ಮದುವೆಯಲ್ಲಿ ಕತ್ರಿನಾ​ ಧರಿಸುವ ಬಟ್ಟೆ ಬಗ್ಗೆಯೂ ಗುಟ್ಟು; ಇಷ್ಟೆಲ್ಲ ರಹಸ್ಯ ಕಾಪಾಡುತ್ತಿರೋದು ಯಾಕೆ?

ಮದುವೆಯಲ್ಲಿ ಕತ್ರಿನಾ​ ಧರಿಸುವ ಬಟ್ಟೆ ಬಗ್ಗೆಯೂ ಗುಟ್ಟು; ಇಷ್ಟೆಲ್ಲ ರಹಸ್ಯ ಕಾಪಾಡುತ್ತಿರೋದು ಯಾಕೆ?
ಕತ್ರಿನಾ ಕೈಫ್, ವಿಕ್ಕಿ ಕೌಶಲ್

Katrina Kaif Vicky Kaushal Wedding: ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ಸೀಕ್ರೆಟ್ ಆಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಕುರಿತು ಯಾವುದೇ ಮಾಹಿತಿ ಲೀಕ್​ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

TV9kannada Web Team

| Edited By: Madan Kumar

Dec 08, 2021 | 8:34 AM

ಸೆಲೆಬ್ರಿಟಿಗಳ ಮದುವೆ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕೌತುಕ ಇದ್ದೇ ಇರುತ್ತದೆ. ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಬಗ್ಗೆಯೂ ಜನರು ಕುತೂಹಲ ಇಟ್ಟುಕೊಂಡಿದ್ದಾರೆ. ಆದರೆ ತಮ್ಮ ವಿವಾಹದ ಬಗ್ಗೆ ಈ ಜೋಡಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಮದುವೆ ಮಂಟಪಕ್ಕೆ ಬರುವಾಗ ಕತ್ರಿನಾ ಕೈಫ್​ ಅವರು ಯಾವ ಬಟ್ಟೆ ಧರಿಸುತ್ತಾರೆ ಎಂಬುದರ ಬಗ್ಗೆಯೂ ರಹಸ್ಯ ಕಾಪಾಡಿಕೊಳ್ಳಲಾಗಿದೆ! ಹಲವು ಬಗೆಯ ಕಾಸ್ಟ್ಯೂಮ್​ಗಳು ಈ ಮೊದಲೇ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮನೆ ತಲುಪಿವೆ. ಆ ಪೈಕಿ ಅವರು ಯಾವುದನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಗುಟ್ಟಾಗಿ ಉಳಿಸಲಾಗಿದೆ. ಸ್ವತಃ ಡಿಸೈನರ್​ಗಳಿಗೂ ಈ ವಿಚಾರವನ್ನು ಅವರು ತಿಳಿಸಿಲ್ಲ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಕುರಿತು ಈ ಪರಿ ಗುಟ್ಟು ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ.

ಈ ಸ್ಟಾರ್​ ಜೋಡಿಯ ಮದುವೆಯ ದೃಶ್ಯಗಳನ್ನು ಪ್ರಸಾರ ಮಾಡಲು ಒಂದು ಓಟಿಟಿ ಸಂಸ್ಥೆ ಮುಂದೆ ಬಂದಿದೆ. ಆ ಸಂಸ್ಥೆಯ ಜೊತೆಗೆ 100 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಹರಡಿದೆ. ಆ ಒಪ್ಪಂದದ ಪ್ರಕಾರ ಮದುವೆ ಕುರಿತು ಯಾವುದೇ ವಿವರಗಳು ಮೊದಲೇ ಲೀಕ್​ ಆಗುವಂತಿಲ್ಲ. ಹಾಗಾಗಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ಇಷ್ಟೊಂದು ಸೀಕ್ರೆಟ್​ ಆಗಿ ಹಸೆಮಣೆ ಏರುತ್ತಿದ್ದಾರೆ.

ವಿವಾಹ ನಡೆಯುವ ಸ್ಥಳಕ್ಕೆ ಆಗಮಿಸುವ ಅತಿಥಿಗಳು ಮೊಬೈಲ್​ ತರುವಂತಿಲ್ಲ. ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯುವಂತಿಲ್ಲ. ಮದುವೆ ಎಲ್ಲಿ ನಡೆಯುತ್ತಿದೆ ಎಂಬ ವಿಳಾಸವನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಹೀಗೆ ಅತಿಥಿಗಳಿಗೆ ಹತ್ತಾರು ಷರತ್ತುಗಳನ್ನು ವಿಧಿಸಲಾಗಿದೆ. ಮದುವೆ ನಡೆಯುವ ಹೋಟೆಲ್​ ಸುತ್ತಮುತ್ತ ಯಾವುದೇ ಡ್ರೋನ್​ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್​ ಕಂಡುಬಂದರೆ ಅದನ್ನು ಶೂಟ್​ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ವರದಿ ಆಗಿದೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಮಂಟಪದ ಬಗ್ಗೆ ಅಚ್ಚರಿಯ ಮಾಹಿತಿ ಹರಡಿದೆ. ಜಗಮಗಿಸುವ ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್​ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್​ ಎಂಟ್ರಿ ನೀಡಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಸ್ಟಾರ್ ಜೋಡಿಯ ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.

ಇದನ್ನೂ ಓದಿ:

ಕತ್ರಿನಾ-ವಿಕ್ಕಿ ಲವ್​ಸ್ಟೋರಿ ಶುರು ಆಗಲು ಕಾರಣ ಆದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್​ ವಿವರ

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಕುಟುಂಬದವರು; ಹೇಳಿದ್ದು ಒಂದೇ ಮಾತು

Follow us on

Related Stories

Most Read Stories

Click on your DTH Provider to Add TV9 Kannada