ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​
ಸಲ್ಮಾನ್​ ಖಾನ್​, ಆಲಿಯಾ ಭಟ್​

Salman Khan: ಸಲ್ಮಾನ್​ ಖಾನ್​ ಧರಿಸಿದ್ದ ಶರ್ಟ್​ ಬಟನ್​ ಓಪನ್​ ಆಗಿತ್ತು. ‘ನನ್ನ ಎದೆ ಭಾಗ ಕಾಣುತ್ತಿದೆ’ ಎಂದು ಅವರು ಹೇಳುತ್ತಿದ್ದಂತೆಯೇ ಆಲಿಯಾ ಭಟ್​ ಅವರು ಬಟನ್​ ಹಾಕಲು ಸಹಾಯ ಮಾಡಿದರು.

TV9kannada Web Team

| Edited By: Madan Kumar

Dec 26, 2021 | 1:45 PM


ನಟಿ ಆಲಿಯಾ ಭಟ್​ (Alia Bhatt) ಅವರು ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾ (RRR Movie) ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಡುತ್ತಿದ್ದಾರೆ. ಜ.7ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್​ ಆಗಲಿದೆ. ರಾಜಮೌಳಿ (SS Rajamouli) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇಡೀ ತಂಡ ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಸಿನಿಮಾದ ಹೀರೋಗಳಾದ ರಾಮ್​ ಚರಣ್​ (Ram Charan) ಮತ್ತು ಜ್ಯೂ. ಎನ್​ಟಿಆರ್​ ((Jr NTR)) ಜೊತೆ ಆಲಿಯಾ ಭಟ್​ ಹಲವು ವೇದಿಕೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರತಂಡ ಸಲ್ಮಾನ್​ ಖಾನ್​ (Salman Khan) ನಡೆಸಿಕೊಡುವ ಬಿಗ್​ ಬಾಸ್​ (Bigg Boss) ಶೋಗೆ ಭೇಟಿ ನೀಡಿತ್ತು. ಈ ವೇಳೆ ಕೆಲವು ಫನ್ನಿ ಘಟನೆಗಳು ನಡೆದವು. ತಮ್ಮ ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಆಲಿಯಾ ಭಟ್​ ಸಹಾಯ ಮಾಡಬೇಕಾಯಿತು. ಆ ವಿಡಿಯೋ ಈಗ ವೈರಲ್​ ಆಗಿದೆ.

ರಾಜಮೌಳಿ, ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​ ಅವರನ್ನು ಸಲ್ಮಾನ್​ ಖಾನ್​ ಅವರು ವೇದಿಕೆಗೆ ಸ್ವಾಗತಿಸಿದರು. ಅನೇಕ ವಿಚಾರಗಳ ಬಗ್ಗೆ ಈ ಸೆಲೆಬ್ರಿಟಿಗಳು ಮಾತನಾಡಿದರು. ‘ಆರ್​ಆರ್​ಆರ್​’ ಚಿತ್ರದ ವಿಶೇಷತೆಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡರು. ಈ ವೇಳೆ ಸಲ್ಮಾನ್​ ಖಾನ್​ ಧರಿಸಿದ್ದ ಶರ್ಟ್​ ಬಟನ್​ ಓಪನ್​ ಆಗಿತ್ತು. ‘ನನ್ನ ಎದೆ ಭಾಗ ಕಾಣುತ್ತಿದೆ’ ಎಂದು ಅವರು ಹೇಳುತ್ತಿದ್ದಂತೆಯೇ ಆಲಿಯಾ ಭಟ್​ ಅವರು ಬಟನ್​ ಹಾಕಲು ಸಹಾಯ ಮಾಡಿದರು. ಅದಕ್ಕೆ ಸಲ್ಲು ಕಡೆಯಿಂದ ಧನ್ಯವಾದ ಸಂದಾಯವಾಯಿತು.

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಸಖತ್​ ಫೇಮಸ್​ ಆಗಿದೆ. ಆ ಹಾಡಿಗೆ ಡ್ಯಾನ್ಸ್​ ಮಾಡಲು ಹೋಗಿ ಸಲ್ಲು ಸುಸ್ತಾದರು. ಈ ಹಾಡಿನಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅವರು ಸಖತ್ತಾಗಿ ಡ್ಯಾನ್ಸ್​ ಮಾಡಿದ್ದಾರೆ. ಅದೇ ರೀತಿ ಕುಣಿಯುವಂತೆ ಸಲ್ಲುಗೆ ಹೇಳಲಾಯಿತು. ಆದರೆ ಆ ಸ್ಟೆಪ್​ ಹಾಕಲು ಅವರು ತುಂಬ ಕಷ್ಟಪಟ್ಟರು. ‘ನಾನು ದೊಡ್ಡವನಾದ ಮೇಲೆ ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ರೀತಿ ಡ್ಯಾನ್ಸ್​ ಮಾಡುತ್ತೇನೆ’ ಎಂದು ಅವರು ತಮಾಷೆ ಮಾಡಿದರು. ಇಂಥ ಅನೇಕ ಫನ್ನಿ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿ ಆಗಿತ್ತು.

ಇದನ್ನೂ ಓದಿ:

ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್​ ಖಾನ್​; ಅನಿಲ್​ ಕಪೂರ್​ ಹೇಳಿದ ಅಚ್ಚರಿ ವಿಷಯ

ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ

Follow us on

Related Stories

Most Read Stories

Click on your DTH Provider to Add TV9 Kannada