ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್
ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಾಣಿಗಳ ವೀಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಬೆಕ್ಕು ನಾಯಿಗಳ ಕ್ಯೂಟ್ ವೀಡಿಯೋ ನೆಟ್ಟಿಗರ ಮನ ಸೆಳೆದು ವೈರಲ್ ಆಗುತ್ತವೆ. ಇದೀಗ ರೆಡಿಟ್ನಲ್ಲಿ ಬೆಕ್ಕು ಮತ್ತು ನಾಯಿಯ ವೀಡಿಯೋವೊಂದು ವೈರಲ್ ಆಗಿದೆ. ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಯುಟ್ಯೂಬ್ನಲ್ಲೂ ಈ ಬೆಕ್ಕು, ನಾಯಿಯ ವೀಡಿಯೋ ಸಖತ್ ವೈರಲ್ ಅಗಿದೆ.
ವೀಡಿಯೋದಲ್ಲಿ ಬೆಕ್ಕು ಕುಳಿತಿರುವುದನ್ನು ಕಾಣಬಹುದು. ಬಳಿಕ ಅದರ ಎದುರು ಮೂರ್ನಾಲ್ಕು ನಾಯಿಮರಿಗಳು ಬರುತ್ತವೆ, ಆಗ ಬೆಕ್ಕು ತದೇಕಚಿತ್ತದಿಂದ ನಾಯಿಯ ಮರಿಗಳನ್ನು ನೋಡುತ್ತದೆ. ಒಂದು ನಾಯಿ ಮರಿ ಬೆಕ್ಕಿನ ಹತ್ತಿರ ಹೋಗಿ ಅದನ್ನು ಕಾಲಿನಿಂದ ಮುಟ್ಟುತ್ತದೆ. ಆಗ ಬೆಕ್ಕು ಹೆದರಿಕೊಂಡು ಮುದುಡಿ ಕುಳಿತುಕೊಳ್ಳುತ್ತದೆ. ನಾಯಿ ಮರಿ ಮತ್ತೆ ಮತ್ತೆ ಬೆಕ್ಕಿನ ಹಿಂದೆಯೇ ಹೋಗುತ್ತದೆ. ಆಗ ಬೆಕ್ಕು ತಪ್ಪಿಸಿಕೊಂಡು ಮುಂದೆ ನಡೆದುಕೊಂಡು ಹೋಗುತ್ತದೆ. ಈ ಕ್ಯೂಟ್ ವೀಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಬೆಕ್ಕಿನ ಮುಗ್ಧತೆಗೆ ಜನರು ಮನಸೋತಿದ್ದಾರೆ.
ಈ ಹಿಂದೆ ಬೆಕ್ಕು ಬ್ರೆಡ್ ರೋಸ್ಟರ್ ಯಂತ್ರದಿಂದ ಬ್ರೆಡ್ ಹಾರಿದ್ದಕ್ಕೆ ಗಾಬರಿಗೊಂಡು ಅಡುಗೆ ಮನೆಯೊಂದರಲ್ಲಿ ಜಾರಿ ಬಿದ್ದ ವೀಡಿಯೋ ವೈರಲ್ ಆಗಿತ್ತು. ಇದೀಗ ಮೊದಲ ಬಾರಿಗೆ ನಾಯಿಮರಿಗಳನ್ನು ಕಂಡು ಅಚ್ಚರಿಯಿಂದ ನೋಡಿದ ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!