ಮದುವೆ ಬಳಿಕ ಕತ್ರಿನಾ-ವಿಕ್ಕಿಗೆ ಹೆಚ್ಚಿದ ಆಫರ್​; ಮೊದಲ ಬಾರಿಗೆ ಜತೆಯಾಗಿ ನಟಿಸಲಿರುವ ಜೋಡಿ

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಅದನ್ನೇ ಎನ್​ಕ್ಯಾಶ್​ ಮಾಡಿಕೊಳ್ಳಲು ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ಮುಂದೆ ಬಂದಿವೆ.

ಮದುವೆ ಬಳಿಕ ಕತ್ರಿನಾ-ವಿಕ್ಕಿಗೆ ಹೆಚ್ಚಿದ ಆಫರ್​; ಮೊದಲ ಬಾರಿಗೆ ಜತೆಯಾಗಿ ನಟಿಸಲಿರುವ ಜೋಡಿ
ವಿಕ್ಕಿ ಕೌಶಲ್​, ಕತ್ರಿನಾ ಕೈಫ್
TV9kannada Web Team

| Edited By: Madan Kumar

Dec 17, 2021 | 12:57 PM

ಕತ್ರಿನಾ ಕೈಫ್​ (Vicky Kaushal) ಮತ್ತು ವಿಕ್ಕಿ ಕೌಶಲ್​ ((Katrina Kaif) ಅವರು ಸಖತ್​ ಟ್ರೆಂಡ್​ನಲ್ಲಿ ಇದ್ದಾರೆ. ಅವರ ಬಗ್ಗೆಯೇ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ (Katrina Kaif Vicky Kaushal Wedding) ಇತ್ತೀಚೆಗೆ ನೆರವೇರಿತು. ಅದಾದ ಬಳಿಕ ಮಾಲ್ಡೀವ್ಸ್​ಗೆ ತೆರಳಿದ್ದ ಅವರು ಕೇವಲ ನಾಲ್ಕನೇ ದಿನಕ್ಕೆ ಹನಿಮೂನ್​ ಮುಗಿಸಿಕೊಂಡು ವಾಪಸ್​ ಬಂದಿದ್ದು ಅಚ್ಚರಿ ಮೂಡಿಸಿತ್ತು. ಅನೇಕ ಸಿನಿಮಾಗಳಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ನಟಿಸುತ್ತಿದ್ದಾರೆ. ಆದರೆ ಈವರೆಗೂ ಅವರಿಬ್ಬರು ಜತೆಯಾಗಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಅವರು ಒಟ್ಟಿಗೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಮದುವೆ ಬಳಿಕ ಅವರಿಗೆ ಒಳ್ಳೊಳ್ಳೆಯ ಆಫರ್​ಗಳು ಬರುತ್ತಿವೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಅದನ್ನೇ ಎನ್​ಕ್ಯಾಶ್​​ ಮಾಡಿಕೊಳ್ಳಲು ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ಮುಂದೆ ಬಂದಿವೆ. ಜಾಹೀರಾತೊಂದರಲ್ಲಿ ಈ ಜೋಡಿಯನ್ನು ಒಂದಾಗಿಸಲು ಪ್ಲ್ಯಾನ್​ ನಡೆದಿದೆ. ಆ ಮೂಲಕ ಅವರಿಬ್ಬರು ಮೊದಲ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ತಮ್ಮ ಲವ್​ ಕಹಾನಿ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಪ್ರೀತಿ ಶುರುವಾಗಿದ್ದು ಹೇಗೆ? ಮೊದಲು ಪ್ರಪೋಸ್​ ಮಾಡಿದ್ದು ಯಾರು? ಇಬ್ಬರ ಮನೆಯವರ ಮೊದಲ ರಿಯಾಕ್ಷನ್​ ಯಾವ ರೀತಿ ಇತ್ತು? ಈ ಯಾವ ವಿಚಾರಗಳ ಬಗ್ಗೆಯೂ ಅಭಿಮಾನಿಗಳಿಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಇಲ್ಲ. ಹಾಗಾಗಿ ಅವರ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಈ ಕ್ಯೂಟ್​ ಜೋಡಿಯ ಮದುವೆ ವಿಡಿಯೋ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಓಟಿಟಿ ಸಂಸ್ಥೆಯೊಂದು ಬರೋಬ್ಬರಿ 100 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಮದುವೆ ದೃಶ್ಯಗಳನ್ನು ಎಕ್ಸ್​ಕ್ಲೂಸಿವ್​ ಆಗಿ ಪ್ರಸಾರ ಮಾಡಲಿದೆ. ಆ ಬಗ್ಗೆ ಅಪ್​ಡೇಟ್​ ತಿಳಿಯಲು ಕೂಡ ಫ್ಯಾನ್ಸ್​ ಕಾಯುತ್ತಿದ್ದಾರೆ. ಸದ್ಯಕ್ಕೆ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರಷ್ಟೇ. ದಾಂಪತ್ಯ ಜೀವನ ಆರಂಭಿಸಿರುವ ಈ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ‘ಜೀ ಲೇ ಝರಾ’, ‘ಫೋನ್​ ಭೂತ್​’ ಮುಂತಾದ ಸಿನಿಮಾಗಳ ಶೂಟಿಂಗ್​ನಲ್ಲಿ ಕತ್ರಿನಾ ಪಾಲ್ಗೊಳ್ಳಬೇಕಿದೆ. ‘ಸ್ಯಾಮ್​ ಬಹದ್ದೂರ್​’ ಸಿನಿಮಾದ ಚಿತ್ರೀಕರಣಕ್ಕಾಗಿ ವಿಕ್ಕಿ ಕೌಶಲ್​ ಸಜ್ಜಾಗಿದ್ದಾರೆ.

ಇದನ್ನೂ ಓದಿ:

ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

ಮದುವೆ ಮುಗಿಯಿತು ಈಗ ಆರತಕ್ಷತೆ ಸಂಭ್ರಮ; ಗ್ರ್ಯಾಂಡ್​ ಆಗಿ ನಡೆಯುತ್ತಿದೆ ಕತ್ರಿನಾ-ವಿಕ್ಕಿ ರಿಸೆಪ್ಷನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada