Alia Bhatt: ಗೆಳೆಯ ರಣಬೀರ್ ಕಪೂರ್ ‘ಸೂಪರ್ ಪವರ್’ ಏನು? ಗುಟ್ಟು ಬಿಟ್ಟುಕೊಟ್ಟ ಆಲಿಯಾ

Alia Bhatt: ಗೆಳೆಯ ರಣಬೀರ್ ಕಪೂರ್ ‘ಸೂಪರ್ ಪವರ್’ ಏನು? ಗುಟ್ಟು ಬಿಟ್ಟುಕೊಟ್ಟ ಆಲಿಯಾ
ಆಲಿಯಾ ಭಟ್, ರಣಬೀರ್ ಕಪೂರ್ (ಸಂಗ್ರಹ ಚಿತ್ರ)

Ranbir Kapoor: ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸದ್ಯ ಬಾಲಿವುಡ್​ನ ತಾರಾ ಜೋಡಿಗಳಲ್ಲೊಂದು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಲಿಯಾ ರಣಬೀರ್ ‘ಸೂಪರ್​ ಪವರ್’ ಕುರಿತು ಮಾತನಾಡಿದ್ದಾರೆ.

TV9kannada Web Team

| Edited By: shivaprasad.hs

Jan 01, 2022 | 9:08 AM

ಬಾಲಿವುಡ್​ನ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಆಗಾಗ ಹಲವಾರು ಕಾರಣಗಳಿಗಾಗಿ ಸುದ್ದಿಯಾಗುತ್ತಾರೆ. ಕೆಲವು ಸಮಯದಿಂದ ಒಟ್ಟಾಗಿ ಓಡಾಡುತ್ತಿರುವ ಈ ಜೋಡಿ ತಮ್ಮ ಸಂಬಂಧವನ್ನು ಮುಚ್ಚಿಟ್ಟಿಲ್ಲ. ಅಲ್ಲದೇ ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಜತೆಯಾಗಿ ತೆರಳುತ್ತಾರೆ, ಒಟ್ಟಿಗೇ ಪೋಸ್ ಕೂಡ ನೀಡುತ್ತಾರೆ. ಅಭಿಮಾನಿಗಳು ಈರ್ವರ ಕಲ್ಯಾಣ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಅನಿವಾರ್ಯ ಕಾರಣಗಳಿಂದ ಅವರ ಮದುವೆ ಮುಂದೂಡಲ್ಪಟ್ಟಿದ್ದು, 2022ರಲ್ಲಿ ಈರ್ವರೂ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನುತ್ತವೆ ಬಾಲಿವುಡ್ ವರದಿಗಳು. ಇದೀಗ ಕಳೆದ ತಿಂಗಳು ಆಲಿಯಾ ರಣಬೀರ್ ಕುರಿತು ನೀಡಿದ್ದ ಹೇಳಿಕೆಯೊಂದು ವೈರಲ್ ಆಗಿದೆ. ಬಿಗ್ ಬಾಸ್ ರ=ತೆಲುಗಿನ 5ನೇ ಸೀಸನ್​ನ ಫಿನಾಲೆಯಲ್ಲಿ ಈ ತಾರಾ ಜೋಡಿ ಪಾಲ್ಗೊಂಡಿತ್ತು. ಅಲ್ಲಿ ಆಲಿಯಾ ಗೆಳೆಯ ರಣಬೀರ್ ‘ಸೂಪರ್ ಪವರ್’ ಏನು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

​​ಆಲಿಯಾ ಹಾಗೂ ರಣಬೀರ್ ಫ್ಯಾನ್ ಪೇಜ್​ಗಳಲ್ಲಿ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ತಾರಾ ಜೋಡಿಯ ಮಾತಿಗೆ ಎಲ್ಲರೂ ಮನಸೋತಿದ್ದಾರೆ. ವೇದಿಕೆಯಲ್ಲಿ ಮಾತನಾಡುತ್ತಾ ಆಲಿಯಾಗೆ ರಣಬೀರ್​ ಅವರ ಕುರಿತು ಕುತೂಹಲಕರ ಮಾಹಿತಿ ತೆರೆದಿಟ್ಟಿದ್ದಾರೆ. ಸ್ಕ್ರೀನ್ ಮೇಲೆ ಅಭಿನಯದ ಮೂಲಕ ಅಬ್ಬರಿಸುವ ರಣಬೀರ್, ನಿಜ ಜೀವನದಲ್ಲಿ ಬಹಳ ಕೂಲ್ ಕೂಲ್ ಮನುಷ್ಯನಂತೆ. ಇದನ್ನು ಆಲಿಯಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

‘‘ರಣಬೀರ್ ಬಿರುಗಾಳಿಯಲ್ಲೂ ಸಾವಧಾನದಿಂದ ಇರುವ ವ್ಯಕ್ತಿ. ಅದು ಅವರ ಸೂಪರ್​ಪವರ್’’ ಎಂದು ಪ್ರಿಯಕರನನ್ನು ಹಾಡಿಹೊಗಳಿದ್ದಾರೆ ಆಲಿಯಾ. ಈರ್ವರೂ ಮೊಟ್ಟಮೊದಲ ಬಾರಿಗೆ ಜತೆಯಾಗಿ ತೆರೆಹಂಚಿಕೊಳ್ಳುತ್ತಿರುವ ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರಕ್ಕಾಗಿ ತಾರಾ ಜೋಡಿ ಬಿಗ್​ಬಾಸ್​ಗೆ ಆಗಮಿಸಿತ್ತು.

ಆಲಿಯಾ ಹಾಗೂ ರಣಬೀರ್ 2017ರಲ್ಲಿ ಡೇಟಿಂಗ್ ಆರಂಭಿಸಿದ್ದರು. ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್ ಸೆಟ್​ನಲ್ಲಿ ಈರ್ವರೂ ಭೇಟಿಯಾಗಿದ್ದರು. ನಂತರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಚಿತ್ರದ ವಿಷಯಕ್ಕೆ ಬಂದರೆ ‘ಬ್ರಹ್ಮಾಸ್ತ್ರ’ ಬಹುನಿರೀಕ್ಷಿತ, ಬಿಗ್ ಬಜೆಟ್ ಚಿತ್ರವಾಗಿದೆ. ಹಲವಾರು ಕಾರಣದಿಂದ ಚಿತ್ರ ತಡವಾಗುತ್ತಲೇ ಇದೆ. 2022ರ ಸೆಪ್ಟೆಂಬರ್ 9ರಂದು ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:

ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ ಶರ್ಮಾ? ಕಂಬ್ಯಾಕ್​ ಮಾಡಿದ ಕೊಹ್ಲಿ ಪತ್ನಿ

Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ

Follow us on

Related Stories

Most Read Stories

Click on your DTH Provider to Add TV9 Kannada