ಬಾಯ್ಫ್ರೆಂಡ್ ತೆಗೆದ ಫೋಟೋ ಪೋಸ್ಟ್ ಮಾಡಿದ ಆಲಿಯಾ; ಕಮೆಂಟ್ ಮಾಡಿದ ಅನುಷ್ಕಾ ಶರ್ಮಾ
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸ ಆರಂಭವಾಗಿ ನಾಲ್ಕು ವರ್ಷ ಕಳೆದಿದೆ. ಈ ಚಿತ್ರದ ಮೂಲಕ ಆಲಿಯಾ ಹಾಗೂ ರಣಬೀರ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ
ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರದಲ್ಲಿ ಈಗ ಯಾವುದೇ ಮುಚ್ಚುಮರೆ ಉಳಿದಿಲ್ಲ. ಇಬ್ಬರೂ ಸಾಕಷ್ಟು ಕಡೆಗಳಲ್ಲಿ ಸುತ್ತಾಟ ನಡೆಸೋಕೆ ತೆರಳುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಹೊಸ ವರ್ಷದ ಆಚರಣೆಗೆ ಬೇರೆ ಕಡೆಗೆ ತೆರಳಿದ್ದರು. ಈ ಫೋಟೋಗಳನ್ನು ಆಲಿಯಾ ಹಂಚಿಕೊಂಡಿದ್ದಾರೆ. ಅಲ್ಲದೆ, ಇದಕ್ಕೆ ಒಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ. ಈ ಫೋಟೋ ಅವರ ಅಭಿಮಾನಿ ಬಳಗದಲ್ಲಿ ವೈರಲ್ ಆಗುತ್ತಿದೆ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸ ಆರಂಭವಾಗಿ ನಾಲ್ಕು ವರ್ಷ ಕಳೆದಿದೆ. ಈ ಚಿತ್ರದ ಮೂಲಕ ಆಲಿಯಾ ಹಾಗೂ ರಣಬೀರ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗುತ್ತಿದೆ. ಆದರೆ, ಇಬ್ಬರೂ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಈಗ ಇವರ ಮದುವೆ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇವುಗಳ ಮಧ್ಯೆ ಆಲಿಯಾ ಹಾಗೂ ರಣಬೀರ್ ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ.
ಆಲಿಯಾ ಹಾಗೂ ರಣಬೀರ್ ಯಾರೂ ಇಲ್ಲದ ಜಾಗದಲ್ಲಿ ಹೊಸ ವರ್ಷದ ರಾತ್ರಿ ಕಳೆದಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ಸುತ್ತಮುತ್ತಲು ಎಲ್ಲಿಯೂ ಮನೆಗಳು ಕಾಣುತ್ತಿಲ್ಲ. ಎಲ್ಲಿ ನೋಡಿದರೂ ಬಯಲು. ಅವರು ಅಲ್ಲಿ ರಾತ್ರಿ ಕಳೆದಿದ್ದಾರೆ ಎಂಬುದಕ್ಕೆ ಅಲ್ಲಿಯೇ ಇರುವ ಲ್ಯಾಂಪ್ ಸಾಕ್ಷಿ ನೀಡಿದೆ. ಈ ವೇಳೆ ರಣಬೀರ್ ಕಡೆಯಿಂದ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಆಲಿಯಾ. ಇದಕ್ಕೆ ಅವರು ‘ನನ್ನ ಬಾಯ್ಫ್ರೆಂಡ್ ಫೋಟೋಗ್ರಫಿ ಕೌಶಲ್ಯವನ್ನು ಉತ್ತಮವಾಗಿಸುತ್ತಿದ್ದೇನೆ’ ಎಂಬರ್ಥ ಬರುವ ರೀತಿಯಲ್ಲಿ ಕ್ಯಾಪ್ಶನ್ ನೀಡಿದ್ದಾರೆ.
View this post on Instagram
ಅನುಷ್ಕಾ ಶರ್ಮಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ಹಾರ್ಟ್ ಸ್ಮೈಲಿಯನ್ನು ಪೋಸ್ಟ್ ಮಾಡಿದ್ದಾರೆ. ಅನೇಕರು ಇದಕ್ಕೆ, ‘ಹೇ ಬ್ಯೂಟಿಫುಲ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ‘ಚಿತ್ರಕೃಪೆ ರಣಬೀರ್ ಕಪೂರ್’ ಎಂದು ಬರೆದಿದ್ದಾರೆ.
ಆಲಿಯಾ ಹಾಗೂ ರಣಬೀರ್ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ರಣಬೀರ್ ಜನ್ಮದಿನದ ಸಂದರ್ಭದಲ್ಲಿಯೂ ಅವರು ಹೀಗೆಯೇ ಸುತ್ತಾಟ ನಡೆಸೋಕೆ ರಾಜಸ್ಥಾನಕ್ಕೆ ತೆರಳಿದ್ದರು. ಆ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಅವರು ಅಲ್ಲಿಯೂ ರಣಬೀರ್ ಮುಖವನ್ನು ತೋರಿಸಿರಲಿಲ್ಲ.
ಇದನ್ನೂ ಓದಿ: Alia Bhatt: ಗೆಳೆಯ ರಣಬೀರ್ ಕಪೂರ್ ‘ಸೂಪರ್ ಪವರ್’ ಏನು? ಗುಟ್ಟು ಬಿಟ್ಟುಕೊಟ್ಟ ಆಲಿಯಾ
‘ಮನವಿ ಮಾಡಿಕೊಂಡ್ರೂ ಇವರು ಇಂಥ ಕೆಲಸ ಮಾಡಲ್ಲ’; ಜ್ಯೂ. ಎನ್ಟಿಆರ್ ಮೇಲೆ ಆಲಿಯಾ ಆರೋಪ
Published On - 2:42 pm, Fri, 7 January 22