ಮೇಘನಾ ರಾಜ್​ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರ; ಟ್ರೇಲರ್​ ನೋಡಿ ಅವರು ಹೇಳಿದ್ದೇನು?

Gajanana And Gang Kannada Movie Trailer: ‘ಗಜಾನನ ಆ್ಯಂಡ್​ ಗ್ಯಾಂಗ್​’ ಸಿನಿಮಾದ ಟ್ರೇಲರ್​ಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಮೇಘನಾ ರಾಜ್​ ಅವರಿಗೂ ಟ್ರೇಲರ್​ ತುಂಬ ಇಷ್ಟ ಆಗಿದೆ.

ಮೇಘನಾ ರಾಜ್​ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರ; ಟ್ರೇಲರ್​ ನೋಡಿ ಅವರು ಹೇಳಿದ್ದೇನು?
ಗಜಾನನ ಆ್ಯಂಡ್ ಗ್ಯಾಂಗ್, ಮೇಘನಾ ರಾಜ್ ಸರ್ಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Dec 22, 2021 | 5:42 PM

ನಟಿ ಮೇಘನಾ ರಾಜ್​ (Meghana Raj) ಅವರು ಸಿನಿಮಾ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದಾರೆ. ಕೆಲವು ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇಂದು (ಡಿ.22) ಕನ್ನಡದ ‘ಗಜಾನನ ಆ್ಯಂಡ್​ ಗ್ಯಾಂಗ್​’ (Gajanana And Gang) ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅವರು ಆಗಮಿಸಿದ್ದರು. ಟ್ರೇಲರ್​ ಲಾಂಚ್​ ಮಾಡಿದ ಬಳಿಕ ಚಿತ್ರತಂಡದ ಬಗ್ಗೆ ಮಾತನಾಡಿದರು. ಈ ಚಿತ್ರಕ್ಕೆ ಅಭಿಷೇಕ್​ ಶೆಟ್ಟಿ (Abhishek Shetty) ನಿರ್ದೇಶನ ಮಾಡಿದ್ದು, ನಾಗೇಶ್​ ಕುಮಾರ್​ ನಿರ್ಮಾಣ ಮಾಡಿದ್ದಾರೆ. ಕಿರುತೆರೆ ನಟ ಶ್ರೀಮಹದೇವ್​ ಅವರು ‘ಗಜಾನನ ಆ್ಯಂಡ್​ ಗ್ಯಾಂಗ್’ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ (Aditi Prabhudeva) ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್​ ನೋಡಿದ ಮೇಘನಾ ರಾಜ್​ಗೆ ಚಿರಂಜೀವಿ ಸರ್ಜಾ (Chiranjeevi Sarja) ಅವರ ನೆನಪಾಗಿದೆ!

ಈ ಸಿನಿಮಾದ ಟ್ರೇಲರ್​ಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಮೇಘನಾ ರಾಜ್​ ಅವರಿಗೂ ಟ್ರೇಲರ್​ ತುಂಬ ಇಷ್ಟ ಆಗಿದೆ. ಎಲ್ಲಕ್ಕಿಂತ ವಿಶೇಷ ಏನೆಂದರೆ ಈ ಟ್ರೇಲರ್​ ನೋಡಿದ ಬಳಿಕ ಅವರು ಚಿರಂಜೀವಿ ಸರ್ಜಾರನ್ನು ನೆನಪು ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಡೈಲಾಗ್​. ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದರಲ್ಲೊಂದು ಫ್ರೆಂಡ್​ಶಿಪ್​ ಕಥೆ ಇದೆ. ‘ನೀನು ಯಾವತ್ತು ಇವರ (ಫ್ರೆಂಡ್ಸ್​) ಸಹವಾಸ ಬಿಡುತ್ತೀಯೋ ಆವತ್ತು ಉದ್ಧಾರ ಆಗುತ್ತೀಯ’ ಎಂದು ಒಂದು ದೃಶ್ಯದಲ್ಲಿ ಹೀರೋಗೆ ಹೀರೋಯಿನ್​ ಬಯ್ಯುತ್ತಾಳೆ. ಬಳಿಕ ಇನ್ನೊಂದು ದೃಶ್ಯದಲ್ಲಿ ‘ಎಂತಹ ಪರಿಸ್ಥಿತಿಯಲ್ಲೂ ಏನೇ ಆದರೂ ನಿನ್ನ ಫ್ರೆಂಡ್ಸ್​ ಬಿಟ್ಟುಕೊಡಬೇಡ’ ಎಂದು ಆಕೆಯೇ ಹೇಳುತ್ತಾಳೆ.

ಈ ಡೈಲಾಗ್​ ಕೇಳಿದ ಮೇಘನಾಗೆ ಚಿರು ನೆನಪಾಗಿದೆ. ರಿಯಲ್​ ಲೈಫ್​ನಲ್ಲಿ ಚಿರುಗೆ ಮೇಘನಾ ಕೂಡ ಈ ಎರಡೂ ಡೈಲಾಗ್​ಗಳನ್ನು ಹೇಳಿದ್ದರು! ಆ ಘಟನೆಯನ್ನು ವೇದಿಕೆ ಮೇಲೆ ಅವರು ನೆನಪು ಮಾಡಿಕೊಂಡರು. ಚಿರು ಕೂಡ ಸ್ನೇಹ ಜೀವಿ ಆಗಿದ್ದರು. ಸದಾ ಕಾಲ ಸ್ನೇಹಿತರ ಜೊತೆ ಅವರು ಇರುತ್ತಿದ್ದರು. ಆದರೆ ಇಂದು ಅವರು ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ.

ಈ ಚಿತ್ರಕ್ಕೆ ಪ್ರದ್ಯೋತ್ತನ್​ ಸಂಗೀತ ನಿರ್ದೇಶನ ಮಾಡಿದ್ದು, ಉದಯ್​ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ವಿಜೇತ್​ ಚಂದ್ರ ಸಂಕಲನ ಮಾಡಿದ್ದಾರೆ. ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​ ಅವರು ಆಗಮಿಸಿ ಶುಭ ಕೋರಿದರು. ಈ ಸಿನಿಮಾದಲ್ಲಿ ಬಿಗ್​ ಬಾಸ್​ ಖ್ಯಾತಿಯ ರಘು ಗೌಡ ಮತ್ತು ಶಮಂತ್​ ಬ್ರೋ ಗೌಡ ಕೂಡ ನಟಿಸಿದ್ದಾರೆ.

ಇದನ್ನೂ ಓದಿ:

ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ