ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

Katrina Kaif | Vicky Kaushal: ಚಿತ್ರರಂಗದಲ್ಲಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತುಂಬ ಬ್ಯುಸಿ ಆಗಿದ್ದಾರೆ. ಇಬ್ಬರಿಗೂ ಸಖತ್​ ಡಿಮ್ಯಾಂಡ್​ ಇದೆ. ಹಾಗಾಗಿ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕಾದು ಕೂತಿದ್ದಾರೆ.

ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?
ವಿಕ್ಕಿ ಕೌಶಲ್​, ಕತ್ರಿನಾ ಕೈಫ್
TV9kannada Web Team

| Edited By: Madan Kumar

Dec 15, 2021 | 7:10 AM

ಬಾಲಿವುಡ್​ನ ಕ್ಯೂಟ್​ ಜೋಡಿ ಎನಿಸಿಕೊಂಡಿರುವ ಕತ್ರಿನಾ ಕೈಫ್​​ (Katrina Kaif) ಮತ್ತು ವಿಕ್ಕಿ ಕೌಶಲ್​ (Vicky Kaushal) ಅವರ ಮದುವೆ ಅದ್ದೂರಿಯಾಗಿ ಡಿ.9ರಂದು ನಡೆಯಿತು. ಮೂಲಗಳ ಪ್ರಕಾರ, ಮರುದಿನವೇ ಅವರು ಹನಿಮೂನ್​ (Honeymoon) ಸಲುವಾಗಿ ಮಾಲ್ಡೀವ್ಸ್ (Maldives)​ ವಿಮಾನ ಹತ್ತಿದ್ದರು. ನಾಲ್ಕು ದಿನ ಕಳೆಯುವುದರೊಳಗೆ ವಾಪಸ್​ ಭಾರತಕ್ಕೆ ಬಂದಿದ್ದಾರೆ ಈ ನವ ದಂಪತಿ. ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮಾಲ್ಡೀವ್ಸ್​ನಿಂದ ವಾಪಸ್​ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ಖುಷಿಯಿಂದ ಪೋಸ್​ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ನವ ದಂಪತಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಚಿತ್ರರಂಗದಲ್ಲಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತುಂಬ ಬ್ಯುಸಿ ಆಗಿದ್ದಾರೆ. ಇಬ್ಬರಿಗೂ ಸಖತ್​ ಡಿಮ್ಯಾಂಡ್​ ಇದೆ. ಹಾಗಾಗಿ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕಾದು ಕೂತಿದ್ದಾರೆ. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಈಗಾಗಲೇ ಒಪ್ಪಿಕೊಂಡಿರುವ ಅನೇಕ ಸಿನಿಮಾಗಳ ಶೂಟಿಂಗ್​ ಬಾಕಿ ಇದೆ. ಮದುವೆಗಾಗಿ ಒಂದಷ್ಟು ದಿನ ವಿರಾಮ ಪಡೆದುಕೊಂಡಿದ್ದ ಅವರು ಈಗ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹಾಗಾಗಿ ಅವರು ಕೇವಲ ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ಭಾರತಕ್ಕೆ ವಾಪಸ್​ ಬಂದಿದ್ದಾರೆ.

ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಅದ್ದೂರಿಯಾಗಿ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ ಮದುವೆ ನೆರವೇರಿತು. ಆ ಮದುವೆಗೆ ಬಂದ ಅತಿಥಿಗಳ್ಯಾರೂ ಮೊಬೈಲ್​ ಬಳಸುವಂತಿರಲಿಲ್ಲ. ಮದುವೆ ಸಮಾರಂಭದ ದೃಶ್ಯಗಳನ್ನು ಪ್ರಸಾರ ಮಾಡಲು ಓಟಿಟಿ ಸಂಸ್ಥೆಯೊಂದು 100 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಸುದ್ದಿ ಇದೆ. ಆ ಬಗ್ಗೆ ಕತ್ರಿನಾ ಮತ್ತು ವಿಕ್ಕಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ತಮ್ಮ ಮದುವೆಯ ಬಗ್ಗೆ ​ಕಿಂಚಿತ್ತೂ ಸುಳಿವು ನೀಡಿರಲಿಲ್ಲ. ಆದರೂ ಕೂಡ ವಿಷಯ ಸೋರಿಕೆ ಆಗಿತ್ತು. ಮದುವೆ ಬಗ್ಗೆ ಇಷ್ಟೆಲ್ಲ ಸೀಕ್ರೆಟ್​ ಮಾಡಿದ್ದು ಯಾಕೆ ಎಂಬುದಕ್ಕೆ ಸದ್ಯಕ್ಕಂತೂ ಅವರು ಉತ್ತರ ನೀಡಿಲ್ಲ. ತಮ್ಮಿಬ್ಬರ ಲವ್​ ಸ್ಟೋರಿ ಹೇಗೆ ಶುರುವಾಯಿತು ಎಂಬ ಬಗ್ಗೆಯೂ ಅವರು ಈವರೆಗೆ ಎಲ್ಲಿಯೂ ಮಾತನಾಡಿಲ್ಲ. ಹಾಗಾಗಿ ಈ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

‘ಜೀ ಲೇ ಝರಾ’, ‘ಫೋನ್​ ಭೂತ್​’ ಮುಂತಾದ ಸಿನಿಮಾಗಳ ಶೂಟಿಂಗ್​ನಲ್ಲಿ ಕತ್ರಿನಾ ಪಾಲ್ಗೊಳ್ಳಬೇಕಿದೆ. ‘ಸ್ಯಾಮ್​ ಬಹದ್ದೂರ್​’ ಸಿನಿಮಾದ ಚಿತ್ರೀಕರಣಕ್ಕಾಗಿ ವಿಕ್ಕಿ ಕೌಶಲ್​ ಸಜ್ಜಾಗಿದ್ದಾರೆ.

ಇದನ್ನೂ ಓದಿ:

ವಿವಾಹದ ದಿನವೇ ಕತ್ರಿನಾಗೆ ಕಣ್ಣೀರು ಹಾಕಿಸಿದ ವಿಕ್ಕಿ ಕೌಶಲ್​; ಮದುವೆ ಮಂಟಪದಲ್ಲಿ ನಡೆದಿದ್ದೇನು?

ಕತ್ರಿನಾ​ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್​; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada