Merry Christmas: ಕತ್ರಿನಾ ಮುಂದಿನ ಚಿತ್ರದ ಹೆಸರೇನು? ಇಲ್ಲಿದೆ ಉತ್ತರ

Merry Christmas: ಕತ್ರಿನಾ ಮುಂದಿನ ಚಿತ್ರದ ಹೆಸರೇನು? ಇಲ್ಲಿದೆ ಉತ್ತರ
ಕತ್ರಿನಾ ಹಂಚಿಕೊಂಡ ಚಿತ್ರದಲ್ಲಿ ವಿಜಯ್ ಸೇತುಪತಿ, ಶ್ರೀರಾಮ್ ರಾಘವನ್ ಸೇರಿದಂತೆ ಚಿತ್ರತಂಡ

Katrina Kaif | Vijay Sethupati: ಕತ್ರಿನಾ- ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿರುವ ‘ಮೆರ್ರಿ ಕ್ರಿಸ್​ಮಸ್’ ಚಿತ್ರ ಸೆಟ್ಟೇರಿದೆ. ಈ ಕುರಿತ ಮಾಹಿತಿ ಇಲ್ಲಿದೆ.

TV9kannada Web Team

| Edited By: shivaprasad.hs

Dec 26, 2021 | 10:11 AM

ಕತ್ರಿನಾ ಕೈಫ್ (Katrina Kaif) ಅವರ ನೂತನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲಿ ಇದ್ದೇ ಇತ್ತು. ಅದಕ್ಕೆ ಸರಿಯಾಗಿ ಅವರು ಚಿತ್ರೀಕರಣದ ಸೆಟ್​ಗೆ ತೆರಳಿದ್ದ ದೃಶ್ಯಗಳೂ ಲೀಕ್ ಆಗಿತ್ತು. ಇದೀಗ ಕ್ರಿಸ್​ಮಸ್ (Christmas) ಸಂಭ್ರಮದಲ್ಲಿ ನಟಿ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ದಕ್ಷಿಣ ಭಾರತದ ಅಭಿಮಾನಿಗಳೂ ಈ ಸುದ್ದಿ ಕೇಳಿ ಹಿರಿಹಿರಿ ಹಿಗ್ಗಿದ್ದಾರೆ. ಇದಕ್ಕೆ ಕಾರಣ ವಿಜಯ್ ಸೇತುಪತಿ! ಹೌದು. ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ (Sriram Raghavan) ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ವಿಜಯ್ ಸೇತುಪತಿ (Vijay Sethupathi) ಹಾಗೂ ಕತ್ರಿನಾ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಚಿತ್ರಗಳಿಗೆ ಹೆಸರಾದ ಶ್ರೀರಾಮ್ ರಾಘವನ್ ಅವರೊಂದಿಗೆ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದೆ. ವಿಜಯ್ ಸೇತುಪತಿ ಅವರೊಂದಿಗೆ ತೆರೆ ಹಂಚಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಕತ್ರಿನಾ ಬರೆದುಕೊಂಡಿದ್ದರು. ಅಂದಹಾಗೆ ಚಿತ್ರದ ಹೆಸರು ‘ಮೆರ್ರಿ ಕ್ರಿಸ್​ಮಸ್​’ (Merry Christmas).

2022ರಲ್ಲಿ ತೆರೆ ಕಾಣಲಿರುವ ‘ಮೆರ್ರಿ ಕ್ರಿಸ್​ಮಸ್’ ಚಿತ್ರ ವಿಜಯ್ ಸೇತುಪತಿ ಹಾಗೂ ಕತ್ರಿನಾ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ. ಕೆಲ ದಿನಗಳ ಹಿಂದಷ್ಟೇ ಕತ್ರಿನಾ ಚಿತ್ರೀಕರಣದ ಸೆಟ್​ಗೆ ತೆರಳಿರುವ ಚಿತ್ರಗಳು ಲೀಕ್ ಆಗಿತ್ತು. ಇದೀಗ ಸ್ವತಃ ನಟಿ ಕ್ರಿಸ್​ಮಸ್ ದಿನದಂದು ಅದೇ ಹೆಸರಿನ ಚಿತ್ರವನ್ನು ಘೋಷಿಸಿದ್ದಾರೆ. ಸದ್ಯ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದ್ದು, ಕೆಲಸಗಳು ಭರದಿಂದ ಸಾಗುತ್ತಿವೆ. ‘ಅಂಧಾದುನ್’, ‘ಬದ್ಲಾಪುರ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀರಾಮ್ ರಾಘವನ್ ಅವರ ಈ ಚಿತ್ರದ ಮೇಲೂ ನಿರೀಕ್ಷೆಗಳು ಹೆಚ್ಚಿವೆ.

ಕತ್ರಿನಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

View this post on Instagram

A post shared by Katrina Kaif (@katrinakaif)

ಕತ್ರಿನಾ ಕೈಫ್ ಮತ್ತೆರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ನಟನೆಯ ‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಜೀ ಲೇ ಜರಾ’ ಚಿತ್ರದಲ್ಲೂ ಕತ್ರಿನಾ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾರೊಂದಿಗೆ ಬಣ್ಣಹಚ್ಚುತ್ತಿದ್ದಾರೆ. ಟ್ರಾವೆಲ್ ಹಾಗೂ ಅಡ್ವೆಂಚರ್ ಚಿತ್ರ ಇದಾಗಿದೆ.

ಇದನ್ನೂ ಓದಿ:

Katrina Kaif: ಕತ್ರಿನಾ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಫಿದಾ; ಶೂಟಿಂಗ್ ಸೆಟ್​ನಲ್ಲಿರುವ ಚಿತ್ರಗಳು ವೈರಲ್

‘ಚಿತ್ರರಂಗಕ್ಕೆ ಪುನೀತ್​ ರೀತಿಯ ನಟ ಬೇಕು; ನಿಖಿಲ್​ ಹೆಚ್ಚು ಸಿನಿಮಾ ಮಾಡಲಿ’: ಎಚ್​​.ಡಿ. ಕುಮಾರಸ್ವಾಮಿ

Follow us on

Related Stories

Most Read Stories

Click on your DTH Provider to Add TV9 Kannada