ಕತ್ರಿನಾ-ವಿಕ್ಕಿ ಲವ್​ಸ್ಟೋರಿ ಶುರು ಆಗಲು ಕಾರಣ ಆದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್​ ವಿವರ

TV9 Digital Desk

| Edited By: ಮದನ್​ ಕುಮಾರ್​

Updated on:Dec 07, 2021 | 9:03 PM

Katrina Kaif Vicky Kaushal Love Story: ಒಂದೇ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸಿದ ನಟ-ನಟಿಯರ ನಡುವೆ ಪ್ರೀತಿ ಶುರುವಾಗುವುದು ಸಹಜ. ಆದರೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಯಾವ ಸಿನಿಮಾದಲ್ಲಿಯೂ ಒಟ್ಟಿಗೆ ಅಭಿನಯಿಸಿಲ್ಲ.

ಕತ್ರಿನಾ-ವಿಕ್ಕಿ ಲವ್​ಸ್ಟೋರಿ ಶುರು ಆಗಲು ಕಾರಣ ಆದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್​ ವಿವರ
ವಿಕ್ಕಿ ಕೌಶಲ್, ಕತ್ರಿನಾ ಕೈಫ್

ಯಾರಿಗೆ, ಯಾವಾಗ, ಯಾರ ಮೇಲೆ, ಹೇಗೆ ಪ್ರೀತಿ ಚಿಗುರುತ್ತದೆ ಅಂತ ಹೇಳೋದು ಕಷ್ಟ. ಹಣ, ಆಸ್ತಿ, ಪ್ರತಿಷ್ಠೆ, ಭಾಷೆ, ದೇಶ, ಬಣ್ಣ ಎಲ್ಲವನ್ನೂ ಮೀರಿ ಇಬ್ಬರ ನಡುವೆ ಪ್ರೇಮ್​ ಕಹಾನಿ ಶುರು ಆಗಬಹುದು. ಈಗ ಕತ್ರಿನಾ ಕೈಫ್​ (Katrina Kaif ) ಮತ್ತು ವಿಕ್ಕಿ ಕೌಶಲ್​ (Vicky Kaushal) ಲವ್​ಸ್ಟೋರಿ ಬಗ್ಗೆ ಚರ್ಚೆ ಆಗುತ್ತಿದೆ. ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ಅಭಿಮಾನಿಗಳೆಲ್ಲ ಪ್ರಶ್ನಿಸುತ್ತಿದ್ದಾರೆ. ಕತ್ರಿನಾ ಮೂಲತಃ ಬ್ರಿಟನ್​ನವರು. ಆದರೆ ಈಗ ಅವರು ಮದುವೆ ಆಗುತ್ತಿರುವುದು ಪಂಜಾಬಿ ಕುಟುಂಬದ ವಿಕ್ಕಿ ಕೌಶಲ್​ ಅವರನ್ನು. ರಾಜಸ್ಥಾನದ ಸಿಕ್ಸ್​ ಸೆನ್ಸಸ್​​ ಫೋರ್ಟ್​ ಹೋಟೆಲ್​​ನಲ್ಲಿ ಮದುವೆ ನಡೆಯಲಿದೆ. ತುಂಬ ಸೀಕ್ರೆಟ್​ ಆಗಿ ಈ ವಿವಾಹ ನೆರವೇರುತ್ತಿದೆ. ಇವರಿಬ್ಬರು ಡೇಟಿಂಗ್​ ಶುರುಮಾಡಲು ಕಾರಣವಾದ ಎರಡು ಪ್ರಸಂಗಗಳ ಬಗ್ಗೆ ಇಲ್ಲಿದೆ ಮಾಹಿತಿ..

ಒಂದೇ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸಿದ ನಟ-ನಟಿಯರ ನಡುವೆ ಪ್ರೀತಿ ಶುರುವಾಗುವುದು ಸಹಜ. ಆದರೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಯಾವ ಸಿನಿಮಾದಲ್ಲಿಯೂ ಒಟ್ಟಿಗೆ ಅಭಿನಯಿಸಿಲ್ಲ. ಆದರೂ ಅವರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿದ್ದು ‘ಕಾಫಿ ವಿಥ್​ ಕರಣ್’ ಶೋ ಎಂಬುದು ಅಚ್ಚರಿಯ ವಿಚಾರ.

2019ರ ವೇಳೆಗೆ ಕರಣ್​ ಜೋಹರ್​ ಅವರ ಕಾಫಿ ವಿಥ್​ ಕರಣ್​ ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್​ ಅತಿಥಿಯಾಗಿ ಭಾಗವಹಿಸಿದ್ದರು. ಮುಂದಿನ ಸಿನಿಮಾದಲ್ಲಿ ನೀವು ಯಾರ ಜೊತೆ ಅಭಿನಯಿಸಲು ಬಯಸುತ್ತೀರಿ ಎಂದು ಕರಣ್​ ಕೇಳಿದ ಪ್ರಶ್ನೆಗೆ ಉತ್ತರವಾಗಿ ವಿಕ್ಕಿ ಕೌಶಲ್​ ಹೆಸರನ್ನು ಕತ್ರಿನಾ ಹೇಳಿದ್ದರು. ‘ನಾವಿಬ್ಬರು ಜೋಡಿಯಾಗಿ ಚೆನ್ನಾಗಿ ಕಾಣಿಸುತ್ತೇವೆ’ ಎಂದು ಅವರು ಕಾರಣ ನೀಡಿದ್ದರು.

ಹಲವು ದಿನಗಳ ನಂತರ ವಿಕ್ಕಿ ಕೌಶಲ್​ ಅವರು ಇದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಕತ್ರಿನಾ ಹೇಳಿದ್ದ ಮಾತನ್ನು ಕರಣ್​ ಅವರು ವಿಕ್ಕಿಗೆ ತಿಳಿಸಿದರು. ಅದನ್ನು ಕೇಳಿ ವಿಕ್ಕಿಗೆ ಶಾಕ್​ ಆಗಿತ್ತು. ಖುಷಿಯಿಂದ ತಲೆ ತಿರುಗಿ ಬಿದ್ದವರಂತೆ ಅವರು ನಟಿಸಿದ್ದರು! ‘ನಾನು ಕೂಡ ಕತ್ರಿನಾ ಜೊತೆ ನಟಿಸಲು ಇಷ್ಟಪಡುತ್ತೇನೆ’ ಎಂದು ವಿಕ್ಕಿ ಹೇಳಿದ್ದರು.

ಮತ್ತೊಂದು ಚಾಟ್​ ಶೋನಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಜೊತೆಯಾಗಿ ಭಾಗವಹಿಸಿದ್ದರು. ಆ ವೇಳೆ ತಮ್ಮಿಬ್ಬರ ವೈಯಕ್ತಿಕ ಜೀವನ, ಇಷ್ಟ-ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅಲ್ಲಿಂದ ಅವರಿಬ್ಬರ ಕನೆಕ್ಷನ್​ ಬಿಗಿ ಆಯಿತು. ಆ ಬಳಿಕ ಅವರಿಬ್ಬರು ಡೇಟಿಂಗ್​ ಮಾಡಲು ಆರಂಭಿಸಿದರು. ಸ್ನೇಹಿತರೊಬ್ಬರು ಏರ್ಪಡಿಸಿದ್ದ ಪಾರ್ಟಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡರು. ಬಳಿಕ ಇಬ್ಬರೂ ಸೇರಿ ಮುಂಬೈನಲ್ಲಿ ಮನೆ ಹುಡುಕುತ್ತಿರುವುದು ಎಲ್ಲರ ಕಣ್ಣಿಗೆ ಬಿದ್ದಿತ್ತು. ಸಿದ್ದಾರ್ಥ್​​ ಮಲ್ಹೋತ್ರಾ ನಟನೆಯ ‘ಶೇರ್​ಷಾ’ ಚಿತ್ರದ ಪ್ರೀಮಿಯರ್​ ಶೋಗೆ ವಿಕ್ಕಿ-ಕತ್ರಿನಾ ಜೋಡಿಯಾಗಿ ಬಂದಿದ್ದರು. ಈಗ ಅವರಿಬ್ಬರ ಸಂಬಂಧಕ್ಕೆ ಮದುವೆಯ ಮುದ್ರೆ ಬೀಳುತ್ತಿದೆ.

ಇದನ್ನೂ ಓದಿ:

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಕುಟುಂಬದವರು; ಹೇಳಿದ್ದು ಒಂದೇ ಮಾತು

ಕತ್ರಿನಾ ಮದುವೆಗೆ ಗಾಜಿನ ಮಂಟಪ; 7 ಕುದುರೆಗಳ ಜತೆ ಎಂಟ್ರಿ ನೀಡಲಿರುವ ಮದುಮಗ ವಿಕ್ಕಿ ಕೌಶಲ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada