Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ

Tovino Thomas: ಮಲಯಾಳಂ ನಟ ಟೊವಿನೊ ಥಾಮಸ್ ಇತ್ತೀಚೆಗೆ ಸಲ್ಮಾನ್ ಖಾನ್​ರನ್ನು ಭೇಟಿಯಾಗಿದ್ದರು. ಅವರ ಮತ್ತೊಂದು ವ್ಯಕ್ತಿತ್ವ ತಮಗೆ ಪರಿಚಯವಾಯಿತು ಎಂದು ಟೊವಿನೊ ಹೇಳಿಕೊಂಡಿದ್ದಾರೆ.

Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ
ಸಲ್ಮಾನ್ ಖಾನ್, ಟೊವಿನೊ ಥಾಮಸ್
Follow us
TV9 Web
| Updated By: shivaprasad.hs

Updated on: Jan 01, 2022 | 8:21 AM

ಮಲಯಾಳಂ ನಟ ಟೊವಿನೊ ಥಾಮಸ್ ಸದ್ಯ ಇತ್ತೀಚೆಗೆ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್​ರನ್ನು ಭೇಟಿಯಾಗಿದ್ದರು. ಆ ಒಂದು ಭೇಟಿ ಸಲ್ಮಾನ್​ರೆಡೆಗಿನ ದೃಷ್ಟಿಕೋನವನ್ನೇ ಸಂಪೂರ್ಣ ಬದಲಾಯಿಸಿತು ಎಂದಿದ್ದಾರೆ ಟೊವಿನೊ. ಸಂದರ್ಶನವೊಂದರಲ್ಲಿ ಮಾತನಾಡಿರುವ ಟೊವಿನೊ, ತಮಗೆ ವರ್ಕೌಟ್ ಪ್ರಾರಂಭಿಸಲು ಅಂದಿನ ಕಾಲದಲ್ಲಿ ಸಲ್ಮಾನ್ ಅವರೇ ಸ್ಫೂರ್ತಿ ಎಂದಿದ್ದಾರೆ. ‘ಓ ಓ ಜಾನೆ ಜಾನಾ’ದಲ್ಲಿ ಸಲ್ಮಾನ್ ಶರ್ಟ್​​ಲೆಸ್ ಆಗಿ ಕಾಣಿಸಿಕೊಂಡು ಗಿಟಾರ್ ಹಿಡಿದುಕೊಂಡಿದ್ದರು. ಅದು ಅಂದಿನ ಕಾಲದ ಯುವತಿಯರಿಗೆ ಕನಸಿನಂತೆ ಕಂಡಿದ್ದರೆ, ಯುವಕರು ತಾವೂ ಸಲ್ಮಾನ್​ರಂತೆ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದರು. ಇದಕ್ಕೆ ಟೊವಿನೋ ಕೂಡ ಹೊರತಾಗಿರಲಿಲ್ಲ. ಆ ಹಾಡನ್ನು ನೋಡಿ ತಾನೂ ವರ್ಕೌಟ್ ಮಾಡಿ, ಸಲ್ಮಾನ್​ರಂತೆ ದೇಹವನ್ನು ಹೊಂದಬೇಕು ಎಂದು ಶಾಲೆಯಲ್ಲಿರುವಾಗ ಟೊವಿನೊ ಕನಸು ಕಾಣುತ್ತಿದ್ದರಂತೆ. 10ನೇ ತರಗತಿ ಮುಗಿದ ತಕ್ಷಣ ಅವರು ಜಿಮ್​ಗೂ ಸೇರಿಕೊಂಡರಂತೆ. ತನಗೆ ವರ್ಕೌಟ್ ಮಾಡಲು ಪ್ರೇರಣೆಯಾದ ವ್ಯಕ್ತಿಯನ್ನು ಹಲವು ವರ್ಷಗಳ ನಂತರ ಅವರ ಆಫೀಸ್​ನಲ್ಲೇ ಭೇಟಿಯಾದೆ ಎಂದು ತಮ್ಮ ಕನಸು ನನಸಾದ ಸಂತಸವನ್ನು ಹಂಚಿಕೊಂಡಿದ್ದಾರೆ ಟೊವಿನೊ.

ಆರ್​​ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಟೊವಿನೊ ಸಲ್ಮಾನ್ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ಮೊದಲಿಗೆ ಸಲ್ಮಾನ್​ರನ್ನು ಭೇಟಿಯಾಗಲು ತಾನು ಮುಂಚಿತವಾಗಿ ಕೇಳಿದ್ದೆ.  ಆದರೆ ಅವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಯಾವುದೇ ಅಹಂಕಾರವಿಲ್ಲ  ಎಂದಿದ್ಧಾರೆ ಟೊವಿನೊ.

ಅಷ್ಟೇ ಅಲ್ಲದೇ ಸಲ್ಮಾನ್​ರನ್ನು ಭೇಟಿಯಾಗಲು 10 ನಿಮಿಷಗಳ ಅವಕಾಶ ಸಿಕ್ಕಿತಂತೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಅವರ ಒಂದು ಆಯಾಮ ಕಾಣಿಸುತ್ತದೆ. ಆದರೆ ನೇರವಾಗಿ ಭೇಟಿಯಾದಾಗ ಅವರು ಎಷ್ಟು ವಿನಮ್ರ ವ್ಯಕ್ತಿ ಎಂಬುದು ಮನವರಿಕೆಯಾಗುತ್ತದೆ. ಸಲ್ಮಾನ್ ಭೇಟಿಯಿಂದ ಅವರೆಡೆಗಿನ ತಮ್ಮ ದೃಷ್ಟಿಕೋನ ಬದಲಾಯಿತು. ಎಷ್ಟೇ ದೊಡ್ಡ ವ್ಯಕ್ತಿಯಾದವರೂ ಅವರು ಎಷ್ಟು ವಿನಮ್ರರಾಗಿದ್ದಾರೆಂದರೆ.. ಅವರನ್ನು ನೋಡಿ ನಾವೆಲ್ಲಾ ಕಲಿಯಬೇಕು ಎಂದಿದ್ದಾರೆ ಟೊವಿನೊ ಥಾಮಸ್.

ಕಳೆದ ತಿಂಗಳು ಟೊವಿನ್ ಸಲ್ಮಾನ್ ಅವರೊಂದಿಗೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದರು. ಸಲ್ಮಾನ್ ಅವರದ್ದು ಪ್ರೇರಣಾದಾಯಿ ವ್ಯಕ್ತಿತ್ವ ಎಂದು ಟೊವಿನೊ ಅದರಲ್ಲಿ ಬರೆದುಕೊಂಡಿದ್ದರು. ಚಿತ್ರಗಳ ವಿಷಯಕ್ಕೆ ಬಂದರೆ, ಟೊವಿನ್ ಸದ್ಯ ‘ಮಿನ್ನಲ್ ಮುರುಳಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ನೆಟ್​​ಫ್ಲಿಕ್ಸ್​​ನಲ್ಲಿ ಚಿತ್ರ ತೆರೆಕಂಡಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಇದನ್ನೂ ಓದಿ:

2022ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಚಿತ್ರ ‘ಕೆಜಿಎಫ್​ 2’ 

‘ಆರ್​ಆರ್​ಆರ್​’ ಬೆಂಗಳೂರು ಪ್ರೀ ರಿಲೀಸ್​ ಇವೆಂಟ್​ನಲ್ಲಿ ದಿಗ್ಗಜರು; ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ