ಏರಲೇ ಇಲ್ಲ ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ಕಲೆಕ್ಷನ್; ಇದಕ್ಕೆ ಕಾರಣಗಳೇನು?
ಮೊದಲ ದಿನವಾದ ಶುಕ್ರವಾರ (ಡಿಸೆಂಬರ್ 24) ಈ ಸಿನಿಮಾ 16 ರೂ. ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನವಾದ ಶನಿವಾರ (ಡಿಸೆಂಬರ್ 25) ಈ ಚಿತ್ರ ಸರಿಸುಮಾರು 16 ಕೋಟಿ ರೂಪಾಯಿ ಬಾಚಿಕೊಂಡಿದೆ.
ಶುಕ್ರವಾರ (ಡಿಸೆಂಬರ್ 26) ರಿಲೀಸ್ ಆದ ‘83’ ಸಿನಿಮಾ (83 Movie) ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಟೀಂ ಇಂಡಿಯಾ (Team India) ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದ್ದು, ರಣವೀರ್ ಸಿಂಗ್ (Ranaveer Singh) ಅವರು ಕಪಿಲ್ ದೇವ್ (Kapil Dev) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡಮಟ್ಟಿಗೆ ಕಲೆಕ್ಷನ್ ಮಾಡುತ್ತಿಲ್ಲ ಎನ್ನುವ ವಿಚಾರ ಚಿತ್ರತಂಡಕ್ಕೆ ಬೇಸರ ತರಿಸಿದೆ. ಇದಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ ಸಿನಿಮಾ (Pushpa Movie) ನೀಡುತ್ತಿರುವ ಕಠಿಣ ಪೈಪೋಟಿಯೂ ಒಂದು ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ದಿನವಾದ ಶುಕ್ರವಾರ (ಡಿಸೆಂಬರ್ 24) ಈ ಸಿನಿಮಾ 16 ರೂ. ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನವಾದ ಶನಿವಾರ (ಡಿಸೆಂಬರ್ 25) ಈ ಚಿತ್ರ ಸರಿಸುಮಾರು 16 ಕೋಟಿ ರೂಪಾಯಿ ಬಾಚಿಕೊಂಡಿದೆ. ಶನಿವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇತ್ತು. ಈ ಕಾರಣಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ, ಅದು ಆಗಿಲ್ಲ. ಹೀಗಾಗಿ, ಎರಡನೇ ದಿನವೂ ಈ ಚಿತ್ರ 16 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ.
ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಈ ಕಾರಣಕ್ಕೆ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿಲ್ಲ ಎನ್ನಲಾಗುತ್ತಿದೆ. ಇನ್ನೂ ಕೆಲ ಕಾರಣಗಳು ಸಿನಿಮಾ ಮೇಲೆ ಪ್ರಭಾವ ಬೀರುತ್ತಿವೆ. ಕೊವಿಡ್ ಹೆಚ್ಚುತ್ತಿರುವುದರಿಂದ ಕೆಲವರು ಚಿತ್ರಮಂದಿರದತ್ತ ಮುಖ ಮಾಡಲು ಹೆದರುತ್ತಿದ್ದಾರೆ. ಇನ್ನು, ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ಪ್ರಬಲ ಸ್ಪರ್ಧೆ ನೀಡುತ್ತಿದೆ.
‘ಸೂರ್ಯವಂಶಿ’ ಸಿನಿಮಾ ಮೊದಲ ದಿನ 26.29 ಕೋಟಿ ರೂ. ಹಾಗೂ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಚಿತ್ರ ಮೊದಲ ದಿನ 32.67 ಕೋಟಿ ರೂ ಬಾಚಿಕೊಂಡಿತ್ತು. ಆದರೆ, ‘83’ ಚಿತ್ರದಿಂದ ಇಷ್ಟು ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಭಾನುವಾರವಾದರೂ ಈ ಚಿತ್ರ 20 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದ ಬಗ್ಗೆ ಈಗಾಗಲೇ ಎಲ್ಲ ಕಡೆಗಳಲ್ಲಿ ಉತ್ತಮ ಟಾಕ್ ಶುರುವಾಗಿದೆ.
ಇದನ್ನೂ ಓದಿ: ‘83’ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು? ಇಲ್ಲಿದೆ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ
‘ಪುಷ್ಪ’ ಗೆಲುವಿನ ಬಳಿಕ ರಶ್ಮಿಕಾಗೆ ಬಂಪರ್ ಚಾನ್ಸ್; ಮತ್ತೋರ್ವ ಸ್ಟಾರ್ ನಟನಿಗೆ ಕೊಡಗಿನ ಕುವರಿ ಜೋಡಿ?