ಕತ್ರಿನಾ ಕೈಫ್ಗಿದ್ದಾರೆ ಆರು ಜನ ಸಹೋದರಿಯರು, ಓರ್ವ ಸಹೋದರ: ಇಲ್ಲಿದೆ ನೋಡಿ ಕತ್ರಿನಾ ಒಡಹುಟ್ಟಿದವರ ಪರಿಚಯ
ಸ್ಟೆಫನಿ, ಕ್ರಿಸ್ಟಿನ್, ನಟಾಚಾ ಹಿರಿಯ ಸಹೋದರಿಯರು ಹಾಗೂ ಸೆಬಾಸ್ಟಿನ್ ಕತ್ರಿನಾ ಅವರ ಸಹೋದರ. ಇಸಬೆಲ್ಲಾ, ಮೆಲಿಸ್ಟಾ ಮತ್ತು ಸೋನಿಯ ಕಿರಿಯ ಸಹೋದರಿಯರು. ಕತ್ರಿನಾ ತಾಯಿ ಸುಝೇನ್ ಟರ್ಕೋಟ್ ಅವರೊಂದಿಗಿನ ಫೋಟೋವನ್ನು ಕತ್ರಿನಾ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು
ಸದ್ಯ ಬಾಲಿವುಡ್ ಸೇರಿದಂತೆ ಸಿನಿಮಾ ರಂಗದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯದ್ದೇ ಸುದ್ದಿ. ಅಭಿಮಾನಿಗಳಂತೂ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯ ಫೋಟೊಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇಂಟರ್ನೆಟ್ನಲ್ಲಿ ಕತ್ರಿನಾ ವಿಕ್ಕಿ ಮದುವೆ ಬಗೆಗಿನ ವಿಚಾರಗಳ ಹುಡುಕಾಟ ಜೋರಾಗಿಯೇ ಇದೆ. ಕತ್ರಿನಾ ಕೈಫ್ ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಬಹುಬೇಡಿಕೆಯ ನಟಿ. ಆದರೆ ಕತ್ರಿನಾ ಅವರ ಕುಟುಂಬ ಸದಸ್ಯರು ಕ್ಯಾಮರಾಗಳ ಮುಂದೆ ಕಾಣಿಸಿಕೊಳ್ಳದೆ ಖಾಸಗಿಯಾಗಿಯೇ ಇದ್ದಾರೆ. ಕತ್ರಿನಾಗೆ ಆರು ಜನ ಸಹೋದರಿಯರು ಮತ್ತು ಓರ್ವ ಸಹೋದರ.
ಸ್ಟೆಫನಿ, ಕ್ರಿಸ್ಟಿನ್, ನಟಾಚಾ ಹಿರಿಯ ಸಹೋದರಿಯರು ಹಾಗೂ ಸೆಬಾಸ್ಟಿನ್ ಕತ್ರಿನಾ ಅವರ ಸಹೋದರ. ಇಸಬೆಲ್ಲಾ, ಮೆಲಿಸ್ಟಾ ಮತ್ತು ಸೋನಿಯ ಕಿರಿಯ ಸಹೋದರಿಯರು. ಕತ್ರಿನಾ ತಾಯಿ ಸುಝೇನ್ ಟರ್ಕೋಟ್. ಅವರೊಂದಿಗಿನ ಫೋಟೋವನ್ನು ಕತ್ರಿನಾ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕತ್ರಿನಾ ಸಹೋದರಿ ಇಸಬೆಲ್ಲಾ ಕೈಪ್ ಮಾತ್ರ ಸಿನಿಮಾ ಲೋಕಕ್ಕೆ ಬಂದಿದ್ದು ಜನರಿಗೆ ಪರಿಚಿತವಾಗಿದ್ದಾರೆ. ಇಸಬೆಲ್ಲಾ ಈ ವರೆಗೆ ಸುಸ್ವಾಗತಂ, ಖುಷ್ಮದೀದ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕತ್ರಿನಾ ಸಹೋದರ ಸೆಬಾಸ್ಟಿಯನ್ ಪೀಠೋಪಕರಣಗಳ ವಿನ್ಯಾಸ ಮತ್ತು ಕ್ರಾಪ್ಟ್ ನಲ್ಲಿ ಪದವಿಯನ್ನು ಪಡೆದಿದ್ದಾರೆ. ಕತ್ರಿನ ಅವರ ಹಿರಿಯಸಹೋದರಿ ಮೆಲಿಸ್ಟಾ ಗಣಿತ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ. ಇವರು ಲಂಡನ್ನ ಇಂಪೀರಿಯಲ್ ಕಾಲೇಜಿನಿಂದ ಪಿಎಚ್ಡಿ ಪದವಿಯನ್ನೂ ಪಡೆದಿದ್ದಾರೆ. ಕತ್ರಿನಾ ಆವರ ಉಳಿದ ಸಹೋದರಿಯರು ಹಾಗೂ ಕುಟುಂಬದಿತರ ಸದಸ್ಯರು ತೀರಾ ಖಾಸಗಿ ಜೀವನ ನಡೆಸುತ್ತಿದ್ದು ಕ್ಯಾಮರಾ ಕಣ್ಣಿಗಾಗಲೀ ಅಥವಾ ಜನರ ನಡುವೆಯಾಗಲೀ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಕತ್ರಿನಾ ಕೈಫ್ ಮಾತ್ರ ಬಾಲಿವುಡ್ ಪ್ರಪಂಚದಲ್ಲಿ ತನ್ನದೇ ಆದ ನೇಮ್ ಮತ್ತು ಫೇಮ್ ಅನ್ನು ಗಳಿಸಿಕೊಡಿದ್ದಾರೆ. ಇದೀಗ ವಿಕ್ಕಿ ಕೌಶಲ್ ಅವರೊಂದಿಗೆ ರಾಜಸ್ಥಾನದ ಖಾಸಗಿ ಹೋಟೇಲ್ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಇದನ್ನೂ ಓದಿ:
ವಿರಾಟ್- ಅನುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ ಕತ್ರಿನಾ ಕೈಫ್ – ವಿಕ್ಕಿ ಕೌಶಲ್
ರಾಧಿಕಾ ಪಂಡಿತ್-ಯಶ್ ವಿವಾಹಕ್ಕೆ ಐದು ವರ್ಷ; ವಿಶೇಷವಾಗಿ ವಿಶ್ ಮಾಡಿದ ನಟಿ
Published On - 3:50 pm, Thu, 9 December 21