Katrina Vicky Kaushal Wedding: ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ಶ್ರೀಮಂತೆ? ಇಲ್ಲಿದೆ ಇಬ್ಬರ ನೆಟ್​ವರ್ತ್​

TV9 Digital Desk

| Edited By: TV9 SEO

Updated on:Dec 09, 2021 | 12:03 PM

Katrina Kaif Vicky Kaushal Net Worth: ಫೋರ್ಬ್ಸ್ ಇಂಡಿಯಾ 2019ರಲ್ಲಿ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅಲ್ಲದೆ, ಸೆಲೆಬ್ರಿಟಿಗಳ ಗಳಿಕೆ ಬಗ್ಗೆಯೂ ಮಾಹಿತಿ ನೀಡಿತ್ತು. ಈ ಪಟ್ಟಿಯ ಪ್ರಕಾರ, ಕತ್ರಿನಾ, 2019 ರಲ್ಲಿ 23.63 ಕೋಟಿ ರೂ. ಗಳಿಸಿದರೆ, ವಿಕ್ಕಿ 10.42 ಕೋಟಿ ರೂಪಾಯಿ ಗಳಿಕೆ ಮಾಡಿದ್ದರು.

Katrina Vicky Kaushal Wedding: ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ಶ್ರೀಮಂತೆ? ಇಲ್ಲಿದೆ ಇಬ್ಬರ ನೆಟ್​ವರ್ತ್​
ಕತ್ರಿನಾ ಕೈಫ್, ವಿಕ್ಕಿ ಕೌಶಲ್

Katrina Kaif Vicky Kaushal Net Worth: ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಇಬ್ಬರೂ ಮದುವೆ ಆಗುತ್ತಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ಇವರ ಮದುವೆ ನೆರವೇರುತ್ತಿದೆ. ಬಾಲಿವುಡ್​ನ ಈ ಸೆಲೆಬ್ರಿಟಿ ಕಪಲ್​ ವಿವಾಹ ವಿಚಾರದಲ್ಲಿ ಸಾಕಷ್ಟು ಗುಟ್ಟು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ಇಬ್ಬರ ಆಸ್ತಿ ಮೌಲ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಇಬ್ಬರೂ ಪಡೆಯುವ ಸಂಭಾವನೆ ಎಷ್ಟು? ಇವರ ನೆಟ್​ವರ್ತ್​ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಫೋರ್ಬ್ಸ್ ಇಂಡಿಯಾ 2019ರಲ್ಲಿ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅಲ್ಲದೆ, ಸೆಲೆಬ್ರಿಟಿಗಳ ಗಳಿಕೆ ಬಗ್ಗೆಯೂ ಮಾಹಿತಿ ನೀಡಿತ್ತು. ಈ ಪಟ್ಟಿಯ ಪ್ರಕಾರ, ಕತ್ರಿನಾ, 2019 ರಲ್ಲಿ 23.63 ಕೋಟಿ ರೂ. ಗಳಿಸಿದರೆ, ವಿಕ್ಕಿ 10.42 ಕೋಟಿ ರೂಪಾಯಿ ಗಳಿಕೆ ಮಾಡಿದ್ದರು. ಸಿನಿಮಾ ಮಾತ್ರವಲ್ಲದೆ ಹಲವು ಬ್ರ್ಯಾಂಡ್​ಗಳಿಂದಲೂ ಇವರಿಗೆ ಹಣ ಹರಿದು ಬಂದಿತ್ತು.

ವಯಸ್ಸಾದಂತೆ ಹೀರೋಯಿನ್​ಗಳಿಗೆ ಬೇಡಿಕೆ ಕುಗ್ಗುತ್ತದೆ. ಕತ್ರಿನಾ ವಿಚಾರದಲ್ಲೂ ಹೀಗೆಯೇ ಆಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಅವರಿಗೆ ಈಗ ಮೊದಲಿದ್ದಷ್ಟು ಬೇಡಿಕೆ ಇಲ್ಲ ಎಂಬ ಮಾತಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಅವರ ಆದಾಯ ಗಳಿಕೆಯಲ್ಲಿ ಇಳಿಕೆ ಕಂಡಿದೆ. 2018ರಲ್ಲಿ ಅವರ ವರ್ಷದ ಆದಾಯ 33.67 ಕೋಟಿ ರೂಪಾಯಿ ಇತ್ತು. 2019ರಲ್ಲಿ ಇದು 23.63 ಕೋಟಿ ರೂಪಾಯಿಗೆ ಇಳಿಕೆ ಕಂಡಿತ್ತು. ವಿಕ್ಕಿಗೆ ಹೋಲಿಸಿದರೆ ಕತ್ರಿನಾ ಸಾಕಷ್ಟು ದೊಡ್ಡ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ.

ಹಾಗಾದರೆ ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಕತ್ರಿನಾ ಕೈಫ್​ ಒಟ್ಟೂ ಆಸ್ತಿ ಮೌಲ್ಯ 240 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು, ವಿಕ್ಕಿ ಕೌಶಲ್​ ಆಸ್ತಿ ಮೊತ್ತ 25-30 ಕೋಟಿ ರೂಪಾಯಿ ಇದೆ ಎಂದು ವರದಿ ಆಗಿದೆ. ಕತ್ರಿನಾ ಅವರು ವಿಕ್ಕಿ ಕೌಶಲ್​ಗಿಂತ ಸಾಕಷ್ಟು ಮೊದಲೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದರು. ಈ ಕಾರಣಕ್ಕೆ ವಿಕ್ಕಿಗಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಲು ​ಒಂದು ವೆಲ್​ಕಮ್​ ನೋಟ್​ ನೀಡಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಅದರ ಫೋಟೋ ವೈರಲ್​ ಆಗುತ್ತಿದೆ. ‘ಕಡೆಗೂ ನೀವು ಇಲ್ಲಿಗೆ ಬಂದು ತಲುಪಿದ್ದೀರಿ.. ಜೈಪುರದಿಂದ ರಣತಂಬೂರ್​ ತನಕ ನಿಮ್ಮ ಪ್ರಯಾಣ ಚೆನ್ನಾಗಿತ್ತೆಂದು ಭಾವಿಸುತ್ತೇವೆ. ನೀವು ಬರುವಷ್ಟರಲ್ಲಿ ನಾವು ನಿಮಗಾಗಿ ಸಿದ್ಧಪಡಿಸಿದ ಆಹಾರಗಳನ್ನು ಸ್ವೀಕರಿಸಿ’ ಎಂದು ಈ ವೆಲ್​ಕಮ್​ ನೋಟ್​ನಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ, ಇದರ ಜೊತೆಗೆ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಏನದು? ಫೋಟೋ, ವಿಡಿಯೋ ಸೆರೆಹಿಡಿಯಬಾರದು ಎಂಬ ಎಚ್ಚರಿಕೆ ಸಂದೇಶ!

ಇದನ್ನೂ ಓದಿ: ಮದುವೆಯಲ್ಲಿ ಕತ್ರಿನಾ​ ಧರಿಸುವ ಬಟ್ಟೆ ಬಗ್ಗೆಯೂ ಗುಟ್ಟು; ಇಷ್ಟೆಲ್ಲ ರಹಸ್ಯ ಕಾಪಾಡುತ್ತಿರೋದು ಯಾಕೆ?

ಕತ್ರಿನಾ-ವಿಕ್ಕಿ ಮದುವೆಯ ಅತಿಥಿಗಳಿಗೆ ವೆಲ್​ಕಮ್ ನೋಟ್​; ಈ ಮೂಲಕ ಮುಖ್ಯ ವಿಚಾರ ತಿಳಿಸಿದ ಜೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada