ಸೀಕ್ರೆಟ್ ಆಗಿ ಹಸೆಮಣೆ ಏರಿದ ಕತ್ರಿನಾ ಕೈಫ್-ವಿಕ್ಕಿ ಕೌಶಲ್ಗೆ ಬಾಲಿವುಡ್ ಸೆಲೆಬ್ರಿಟಿಗಳು ವಿಶ್ ಮಾಡಿದ್ದು ಹೇಗೆ?
Katrina Kaif Vicky Kaushal Wedding: ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳನ್ನು ಕತ್ರಿನಾ ಕೈಫ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 77 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್ ಮಾಡಿದ್ದಾರೆ.
ಭಾರಿ ಗುಟ್ಟಾಗಿ ಕತ್ರಿನಾ ಕೈಫ್ (Katrina Kaif ) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆ ನಡೆದಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಈ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ತಾವು ಮದುವೆ ಆಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಒಂದೇ ಒಂದು ಹೇಳಿಕೆಯನ್ನೂ ನೀಡದೇ ಸಿಕ್ಕಾಪಟ್ಟೆ ಸೀಕ್ರೆಟ್ ಮಾಡಿದ್ದರು. ಬಾಲಿವುಡ್ನ ಇತರೆ ಸೆಲೆಬ್ರಿಟಿಗಳು ಕೂಡ ಇವರ ವಿವಾಹದ (Katrina Kaif Vicky Kaushal Marriage) ಬಗ್ಗೆ ಕಿಂಚಿತ್ತೂ ಮಾಹಿತಿ ಹಂಚಿಕೊಂಡಿರಲಿಲ್ಲ. ಗುರುವಾರ (ಡಿ.9) ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಈ ಮದುವೆ ನಡೆದಿದೆ. ಬಳಿಕ ಕತ್ರಿನಾ ಮತ್ತು ವಿಕ್ಕಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವಾರು ಸೆಲೆಬ್ರಿಟಿಗಳು ಮನಸಾರೆ ವಿಶ್ ಮಾಡಿದ್ದಾರೆ.
ಕತ್ರಿನಾ ಕೈಫ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡು ಕೆಲವೇ ಗಂಟೆಗಳು ಕಳೆಯುವುದರೊಳಗೆ 77 ಲಕ್ಷಕ್ಕೂ ಅಧಿಕ ಮಂದಿ ಅವುಗಳನ್ನು ಲೈಕ್ ಮಾಡಿದ್ದಾರೆ. ವಿಕ್ಕಿ ಕೌಶಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಫೋಟೋಗಳಿಗೆ 53 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಬಟನ್ ಒತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳಾದ ಟ್ವಿಂಕಲ್ ಖನ್ನಾ, ಪರಿಣೀತಿ ಚೋಪ್ರಾ, ಹೃತಿಕ್ ರೋಷನ್, ಪ್ರಿಯಾಂಕಾ ಚೋಪ್ರಾ, ಸೋನಮ್ ಕಪೂರ್, ನಿಕ್ ಜೋನಸ್, ಬಿಪಾಶಾ ಬಸು, ಇಶಾನ್ ಕಟ್ಟರ್, ಕರೀನಾ ಕಪೂರ್ ಖಾನ್, ಜಾನ್ವಿ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಗಾಯಕಿ ಪಲಕ್ ಮುಚ್ಚಲ್ ಸೇರಿದಂತೆ ಅನೇಕ ತಾರೆಯರು ಈ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
‘ಜೀವನ ಪರ್ಯಂತ ನಿಮ್ಮಿಬ್ಬರ ನಡುವೆ ನಗು, ನಿಷ್ಠೆ, ಪ್ರೀತಿ, ಗೌರವ, ಸಹಬಾಳ್ವೆ ಇರಲಿ’ ಎಂದು ದೀಪಿಕಾ ಪಡುಕೋಣೆ ವಿಶ್ ಮಾಡಿದ್ದಾರೆ. ‘ಓಹ್ ಮೈ ಗಾಡ್.. ನೀವಿಬ್ಬರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಆಲಿಯಾ ಭಟ್ ಕಮೆಂಟ್ ಮಾಡಿದ್ದಾರೆ. ಹತ್ತಾರು ಹಾರ್ಟ್ ಎಮೋಜಿಗಳನ್ನು ಕಮೆಂಟ್ ಬಾಕ್ಸ್ನಲ್ಲಿ ಹಾಕುವ ಮೂಲಕ ಜಾನ್ವಿ ಕಪೂರ್ ಪ್ರೀತಿ ತೋರಿಸಿದ್ದಾರೆ.
View this post on Instagram
‘ನಿಮ್ಮಿಬ್ಬರನ್ನು ನೋಡಿ ತುಂಬ ಖುಷಿ ಆಗುತ್ತಿದೆ. ನನ್ನ ಸ್ನೇಹಿತೆಯ ಮದುವೆ. ಇಬ್ಬರಿಗೂ ಅಭಿನಂದನೆಗಳು. ನಿಮ್ಮದು ಪರ್ಫೆಕ್ಟ್ ಜೋಡಿ’ ಎಂದು ಪ್ರಿಯಾಂಕಾ ಚೋಪ್ರಾ ಶುಭ ಕೋರಿದ್ದಾರೆ.
ಇದನ್ನೂ ಓದಿ:
ಕತ್ರಿನಾ ಕೈಫ್ಗಿದ್ದಾರೆ ಆರು ಜನ ಸಹೋದರಿಯರು, ಓರ್ವ ಸಹೋದರ: ಇಲ್ಲಿದೆ ನೋಡಿ ಕತ್ರಿನಾ ಒಡಹುಟ್ಟಿದವರ ಪರಿಚಯ