕೆ ಸಿಂಹವನ್ನು ತೋಳಲ್ಲಿ ಹೊತ್ತುಕೊಂಡು ರಸ್ತೆಯಲ್ಲಿ ನಡೆದಿದ್ದೇಕೆ?

ಎಲ್ಲರೂ ಬೆಕ್ಕು, ನಾಯಿ, ಹಸು, ಕೋಳಿ, ಕುರಿಗಳನ್ನು ಸಾಕಿದರೆ ಕುವೈತ್​ನ ಮಹಿಳೆ ತನ್ನ ಮನೆಯಲ್ಲಿ ಹೆಣ್ಣು ಸಿಂಹದ ಮರಿಯೊಂದನ್ನು ಸಾಕಿದ್ದಳು! ಆ ಸಿಂಹಿಣಿ ಮನೆಯಿಂದ ತಪ್ಪಿಸಿಕೊಂಡು ಹೋಗಿತ್ತು. ಕುವೈತ್ ನಗರದ ದಕ್ಷಿಣ ಭಾಗದಲ್ಲಿರುವ ಸಬಾಹಿಯಾ ಪ್ರದೇಶದಲ್ಲಿ ಸಿಂಹಿಣಿ ತಪ್ಪಿಸಿಕೊಂಡ ಘಟನೆ ಭಾನುವಾರ ನಡೆದಿತ್ತು. ಮನೆಯಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಸಿಂಹವನ್ನು ನೋಡಿ ಜನರು ಗಾಬರಿಗೊಂಡಿದ್ದರು. ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದ ಆ ಹೆಣ್ಣು ಸಿಂಹವನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಆಕೆ ಮನೆಗೆ ಹೋಗಿದ್ದಾಳೆ.

ಅರ್ಲಾಂಗ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಂಹ ಆ ಮಹಿಳೆಯ ತೋಳುಗಳಿಂದ ಕೆಳಗೆ ಹಾರಲು ಹೆಣಗಾಡುತ್ತಿದೆ. ಕುವೈತ್ ಪತ್ರಿಕೆ ಅಲ್-ಅನ್ಬಾ ಪ್ರಕಾರ, ಸಿಂಹಿಣಿಯನ್ನು ವೀಡಿಯೊದಲ್ಲಿ ಮಹಿಳೆ ಮತ್ತು ಆಕೆಯ ತಂದೆ ಸಾಕುಪ್ರಾಣಿಯಾಗಿ ಇಟ್ಟುಕೊಂಡಿದ್ದರು. ಆ ಸಿಂಹ ಆಕಸ್ಮಿಕವಾಗಿ ತಪ್ಪಿಸಿಕೊಂಡು ಬೀದಿಗಳಲ್ಲಿ ಅಲೆದಾಡುತ್ತಿದ್ದಾಗ ನಿವಾಸಿಗಳನ್ನು ಭಯಭೀತಗೊಳಿಸಿತ್ತು. ಬಳಿಕ ಅದನ್ನು ಆ ಮಹಿಳೆ ತನ್ನ ಮನೆಗೆ ವಾಪಾಸ್ ತಂದಿದ್ದಾರೆ.

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ