ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್​ ಆದ ಮೇಘನಾ ರಾಜ್ ಸರ್ಜಾ​; ಯಾವುದು ಆ ಚಿತ್ರ?

ಅದಿತಿ ಪ್ರಭುದೇವ ಅವರ ನಟನೆಗೆ ಮೇಘನಾ ಫ್ಯಾನ್​ ಆಗಿದ್ದಾರೆ. ಅದಿತಿ ಅಭಿನಯದ ‘ರಂಗನಾಯಕಿ’ ಸಿನಿಮಾವನ್ನು ಮೇಘನಾ ರಾಜ್​ ತಾಯಿ ಪ್ರಮೀಳಾ ಜೋಷಾಯ್​ ಅವರು ತುಂಬ ಮೆಚ್ಚಿಕೊಂಡಿದ್ದರು.

TV9kannada Web Team

| Edited By: Madan Kumar

Dec 22, 2021 | 9:24 PM

ನಟಿ ಮೇಘನಾ ರಾಜ್​ ಸರ್ಜಾ (Meghana Raj) ಅವರು ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು (ಡಿ.22) ಅವರು ‘ಗಜಾನನ ಆ್ಯಂಡ್​ ಗ್ಯಾಂಗ್​’ (Gajanana and Gang) ಸಿನಿಮಾದ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಈ ಕಾರ್ಯಕ್ರಮಕ್ಕೆ ಬರಲು ಮೊದಲ ಕಾರಣ ಈ ಚಿತ್ರದ ಹೀರೋ ಶ್ರೀಮಹದೇವ್​. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಮೇಘನಾ ರಾಜ್ ಮತ್ತು ಶ್ರೀಮಹದೇವ್​ ಜೊತೆಯಾಗಿ ನಟಿಸಿದ್ದರು. ಆ ಸ್ನೇಹದ ಕಾರಣಕ್ಕಾಗಿ ‘ಗಜಾನನ ಆ್ಯಂಡ್​ ಗ್ಯಾಂಗ್​’ ಟ್ರೇಲರ್​ ರಿಲೀಸ್​ಗೆ ತಾವು ಬಂದಿರುವುದಾಗಿ ಮೇಘನಾ ಹೇಳಿದರು. ಎರಡನೇ ಕಾರಣ ನಟಿ ಅದಿತಿ ಪ್ರಭುದೇವ (Aditi Prabhudeva). ಹೌದು, ಅದಿತಿಯ ನಟನೆಗೆ ಮೇಘನಾ ಫ್ಯಾನ್​ ಆಗಿದ್ದಾರೆ. ಅದಿತಿ ಅಭಿನಯದ ‘ರಂಗನಾಯಕಿ’  (Ranganayaki Movie) ಸಿನಿಮಾವನ್ನು ಮೇಘನಾ ರಾಜ್​ ತಾಯಿ ಪ್ರಮೀಳಾ ಜೋಷಾಯ್​ (Pramila Joshai) ಅವರು ತುಂಬ ಮೆಚ್ಚಿಕೊಂಡಿದ್ದಾರಂತೆ. ‘ಆ ಚಿತ್ರದ ಬಗ್ಗೆ ನಮ್ಮ ಅಮ್ಮ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ. ಅದನ್ನು ಕೇಳಿ ಕೇಳಿ ನಾನು ಆ ಚಿತ್ರವನ್ನು ನೋಡದೇ ಇದ್ದರೂ ಕೂಡ ನಿಮಗೆ ಫ್ಯಾನ್​ ಆಗಿದ್ದೇನೆ. ನೀವು ನನ್ನ ಫೇವರಿಟ್​ ಹೀರೋಯಿನ್​ಗಳಲ್ಲಿ ಒಬ್ಬರು’ ಎಂದರು ಮೇಘನಾ ರಾಜ್​.

ಇದನ್ನೂ ಓದಿ:

‘ಕನ್ನಡಕ್ಕೆ ಅವಮಾನವಾದ್ರೆ ನಮ್ಮ ತಾಯಿಗೆ ಅವಮಾನ ಆದಂತೆ; ತಾಯಿಗೆ ಬೈದ್ರೆ ಸಾಯ್ಸೋಕೂ ಹೇಸಲ್ಲ; ನಟಿ ಅದಿತಿ

ಮೇಘನಾ ರಾಜ್​ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರ; ಟ್ರೇಲರ್​ ನೋಡಿ ಅವರು ಹೇಳಿದ್ದೇನು?

Follow us on

Click on your DTH Provider to Add TV9 Kannada