ಕಾಲೇಜು ಅರ್ಧಕ್ಕೆ ತೊರೆದ ಬಗ್ಗೆ ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್ ಹೇಳಿದ್ದೇನು ಗೊತ್ತಾ? ಬಿಗ್​ಬಿ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದ್ದು ಯಾವಾಗ? ಇಲ್ಲಿದೆ ಡೀಟೇಲ್ಸ್​

ಅಭಿಷೇಕ್​ ಬಚ್ಚನ್​ ಅವರು ಸ್ವಿಡ್ಜರ್​ಲ್ಯಾಂಡ್​ನ ಐಗ್ಲಾನ್​ ಕಾಲೇಜ್​ ಎಂಬ ಬೋರ್ಡಿಂಗ್​ ಸ್ಕೂಲ್​ನಲ್ಲಿ ಓದಿದ ಬಳಿಕ ಬೋಸ್ಟನ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈ ಸಮಯದಲ್ಲಿ ಅಮಿತಾಬ್​ ಬಚ್ಚನ್​ ಅವರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು. ಆದ್ದರಿಂದ  ಅಮಿತಾಬ್​ ಅವರು ತಮ್ಮ ಸಿಬ್ಬಂದಿಯ ಬಳಿ ಹಣವನ್ನು ಪಡೆದು ಅಭಿಷೇಕ್ ಅವರನ್ನು ಓದಿಸುತ್ತಿದ್ದರು.

ಕಾಲೇಜು ಅರ್ಧಕ್ಕೆ ತೊರೆದ ಬಗ್ಗೆ ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್ ಹೇಳಿದ್ದೇನು ಗೊತ್ತಾ? ಬಿಗ್​ಬಿ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದ್ದು ಯಾವಾಗ? ಇಲ್ಲಿದೆ ಡೀಟೇಲ್ಸ್​
ತಂದೆ ತಾಯಿಯೊಂದಿಗೆ ಅಭಿಷೇಕ್​ ಬಚ್ಚನ್
Follow us
TV9 Web
| Updated By: Pavitra Bhat Jigalemane

Updated on: Dec 09, 2021 | 11:49 AM

ರಣವೀರ್​ ಅಲ್ಲಾಬಾಡಿಯ ಅವರ ಜನಪ್ರಿಯ ಟಾಕ್​ ಶೋ  ರಣ್​ವೀರ್​ ಶೋದಲ್ಲಿ ಬಾಲಿವುಡ್​ ನಟ ಅಭಿಷೇಕ್ ಬಚ್ಚನ್​ ತಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ತಮ್ಮ ಕುಟುಂಬ ಎದುರಿಸುತ್ತಿದ್ದ ಆರ್ಥಿಕ ಪರಿಸ್ಥಿಯ ಬಗ್ಗೆ ಹಾಗೂ ತಾವು ಅರ್ಧದಲ್ಲೇ ಕಾಲೇಜು ತೊರೆದುದರ ಬಗ್ಗೆ ಮಾತನಾಡಿದ್ದಾರೆ. ನಾನು ಕಾಲೇಜಿಗೆ ಹೋಗಬೇಕಾದರೆ ನನ್ನ ತಂದೆ ಅವರ ಸಿಬ್ಬಂದಿಯಿಂದ ಹಣವನ್ನು ಸಾಲವಾಗಿ ಪಡೆದು ನನ್ನನ್ನು ಓದಿಸುತ್ತಿದ್ದರು. ಹೀಗಾಗಿ ನಾನು ಕಾಲೇಜು ತೊರೆದು ಅಪ್ಪನೊಂದಿಗೆ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ನಿರ್ಧರಿಸಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಭಿಷೇಕ್​ ಬಚ್ಚನ್​ ಅವರು ಸ್ವಿಡ್ಜರ್​ಲ್ಯಾಂಡ್​ನ ಐಗ್ಲಾನ್​ ಕಾಲೇಜ್​ ಎಂಬ ಬೋರ್ಡಿಂಗ್​ ಸ್ಕೂಲ್​ನಲ್ಲಿ ಓದಿದ ಬಳಿಕ ಬೋಸ್ಟನ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈ ಸಮಯದಲ್ಲಿ ಅಮಿತಾಬ್​ ಬಚ್ಚನ್​ ಅವರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು. ಆದ್ದರಿಂದ  ಅಮಿತಾಬ್​ ಅವರು ತಮ್ಮ ಸಿಬ್ಬಂದಿಯ ಬಳಿ ಹಣವನ್ನು ಪಡೆದು ಅಭಿಷೇಕ್ ಅವರನ್ನು ಓದಿಸುತ್ತಿದ್ದರು. ಮುಂದುವರೆದು ಮಾತನಾಡಿದ ಅಭಿಷೇಕ್ ಬಚ್ಚನ್​ ನನ್ನ ಕುಟುಂಬ ಹಣದ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿದ ಮೇಲೆ ನಾನು ಕಾಲೇಜು ತೊರೆದು ತಂದೆಯೊಂದಿಗೆ ಇರಲು ಬಯಸಿದೆ. ಇದಕ್ಕಾಗಿ ತಂದೆಯ ಬಳಿಯೇ ನಾನು ನಿಮ್ಮೊಂದಿಗೆ ಇರಲು ಬಯಸುತ್ತೇನೆ. ಮಗನಾಗಿ ನಿಮ್ಮ ಕಷ್ಟದ ದಿನಗಳಲ್ಲಿ ನಾನು ನಿಲ್ಲುತ್ತೇನೆ ಎಂದು ಕಾಲೇಜು ತೊರೆದು ತಂದೆಯ ಪರವಾಗಿ ನಿಂತಿದ್ದೆ ಎಂದು ಹೇಳಿದ್ದಾರೆ.

1995ರಲ್ಲಿ ಅಮಿತಾಬ್​ ಬಚ್ಚನ್​ ಅವರು ಕಾರ್ಪೋರೇಷನ್​ ಲಿಮಿಟೆಡ್​ ಅಥವಾ ಎಬಿಸಿಎಲ್​ ವ್ಯಾಪಾರ ಉದ್ಯಮವನ್ನು ಆರಂಭಿಸಿದ್ದರು. ಆದರೆ ಉದ್ಯಮದಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಇದೇ ವೇಳೆಯಲ್ಲಿ ಅಭಿಷೇಕ್​ ಬಚ್ಚನ್ ಕಾಲೇಜು ದಿನಗಳಿದ್ದರು. 1995-1997 ವೇಳೆಗೆ ಅಭಿಷೇಕ್ ಬಚ್ಚನ್​ ಅವರು ಕಾಲೇಜು ತೊರೆದು ಭಾರತಕ್ಕೆ ಮರಳಿ ತಂದೆಯೊಂದಿಗೆ ಸೇರಿಕೊಂಡಿದ್ದರು. ಈ ಕುರಿತು ಚಿಟ್​ ಚಾಟ್​ ಶೋನಲ್ಲಿ ತನ್ನ ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ ಕುರಿತು ಅಭಿಷೆಕ್​ ಬಚ್ಚನ್​ ಮಾತನಾಡಿದ್ದಾರೆ. ಅಭಿಷೇಕ್​ ಬಚ್ಚನ್ ಅವರು 2000ರಲ್ಲಿ ಜೆಪಿ ದತ್ತಾ ಅವರ ರೆಪ್ಯೂಜಿ ಸಿನಿಮಾ ಮೂಲಕ ಬಾಲಿವುಡ್​ ಗೆ ನಟನಾಗಿ ವೃತ್ತಿ ಆರಂಭಿಸಿದ್ದರು. ಈ ಚಿತ್ರದಲ್ಲಿ ಅಭಿಷೇಕ್​ ಬಚ್ಚನ್​ ಅವರಿಗೆ ಕರೀನಾ ಕಪೂರ್​ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

2000ರ ನಂತರ ಬಿಗ್​ ಬಿ ಫ್ಯಾಮಿಲಿ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಂಡಿತ್ತು. ಅಮಿತಾಬ್​ ಬಚ್ಚನ್​ ಕೂಡ ಕೌನ್​ ಬನೇಗಾ ಕರೊಡ್​ಪತಿ ಕಾರ್ಯಕ್ರಮದ ನಿರೂಪಣೆಯನ್ನು ಆರಂಭಿಸಿದರು. ಜತೆಗೆ ಅಭಿಷೇಕ್​ ಬಚ್ಚನ್ ಕೂಡ ತಮ್ಮ ಸಿನಿಮಾ ವೃತ್ತಿಯಲ್ಲಿ ಹೆಚ್ಚು ಪಾತ್ರಗಳನ್ನು ಪಡೆದುಕೊಂಡರು.

ಇದನ್ನೂ ಓದಿ:

RRR Trailer: ದೃಶ್ಯ ವೈಭವಕ್ಕೆ ಸಾಕ್ಷಿಯಾದ ‘ಆರ್​ಆರ್​ಆರ್​’ ಟ್ರೇಲರ್​; ಕೌತುಕ ಹೆಚ್ಚಿಸಿದ ರಾಜಮೌಳಿ

ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ಮೆಹಂದಿ ಕಾರ್ಯಕ್ರಮದ ಫೋಟೋ ಲೀಕ್​? ಫ್ಯಾಕ್ಟ್​ ​ಚೆಕ್​ನಲ್ಲಿ ಏನಿದೆ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್