RRR: ಆಲಿಯಾ ಮುಂದೆ ರಾಮ್ ಚರಣ್ ಹಾಗೂ ಜ್ಯೂ ಎನ್‌ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು? ಅಚ್ಚರಿಯ ವಿಚಾರ ಇಲ್ಲಿದೆ
Alia Bhatt | Jr NTR | Ram Charan: ಚಿತ್ರೀಕರಣದ ಸಂದರ್ಭದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಯಾವ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರು? ಆಲಿಯಾ ತೆರೆದಿಟ್ಟ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರುವ ‘ಆರ್‌ಆರ್‌ಆರ್’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗೀಗ ಚಿತ್ರದ ಕುರಿತು ಒಂದೊಂದೇ ಕುತೂಹಲಕರ ವಿಚಾರಗಳು ಹೊರಬರುತ್ತಿವೆ. ಬಹಳಷ್ಟು ಜನರಿಗೆ ‘ಆರ್‌ಆರ್‌ಆರ್’ ಬಹುಭಾಷೆಯ ತಾರಾಗಣವನ್ನು ಹೊಂದಿದೆ. ಆದ್ದರಿಂದ ಕಲಾವಿದರು ಸೆಟ್ನಲ್ಲಿ ಯಾವ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರು ಎಂಬ ಕುತೂಹಲವಿರಬಹುದು. ಈ ಕುರಿತು ಮಾತನಾಡಿರುವ ಆಲಿಯಾ ಭಟ್ ಅಚ್ಚರಿಯ ಮಾಹಿತಿಯ ಸಂದರ್ನ್ನುಶನವೊಂದರಲ್ಲಿ ಹೊರಹಾಕಿದ್ದಾರೆ. ಅಲ್ಲದೇ ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದರಿಂದ ತಮಗೆ ಏನನ್ನಿಸುತ್ತಿತ್ತು ಎಂಬುದನ್ನು ಆಲಿಯಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಫ್ರೀ ಪ್ರೆಸ್ ಜರ್ನಲ್ನೊಂದಿಗೆ ಮಾತನಾಡಿರುವ ಅವರು, ರಾಮ್ ಚರಣ್ (Ram Charan) ಹಾಗೂ ಜ್ಯೂ ಎನ್‌ಟಿಆರ್ (Jr NTR) ತಮ್ಮ ಮುಂದೆ ತೆಲುಗಿನಲ್ಲೇ ಮಾತನಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಆ ಸಂದರ್ಭಗಳಲ್ಲಿ ತಾನು ಗೊಂದಲಕ್ಕೊಳಗಾಗುತ್ತಿದ್ದೆ. ಯಾರಾದರೂ ಭಾಷಾಂತರಿಸಲು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶಿಸಿರುವ ‘ಆರ್‌ಆರ್‌ಆರ್’ನಲ್ಲಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕತೆಯನ್ನು ಕಟ್ಟಿಕೊಡಲಿದ್ದು, ನಟ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಹಾಗೂ ಜೂನಿಯರ್ ಎನ್‌ಟಿಆರ್ ಕೊಮರಂ ಭೀಮ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ನಟ ಅಜಯ್ ದೇವಗನ್ (Ajay Devgan) ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಆಲಿಯಾ, ‘‘ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಯಾವಾಗಲೂ ನನ್ನ ಮುಂದೆ ಪರಸ್ಪರ ತೆಲುಗಿನಲ್ಲಿ ಮಾತನಾಡುತ್ತಿದ್ದರು. ನಾನು ಟೆನಿಸ್ ಆಟದ ಚೆಂಡನ್ನು ನೋಡುವಂತೆ ಅವರೀವರ್ವರ ಮುಖವನ್ನು ಅತ್ತಿಂದಿತ್ತ- ಇತ್ತಿಂದತ್ತ ನೋಡುತ್ತಿದ್ದೆ. ಅಲ್ಲದೇ ಯಾರಾದರೂ ಅನುವಾದಿಸಲಿ ಎಂದು ಕಾಯುತ್ತಿದ್ದೆ’’ ಎಂದು ನಗುತ್ತಾ ನುಡಿದಿದ್ದಾರೆ.
ಚಿತ್ರದಲ್ಲಿ ತೆಲುಗು ಮಾತನಾಡಲು ಅಭ್ಯಾಸ ಮಾಡಿದ ಬಗ್ಗೆ ಮಾತನಾಡಿದ ಆಲಿಯಾ, ‘‘ತುಂಬಾ ಉತ್ಸುಕಳಾಗಿದ್ದೆ ಆದರೆ ಅಷ್ಟೇ ನರ್ವಸ್ ಕೂಡ ಆಗಿತ್ತು. ತರಬೇತುದಾರರೊಂದಿಗೆ ಕುಳಿತು ಸಾಲುಗಳನ್ನು ಕಂಠಪಾಟ ಮಾಡುತ್ತಿದ್ದೆ. ಪಾತ್ರಕ್ಕಾಗಿ ಒಂದಷ್ಟು ಹೋಮ್ವರ್ಕ್ ಮಾಡಿಕೊಂಡಿದ್ದೆ’’ ಎಂದು ನುಡಿದಿದ್ದಾರೆ. ಚಿತ್ರ ಮುಗಿದಿದ್ದಕ್ಕೆ ತನಗೆ ಬೇಸರವಾಗಿತ್ತು ಎಂದು ಈ ಹಿಂದೆ ಹೇಳಿಕೊಂಡಿದ್ದ ಆಲಿಯಾ, ರಾಜಮೌಳಿ ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.
ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿರುವ ‘ಆರ್‌ಆರ್‌ಆರ್’ ಚಿತ್ರ 2022ರ ಜನವರಿ 7 ರಂದು ಬಿಡುಗಡೆಯಾಗಲಿದೆ. ಈ ಹಿಂದೆ ಕೊರೊನಾ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಗಿತ್ತು.
ಇದನ್ನೂ ಓದಿ:
ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್ ಉತ್ತರವೇನು?
83 Movie: ‘83’ ಚಿತ್ರಕ್ಕೆ ಬಂಪರ್ ಕೊಡುಗೆ ಘೋಷಿಸಿದ ದೆಹಲಿ ಸರ್ಕಾರ; ಹಿರಿಹಿರಿ ಹಿಗ್ಗಿದ ಚಿತ್ರತಂಡ