ಕತ್ರಿನಾ​ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್​; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ

ಕತ್ರಿನಾ​ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್​; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ
ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಉಂಗುರ

Katrina Kaif Vicky Kaushal Wedding: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಕುರಿತು ಅಚ್ಚರಿಯ ಮಾಹಿತಿ ಕೇಳಿಬರುತ್ತಿದೆ. ಕೇವಲ ಒಂದು ಉಂಗುರಕ್ಕೆ ಇಷ್ಟು ಖರ್ಚಾದರೆ ಪೂರ್ತಿ ಮದುವೆಗೆ ಎಷ್ಟು ಕೋಟಿ ರೂಪಾಯಿ ತಗುಲಿರಬಹುದು ಎಂದು ಊಹಿಸಲಾಗುತ್ತಿದೆ.

TV9kannada Web Team

| Edited By: Madan Kumar

Dec 10, 2021 | 1:48 PM

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ (Katrina Kaif Vicky Kaushal Wedding) ಅದ್ದೂರಿಯಾಗಿ ನೆರವೇರಿದೆ. ಈ ಸ್ಟಾರ್​ ಜೋಡಿಯ ವಿವಾಹದ ಕುರಿತು ಸಿಕ್ಕಾಪಟ್ಟೆ ಸೀಕ್ರೆಟ್​ ಮಾಡಲಾಗಿತ್ತು. ಗುರುವಾರ (ಡಿ.9) ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಮದುವೆ ನಡೆದಿದೆ. ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ವಿಕ್ಕಿ ಕೌಶಲ್​ (Vicky Kaushal ) ಮತ್ತು ಕತ್ರಿನಾ ಕೈಫ್​ (Katrina Kaif) ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ನೋಡಿದ ಬಹುತೇಕರಿಗೆ ಒಂದು ಡೈಮಂಡ್​ ರಿಂಗ್​ ಗಮನ ಸೆಳೆದಿದೆ. ಕತ್ರಿನಾ ಕೈಫ್​ ಧರಿಸಿರುವ ಈ ಗುಂಗುರದ ಬೆಲೆ ತಿಳಿದುಕೊಳ್ಳಲು ಗೂಗಲ್​ನಲ್ಲಿ ಹುಡುಕಾಟ ನಡೆಸಲಾಗಿದೆ. ಕಡೆಗೂ ಆ ದುಬಾರಿ ಡೈಮಂಡ್​ ರಿಂಗ್​ ಬೆಲೆ ಎಷ್ಟೆಂಬುದು ಗೊತ್ತಾದ ಬಳಿಕ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಇಬ್ಬರ ಕೈಯಲ್ಲೂ ಹಲವು ಸಿನಿಮಾಗಳಿವೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಈ ಜೋಡಿಹಕ್ಕಿಗಳು ಅದ್ದೂರಿಯಾಗಿಯೇ ಹಸೆಮಣೆ ಏರಿವೆ. ಮದುವೆಗಾಗಿ ಸಿಕ್ಕಾಪಟ್ಟೆ ವೆಚ್ಚ ಮಾಡಲಾಗಿದೆ. ಕೇವಲ ಈ ಒಂದು ಉಂಗುರಕ್ಕೆ 7.4 ಲಕ್ಷ ರೂ. ನೀಡಲಾಗಿದೆ! ಇಷ್ಟು ಹಣದಲ್ಲಿ ಮಧ್ಯಮವರ್ಗದವರು ಮದುವೆಯ ಎಲ್ಲ ಖರ್ಚುವೆಚ್ಚವನ್ನು ಭರಿಸಬಹುದು ಅಂತ ಜನರು ಕಮೆಂಟ್​ ಮಾಡುತ್ತಿದ್ದಾರೆ. ಕೇವಲ ಒಂದು ಉಂಗುರಕ್ಕೆ ಇಷ್ಟು ಖರ್ಚಾದರೆ ಪೂರ್ತಿ ಮದುವೆಗೆ ಎಷ್ಟು ಕೋಟಿ ರೂಪಾಯಿ ತಗುಲಿರಬಹುದು ಎಂದು ಊಹಿಸಲಾಗುತ್ತಿದೆ.

View this post on Instagram

A post shared by Katrina Kaif (@katrinakaif)

ಕತ್ರಿನಾ ಕೈಫ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 90 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್​ ಮಾಡಿದ್ದಾರೆ. ವಿಕ್ಕಿ ಕೌಶಲ್​ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿನ ಫೋಟೋಗಳಿಗೆ 60 ಲಕ್ಷಕ್ಕೂ ಹೆಚ್ಚು ಜನರು ಲೈಕ್​ ಬಟನ್​ ಒತ್ತಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ಟ್ವಿಂಕಲ್​ ಖನ್ನಾ, ಪರಿಣೀತಿ ಚೋಪ್ರಾ, ಹೃತಿಕ್​ ರೋಷನ್​, ಪ್ರಿಯಾಂಕಾ ಚೋಪ್ರಾ, ಸೋನಮ್​ ಕಪೂರ್, ನಿಕ್​ ಜೋನಸ್​, ಬಿಪಾಶಾ ಬಸು, ಇಶಾನ್​ ಕಟ್ಟರ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ, ಗಾಯಕಿ ಪಲಕ್​ ಮುಚ್ಚಲ್​ ಸೇರಿದಂತೆ ಅನೇಕ ತಾರೆಯರು ಈ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

‘ಜೀವನ ಪರ್ಯಂತ ನಿಮ್ಮಿಬ್ಬರ ನಡುವೆ ನಗು, ನಿಷ್ಠೆ, ಪ್ರೀತಿ, ಗೌರವ, ಸಹಬಾಳ್ವೆ ಇರಲಿ’ ಎಂದು ದೀಪಿಕಾ ಪಡುಕೋಣೆ ವಿಶ್​ ಮಾಡಿದ್ದಾರೆ. ‘ಓಹ್​ ಮೈ ಗಾಡ್​.. ನೀವಿಬ್ಬರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಆಲಿಯಾ ಭಟ್​ ಕಮೆಂಟ್​ ಮಾಡಿದ್ದಾರೆ. ಹತ್ತಾರು ಹಾರ್ಟ್​ ಎಮೋಜಿಗಳನ್ನು ಕಮೆಂಟ್​ ಬಾಕ್ಸ್​ನಲ್ಲಿ ಹಾಕುವ ಮೂಲಕ ಜಾನ್ವಿ ಕಪೂರ್​ ಪ್ರೀತಿ ತೋರಿಸಿದ್ದಾರೆ.

ಇದನ್ನೂ ಓದಿ:

Katrina Kaif Marriage Photos: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಫೋಟೋ ಆಲ್ಬಂ; ಅದ್ದೂರಿಯಾಗಿ ನಡೆಯಿತು ಸೆಲೆಬ್ರಿಟಿ ವಿವಾಹ

ಕತ್ರಿನಾ-ವಿಕ್ಕಿ ಲವ್​ಸ್ಟೋರಿ ಶುರು ಆಗಲು ಕಾರಣ ಆದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್​ ವಿವರ

Follow us on

Related Stories

Most Read Stories

Click on your DTH Provider to Add TV9 Kannada