ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ

ರಣವೀರ್ ಸಿಂಗ್​ ಅವರು ತಾವು ಅದ್ಭುತ ನಟ ಎಂಬುದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ‘83’ ಚಿತ್ರದಿಂದ ರಣವೀರ್​ಗೆ ಇದ್ದ ಬೇಡಿಕೆ ಹೆಚ್ಚಿದೆ. ಇದನ್ನು ಅವರೇ ಒಪ್ಪಿಕೊಂಡಿದ್ದಾರೆ.

ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ
ರಣವೀರ್​ ಸಿಂಗ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 01, 2022 | 9:49 AM

ರಣವೀರ್​ ಸಿಂಗ್​ (Ranveer Singh) ಅವರು ‘83’ ಸಿನಿಮಾ(83 Movie) ಗೆಲುವಿನ ಖುಷಿಯಲ್ಲಿದ್ದಾರೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ. ತೆರೆಯಮೇಲೆ ರಣವೀರ್​ ಸಿಂಗ್​ ಕಾಣಿಸುತ್ತಿಲ್ಲ, ಕೇವಲ ಕಪಿಲ್​ ದೇವ್​ ಮಾತ್ರ ಕಾಣುತ್ತಿದ್ದಾರೆ ಎಂಬಷ್ಟರ ಮಟ್ಟಿಗೆ ಅವರು ಅದ್ಭುತವಾಗಿ ನಟಿಸಿ ತೋರಿಸಿದ್ದರು. ಈ ಸಿನಿಮಾದಿಂದ ರಣವೀರ್​ ಸಿಂಗ್​ ಅದೃಷ್ಟ ಖುಲಾಯಿಸಿದೆ. ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸೋಕೆ ರಣವೀರ್​ ಸಿಂಗ್​ಗೆ ಆಫರ್​ ಬಂದಿದೆ.

ರಣವೀರ್ ಸಿಂಗ್​ ಅವರು ತಾವು ಅದ್ಭುತ ನಟ ಎಂಬುದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ‘83’ ಚಿತ್ರದಿಂದ ರಣವೀರ್​ಗೆ ಇದ್ದ ಬೇಡಿಕೆ ಹೆಚ್ಚಿದೆ. ಇದನ್ನು ಅವರೇ ಒಪ್ಪಿಕೊಂಡಿದ್ದಾರೆ. ಬಯೋಪಿಕ್ ಆಫರ್​ಗಳು ರಣವೀರ್​ ಸಿಂಗ್​ಗೆ ಹೆಚ್ಚುತ್ತಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಐದು ನಿರ್ಮಾಪಕರ ಜತೆ ಚರ್ಚೆಯಲ್ಲಿದ್ದೇನೆ. ಇವೆಲ್ಲವೂ ಬಯೋಪಿಕ್​. ಇದರಲ್ಲಿ ಮೂರು ಕ್ರೀಡಾಪಟುಗಳ ಬಯೋಪಿಕ್​ ಹಾಗೂ ಉಳಿದ ಎರಡು ಇತರ ದೊಡ್ಡ ವ್ಯಕ್ತಿಗಳ ಬಯೋಪಿಕ್​. ಆ ಬಗ್ಗೆ ನಾನು ಈಗಲೇ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು. ‘ಎಲ್ಲಾ ಸ್ಕ್ರಿಪ್ಟ್​ಗಳು ಈಗತಾನೇ ಆರಂಭವಾಗಿದೆ. ಇದರಲ್ಲಿ ಒಂದು ಸ್ಕ್ರಿಪ್ಟ್ ಅದ್ಭುತವಾಗಿಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಈ ಮೂಲಕ ಅವರು ಕೌತುಕ ಹೆಚ್ಚಿಸಿದ್ದಾರೆ.

ಅಂದುಕೊಂಡ ರೀತಿಯಲ್ಲಿ ‘83’ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಈ ಕಾರಣಕ್ಕೆ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್​ ಮಾಡಿಲ್ಲ ಎನ್ನಲಾಗುತ್ತಿದೆ. ಇನ್ನೂ ಕೆಲ ಕಾರಣಗಳು ಸಿನಿಮಾ ಮೇಲೆ ಪ್ರಭಾವ ಬೀರುತ್ತಿವೆ. ಕೊವಿಡ್​ ಹೆಚ್ಚುತ್ತಿರುವುದರಿಂದ ಕೆಲವರು ಚಿತ್ರಮಂದಿರದತ್ತ ಮುಖ ಮಾಡಲು ಹೆದರುತ್ತಿದ್ದಾರೆ. ಇನ್ನು, ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ಪ್ರಬಲ ಸ್ಪರ್ಧೆ ನೀಡುತ್ತಿದೆ.

ಇದನ್ನೂ ಓದಿ: ‘83’ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ, ಬಂದ ಲಾಭದಲ್ಲೂ ಇದೆ ಪಾಲು 

ಏರಲೇ ಇಲ್ಲ ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ಕಲೆಕ್ಷನ್​; ಇದಕ್ಕೆ ಕಾರಣಗಳೇನು?

Published On - 9:48 am, Sat, 1 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ