ಓಮಿಕ್ರಾನ್ ಬಳಿಕ ಕೊರೋನಾ ರೂಪಾಂತರಕ್ಕೆ ಯಾವ ಹೆಸರಿಡಬಹುದು? ಗೂಗಲ್ನಲ್ಲಿ ಜೋರಾದ ಹುಡುಕಾಟ
ಗ್ರೀಕ್ ವರ್ಣಮಾಲೆಯಿಂದಲೇ ಕೋವಿಡ್ 19 ರೂಪಾಂತರಿಗಳಿಗೆ ಹೆಸರಿಡಲಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಓಮಿಕ್ರಾನ್ ಬಂದಾಗಿನಿಂದ ಬಳಕೆದಾರರು ಗೂಗಲ್ನಲ್ಲಿ ಓಮಿಕ್ರಾನ್ ಪದದ ಅರ್ಥವನ್ನು ಹುಡುಕುತ್ತಿದ್ದಾರೆ.
ಜಗತ್ತಿನಾದ್ಯಂತ ಈಗ ಓಮಿಕ್ರಾನ್ ವೈರಸ್ನದ್ದೇ ಸದ್ದು. ಕೋರೋನಾ ರೂಪಾಂತರಿ ಓಮಿಕ್ರಾನ್ ಜನರ ದೇಹ ಹೊಕ್ಕಿ ಜಗತ್ತಿನೆಲ್ಲಡೆ ಆತಂಕ ಸೃಷ್ಟಿಸಿದೆ. ಹಾಗಾದರೆ ಈ ವೈರಸ್ಗೆ ಓಮಿಕ್ರಾನ್ ಎನ್ನುವ ಪದ ಬಂದಿದ್ದಾರೂ ಎಲ್ಲಿಂದ ಎನ್ನುವ ಪ್ರಶ್ನೆ ಮೂಡುತ್ತದೆ. ಕೊರೋನಾ ಅಥವಾ ಕೋವಿಡ್19 ಎನ್ನುವ ಪದವನ್ನು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಬಳಕೆಗೆ ತಂದಿದ್ದರು. ಇದೀಗ ಕೋವಿಡ್ ರೂಪಾಂತರಿಗೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಓಮಿಕ್ರಾನ್ ಎಂದು ಹೆಸರಿಟಿದ್ದಾರೆ. ಹಾಗಾದರೆ ಮುಂದಿನ ರೂಪಾಂತರಿಗೆ ಯಾವ ಹೆಸರಿಡಬಹುದು ಎನ್ನುವ ಪ್ರಶ್ನೆ ಜೋರಾಗಿದೆ.
ಈ ಓಮಿಕ್ರಾನ್ ಎನ್ನುವ ಶಬ್ದವು ಮಧ್ಯ ಇಂಗ್ಲೀಷ್ ಭಾಷೆಯ ಪದವಾಗಿದೆ. ಗ್ರಿಕ್ ಭಾಷೆಯಲ್ಲಿ ಓ ಮೈಕ್ರಾನ್ ಎನ್ನುವ ಪದದಿಂದ ವೈರಸ್ಗೆ ಹೆಸರಿಡಲಾಗಿದೆ. ಇದರ ಅರ್ಥ ಸಣ್ಣ ಓ ಎಂದರ್ಥ. ಇದು ಗ್ರೀಕ್ ವರ್ಣ ಮಾಲೆಯ 15 ನೇ ಅಕ್ಷರವಾಗಿದೆ. ಯುಎಸ್ ಮತ್ತು ಯುಕೆಗಳಲ್ಲಿ ಇದನ್ನು ಬೇರೆ ಬೇರೆಯಾಗಿ ಉಚ್ಚರಿಸಲಾಗುತ್ತದೆ.
ಗ್ರೀಕ್ ವರ್ಣಮಾಲೆಯಿಂದಲೇ ಕೋವಿಡ್ 19 ರೂಪಾಂತರಿಗಳಿಗೆ ಹೆಸರಿಡಲಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಓಮಿಕ್ರಾನ್ ಬಂದಾಗಿನಿಂದ ಬಳಕೆದಾರರು ಗೂಗಲ್ನಲ್ಲಿ ಓಮಿಕ್ರಾನ್ ಪದದ ಅರ್ಥವನ್ನು ಹುಡುಕುತ್ತಿದ್ದಾರೆ. ಜತೆಗೆ 2022ರಲ್ಲಿ ಬರುವ ರೂಪಾಂತರಿ ವೈರಸ್ಗೆ ಯಾವ ಹೆಸರಿಡಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಈಗಾಗಲೇ ಗ್ರೀಕ್ ವರ್ಣಮಾಲೆಯಲ್ಲಿರುವ ಅಲ್ಫಾ, ಬೀಟಾ,ಗ್ಯಾಮಾ, ಡೆಲ್ಟಾ ಹಾಗೂ ಓಮಿಕ್ರಾನ್ಗಳನ್ನು ಬಳಸಲಾಗಿದೆ. ಇನ್ನು ಮುಂದಿನ ವೈರಸ್ಗೆ ‘ಪೈ’ ಎಂದು ಹೆಸರಿಡಬಹುದು ಎಂದು ಬಳಕೆದಾರರು ಅಂದಾಜಿಸಿದ್ದಾರೆ. ಗಣಿತದಲ್ಲಿ ಬಳಸುವ ಪೈ ಅಕ್ಷರವು ಕೊರೋನಾ ರೂಪಾಂತರಿಯ ಹೆಸರಾಗಬಹುದು ಎನ್ನಲಾಗಿದೆ. NU ಮತ್ತು Xi ಅನ್ನು ಕೊರೋನಾ ರೂಪಾಂತರಿ ಹೆಸರಿನ ಪಟ್ಟಿಯಿಂದ ಕೈಬಿಡಲಾಗಿದೆ. ಏಕೆಂದರೆ NU ಉಚ್ಚಾರಿಸುವಾಗ new ಎಂದು ಕೇಳಿಸುತ್ತದೆ. ಹಾಗೂ Xi ಚೀನಾದ ಕ್ಸಿ ಜಿನ್ಪಿಂಗ್ ಅವರ ಹೆಸರನ್ನು ಹೋಲುತ್ತದೆ ಎಂದು ಸಿಎನ್ಎನ್ ವರದಿ ಮಾಡಿದೆ. ಅಲ್ಲದೆ ಇನ್ನೊಂದು ಪ್ರಮುಖ ಸಂಗತಿಯೆಂದರೆ ಗ್ರೀಕ್ ಅಕ್ಷರಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ ಎಂದು ಹೇಳಲಾಗಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ವೈರಸ್ ತಳಿಗಳಿಗೆ ಗ್ರೀಕ್ ವರ್ಣಮಾಲೆಯಿಂದಲೇ ಪದಗಳನ್ನು ಆರಸಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಈಗಾಗಲೇ ಫ್ರಾನ್ಸ್ ವಿಜ್ಞಾನಿಗಳು IHU B.1.640.2 ರೂಪಾಂತರಿಯನ್ನು ಸಂಶೋಧಿಸಿದ್ದಾರೆ. ಆದರೆ ಅದಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಈ ಕಾರಣದಿಂದ ಹೊಸ ರೂಪಾಂತರಿಗೆ ಯಾವ ಹೆಸರು ಬರಬಹುದು ಎನ್ನುವ ಕುತೂಹಲ ಮೂಡಿದೆ.
Published On - 12:09 pm, Wed, 5 January 22