Katrina Kaif: ಕತ್ರಿನಾ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಫಿದಾ; ಶೂಟಿಂಗ್ ಸೆಟ್​ನಲ್ಲಿರುವ ಚಿತ್ರಗಳು ವೈರಲ್

Katrina Kaif: ಕತ್ರಿನಾ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಫಿದಾ; ಶೂಟಿಂಗ್ ಸೆಟ್​ನಲ್ಲಿರುವ ಚಿತ್ರಗಳು ವೈರಲ್
ಶೂಟಿಂಗ್ ಸೆಟ್​ನಲ್ಲಿ ಕತ್ರಿನಾ ಕೈಫ್

Vicky Kaushal: ವಿವಾಹದ ಸಂಭ್ರಮದ ನಂತರ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತೆ ಚಿತ್ರೀಕರಣಕ್ಕೆ ವಾಪಸ್ಸಾಗಿದ್ದಾರೆ. ಶೂಟಿಂಗ್ ಸೆಟ್​ನ ಚಿತ್ರಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿವೆ.

TV9kannada Web Team

| Edited By: shivaprasad.hs

Dec 24, 2021 | 11:38 AM

ಡಿಸೆಂಬರ್ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಫೋರ್ಟ್ ಬರ್ವಾರಾದ ರೆಸಾರ್ಟ್​ ಒಂದರಲ್ಲಿ ತಾರಾ ಜೋಡಿಯಾದ ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ನಂತರ ಹನಿಮೂನ್​ಗೆ ಮಾಲ್ಡೀವ್ಸ್​ಗೆ ತೆರಳಿದ್ದ ಈ ಜೋಡಿ, ಬೇಗ ವಾಪಸ್ಸಾಗಿತ್ತು. ಕತ್ರಿನಾ ಹಾಗೂ ವಿಕ್ಕಿಗೆ ಪರಸ್ಪರರ ಮೇಲಿರುವಷ್ಟೇ ಪ್ರೀತಿ ಕೆಲಸದ ಮೇಲೂ ಇದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹನಿಮೂನ್​ಗೆ ತೆರಳಿದ್ದ ಈ ಜೋಡಿ ಸಿನಿಮಾ ಕೆಲಸಗಳು ತಡವಾಗಬಾರದು ಎಂಬ ಕಾರಣಕ್ಕೆ ಬೇಗ ಭಾರತಕ್ಕೆ ಮರಳಿದ್ದರು. ಇದೀಗ ಬಾಲಿವುಡ್ ಅಂಗಳದಿಂದ ಬಂದಿರುವ ಹೊಸ ಸಮಾಚಾರದ ಪ್ರಕಾರ ಹೆಚ್ಚು ಸಮಯ ವ್ಯರ್ಥ ಮಾಡದ ಕತ್ರಿನಾ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಗುರುವಾರ ಕತ್ರಿನಾ ಚಿತ್ರೀಕರಣದ ಸೆಟ್​ನಲ್ಲಿರುವ ಚಿತ್ರಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕತ್ರಿನಾ ಅಭಿಮಾನಿ ಪೇಜ್​ಗಳು ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಕತ್ರಿನಾ ಶೂಟಿಂಗ್ ಸೆಟ್​ನಲ್ಲಿರುವುದನ್ನು ಕಾಣಬಹುದಾಗಿದೆ. ಖ್ಯಾತ ಚಿತ್ರ ನಿರ್ದೇಶಕ ಶ್ರೀರಾಮ್ ರಾಘವನ್ ಕತ್ರಿನಾ ಎದುರು ನಿಂತಿದ್ದಾರೆ ಎನ್ನಲಾದ ಚಿತ್ರಗಳು ವೈರಲ್ ಆಗಿದ್ದು, ಅದರಲ್ಲಿ ಈರ್ವರೂ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

ಕತ್ರಿನಾ ಸೆಟ್​ನಲ್ಲಿರುವ ಚಿತ್ರಗಳು ಇಲ್ಲಿವೆ:

ಕಳೆದ ವಾರವಷ್ಟೇ ವಿಕ್ಕಿ ಕೌಶಲ್ ಕೂಡ ಚಿತ್ರೀಕರಣಕ್ಕೆ ಮರಳಿದ್ದರು. ಇನ್ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದ ಅವರು ಮೊದಲು ‘ಟೀ’ ನಂತರ ಸಿನಿಮಾ ಎಂದು ಬರೆದುಕೊಂಡಿದ್ದರು. ಆ ಪೋಸ್ಟ್​ಗೆ ಹಲವು ಅಭಿಮಾನಿಗಳು ಕತ್ರಿನಾ ಎಲ್ಲಿ ಎಂದು ಪ್ರಶ್ನಿಸಿದ್ದರು.

ವಿಕ್ಕಿ ಹಂಚಿಕೊಂಡಿದ್ದ ಪೋಸ್ಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬರುವುದಾದರೆ ಕತ್ರಿನಾ ಕೈಫ್ ಬತ್ತಳಿಕೆಯಲ್ಲಿ ಸದ್ಯ ಎರಡು ಚಿತ್ರಗಳಿವೆ. ಅವರ ಇತ್ತೀಚಿನ ಚಿತ್ರ ‘ಸೂರ್ಯವಂಶಿ’ ಕೇವಲ ಒಂದು ವಾರದಲ್ಲಿ ₹ 100 ಕೋಟಿ ಕ್ಲಬ್ ಸೇರಿತ್ತು. ಸದ್ಯ ಕತ್ರಿನಾ ಸಲ್ಮಾನ್ ನಟನೆಯ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಜೀ ಲೇ ಜರಾ’ ಚಿತ್ರದಲ್ಲೂ ಕತ್ರಿನಾ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾರೊಂದಿಗೆ ಬಣ್ಣಹಚ್ಚುತ್ತಿದ್ದಾರೆ. ಟ್ರಾವೆಲ್ ಹಾಗೂ ಅಡ್ವೆಂಚರ್ ಚಿತ್ರ ಇದಾಗಿದೆ.

ಇದನ್ನೂ ಓದಿ:

Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ

RRR: ಆಲಿಯಾ ಮುಂದೆ ರಾಮ್​ ಚರಣ್ ಹಾಗೂ ಜ್ಯೂ ಎನ್​ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು? ಅಚ್ಚರಿಯ ವಿಚಾರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada