‘ಕನ್ನಡಕ್ಕೆ ಅವಮಾನವಾದ್ರೆ ನಮ್ಮ ತಾಯಿಗೆ ಅವಮಾನ ಆದಂತೆ; ತಾಯಿಗೆ ಬೈದ್ರೆ ಸಾಯ್ಸೋಕೂ ಹೇಸಲ್ಲ; ನಟಿ ಅದಿತಿ

Aditi Prabhudeva: ಕನ್ನಡ ವಿರೋಧಿ ಕೃತ್ಯಗಳನ್ನು ನಟಿ ಅದಿತಿ ಪ್ರಭುದೇವ ಖಂಡಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಕೂಡ ಕೈ ಜೋಡಿಸುವುದಾಗಿ ಅವರು ಹೇಳಿದ್ದಾರೆ.

TV9kannada Web Team

| Edited By: Madan Kumar

Dec 22, 2021 | 6:30 PM

ನಟಿ ಅದಿತಿ ಪ್ರಭುದೇವ (Aditi Prabhudeva) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಅವರು ನಟಿಸಿರುವ ‘ಗಜಾನನ ಆ್ಯಂಡ್​ ಗ್ಯಾಂಗ್​’ (Gajanana And Gang) ಸಿನಿಮಾದ ಟ್ರೇಲರ್​ ಇಂದು (ಡಿ.22) ಬಿಡುಗಡೆ ಆಗಿದೆ. ಈ ವೇಳೆ ಮಾತನಾಡಿದ ಅವರು ಕನ್ನಡ ವಿರೋಧ ಕೃತ್ಯಗಳನ್ನು ಖಂಡಿಸಿದ್ದಾರೆ. ‘ಕನ್ನಡ ಭಾಷೆ ಮತ್ತು ಧ್ವಜಕ್ಕೆ ಅವಮಾನ ಮಾಡಿದ್ರೆ ನಮ್ಮ ತಾಯಿಗೆ ಅವಮಾನ ಆದಂತೆ. ಸಾಮಾನ್ಯವಾಗಿ ನಮ್ಮ ತಾಯಿಗೆ ಯಾರಾದ್ರೂ ಸ್ವಲ್ಪ ಅಗೌರವ ತೋರಿಸಿದ್ದರೂ ನಾವು ಸಾಯ್ಸೋಕೂ ಹೇಸಲ್ಲ. ಅಷ್ಟು ಕೋಪ ಬರುತ್ತದೆ. ಅಂಥದ್ರಲ್ಲಿ ಕೋಟ್ಯಂತರ ಜನರ ತಾಯಿ ಕನ್ನಡಾಂಬೆಗೆ ಅವಮಾನ ಆಗಿದ್ದರೂ ನಾವು ಸುಮ್ಮನೆ ಇದ್ದೀವಿ ಅಂದ್ರೆ ನಾವು ಎಂಥವರು? ಅ ಪದ ಉಪಯೋಗಿಸೋಕೆ ನನಗೆ ಇಷ್ಟ ಇಲ್ಲ. ನಾವು ಅಂಥವರು ಅಂತ ಸಾಬೀತು ಮಾಡೋದು ಬೇಡ. ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ, ಸೂಕ್ತ ಮಾರ್ಗದಲ್ಲಿ ಇದಕ್ಕೆಲ್ಲ ಅಂತ್ಯ ಹಾಡಬೇಕು. ಒಂದು ದಿನ ಬಂದ್​ ಮಾಡಿ ಸುಮ್ಮನಾಗುವುದಲ್ಲ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಕೂಡ ಕೈ ಜೋಡಿಸುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ:

ಮೇಘನಾ ರಾಜ್​ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರ; ಟ್ರೇಲರ್​ ನೋಡಿ ಅವರು ಹೇಳಿದ್ದೇನು?

‘ಭಾಷೆಗಾಗಿ ನನ್ನ ಪ್ರಾಣ ಹೋಗ್ಬೇಕು ಅಂದ್ರೆ ಹೋಗಲಿ ಬಿಡಿ’; ಕನ್ನಡ ಪರ ಹೋರಾಟದ ಬಗ್ಗೆ ಶಿವಣ್ಣ ಮಾತು

Follow us on

Click on your DTH Provider to Add TV9 Kannada