Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

Guinness World Record: ಪಂಜಾಬ್​ನ ಮಹಿಳೆಯೊಬ್ಬರು ತಮ್ಮ ಸದೃಢವಾದ ಕೂದಲಿನಿಂದ ಬರೋಬ್ಬರಿ 12,000 ಕೆಜಿ ತೂಕದ ಡಬಲ್ ಡಕರ್ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ.

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!
ಕೂದಲಿನಿಂದ ಬಸ್ ಎಳೆದ ಮಹಿಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 05, 2022 | 3:09 PM

ಕೂದಲು ದಟ್ಟವಾಗಿ, ಸದೃಢವಾಗಿ ಬೆಳೆಯಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ? ಕೂದಲ ಬಗ್ಗೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರಿಗೆ ಕೂದಲೇ ಅವರ ಸೌಂದರ್ಯಕ್ಕೆ ಕಳಶವಿದ್ದಂತೆ. ಆದರೆ, ಪಂಜಾಬ್​ನ ಮಹಿಳೆಯೊಬ್ಬರು ತಮ್ಮ ಸದೃಢವಾದ ಕೂದಲಿನಿಂದ ಬರೋಬ್ಬರಿ 12,000 ಕೆಜಿ ತೂಕದ ಡಬಲ್ ಡಕರ್ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ. ಕೈಗಳನ್ನು ಬಳಸದೆ ಕೇವಲ ಕೂದಲಿನಿಂದ ಬಸ್ ಎಳೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಆ ಮಹಿಳೆಯ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್​ ರೆಕಾರ್ಡ್​ ಇನ್‌ಸ್ಟಾಗ್ರಾಮ್​ ಪೇಜ್​ನಲ್ಲಿ ಶೇರ್ ಮಾಡಲಾಗಿದೆ.

ಈ ರೀತಿಯ ಇನ್ನೂ ಹಲವು ಮನಮೋಹಕ ವಿಶ್ವ ದಾಖಲೆಗಳ ವಿಡಿಯೋಗಳನ್ನು ಈ ಗಿನ್ನೆಸ್ ರೆಕಾರ್ಡ್​ ಇನ್​ಸ್ಟಾಗ್ರಾಂ ಪೇಜಿನಲ್ಲಿ ಶೇರ್ ಮಾಡಲಾಗಿದೆ. ಅವರ ಇತ್ತೀಚಿನ ವೀಡಿಯೊದಲ್ಲಿ ಪಂಜಾಬ್ ಮೂಲದ ಮಹಿಳೆಯೊಬ್ಬರು ಅದ್ಭುತ ಸಾಧನೆ ಮಾಡಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಆಶಾ ರಾಣಿ ತಮ್ಮ ಕೂದಲಿನಿಂದ ಭಾರವಾದ ಡಬಲ್ ಡಕರ್ ಬಸ್​ ಅನ್ನು ಎಳೆಯುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

ಇಟಲಿಯ ಮಿಲನ್‌ನಲ್ಲಿರುವ ‘ಲೋ ಶೋ ಡೀ ರೆಕಾರ್ಡ್’ ಸೆಟ್‌ನಲ್ಲಿ 12,000 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ಆಶಾ ಅವರ ಜಡೆಗೆ ಕಟ್ಟಲಾಗಿದೆ. ತಮ್ಮ ಜಡೆಯ ಮೂಲಕ ಆ ಮಹಿಳೆ ಬಸ್​ ಅನ್ನು ಎಳೆದಿದ್ದಾರೆ. ಅವರು ವಿಶ್ವ ದಾಖಲೆ ನಿರ್ಮಿಸಿದ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆಶಾ ರಾಣಿ ಕೂದಲಿನಿಂದ 12,216 ಕೆಜಿ (26931.67 ಪೌಂಡ್) ತೂಕದ ಬಸ್ ಎಳೆದ ದೃಶ್ಯ ಎಂಬ ಶೀರ್ಷಿಕೆಯನ್ನು ನೋಡಬಹುದು. ಗಿನ್ನೆಸ್ ವಿಶ್ವ ದಾಖಲೆಗಳ ಬ್ಲಾಗ್ ಪ್ರಕಾರ, ಆಶಾ ರಾಣಿ 2016ರಲ್ಲಿ ಈ ಸಾಧನೆ ಮಾಡಿದ್ದರು.

ಈ ವೀಡಿಯೊ ವೈರಲ್ ಆಗಿದ್ದು, 55,000ಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ. ಆಶಾ ಅವರ ಅನನ್ಯ ಶಕ್ತಿ ಮತ್ತು ಸಾಮರ್ಥ್ಯವನ್ನು ಶ್ಲಾಘಿಸಿ ಹಲವು ಜನರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಶಾ ರಾಣಿ ವೇಟ್‌ಲಿಫ್ಟಿಂಗ್‌ಗಾಗಿ ಪ್ರಸ್ತುತ ಏಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅವರು ಈ ಹಿಂದೆ 2013ರಲ್ಲಿ ಇಂಗ್ಲೆಂಡ್​ನ ಲೀಸೆಸ್ಟರ್‌ಶೈರ್‌ನಲ್ಲಿ 1,700 ಕೆಜಿ ವಾಹನವನ್ನು ಎರಡೂ ಕಿವಿಗಳಿಂದ ಎಳೆಯುವ ಮೂಲಕ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ: Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

Shocking Video: ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ತುಂಡಾದ ಹಗ್ಗ; 100 ಮೀ.ಎತ್ತರದಿಂದ ಬಿದ್ದ ಇಬ್ಬರು ಮಹಿಳೆಯರು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್