ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ಮೆಹಂದಿ ಕಾರ್ಯಕ್ರಮದ ಫೋಟೋ ಲೀಕ್​? ಫ್ಯಾಕ್ಟ್​ ​ಚೆಕ್​ನಲ್ಲಿ ಏನಿದೆ?

ಇಂದು (ಡಿಸೆಂಬರ್​ 9) ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ದಾಂಪತ್ಯ ಜೀವನಕ್ಕೆ ಕಾಲಿರಸಲಿದ್ದಾರೆ. ಈಗಾಗಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟ -ನಟಿಯ ಮದುವೆಯ ಫೋಟೊಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ಮೆಹಂದಿ ಕಾರ್ಯಕ್ರಮದ ಫೋಟೋ ಲೀಕ್​? ಫ್ಯಾಕ್ಟ್​ ​ಚೆಕ್​ನಲ್ಲಿ ಏನಿದೆ?
ಕತ್ರಿನಾ ಕೈಫ್​

ಬಾಲಿವುಡ್​ನಲ್ಲಿ ಸದ್ಯ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆಯದ್ದೇ ಸುದ್ದಿ. ಮದುವೆಗೆ ಆಗಮಿಸುವವರು ಯಾವುದೇ ರೀತಿಯ ಫೋನ್​ ಅಥವಾ ಕ್ಯಾಮರಾವನ್ನು ಬಳಸುವಂತಿಲ್ಲ. ಮತ್ತು ಸಮಾರಂಭಕ್ಕೆ ಬಂದ ಸಮಯದಲ್ಲಿ ಹೊರಗಿನವರೊಂದಿಗೆ ಸಂಪರ್ಕ ಹೊಂದಿರುವಂತಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ನಟಿ ಕತ್ರಿನಾ ಕೈಫ್​ ಮದುವೆಯ ಮೆಹಂದಿ ಕಾರ್ಯಕ್ರಮದ್ದು ಎನ್ನಲಾದ ಫೋಟೋವೊಂದು ವೈರಲ್​ಆಗಿದೆ.  ‘ಅವಳು ತನ್ನ ಜೀವನದ ವಿಶೇಷವಾದ ದಿನವನ್ನು ಆನಂದಿಸುತ್ತಿದ್ದಾಳೆಎಂದು ಬರೆದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಮಾಡಲಾಗಿದೆ.  ಇದರ ಅಸಲಿಯತ್ತು ಈಗ ಹೊರ ಬಿದ್ದಿದೆ. 

ಈ ಹಿಂದೆ ನಟ ಅಮಿತಾಭ್​​ ಬಚ್ಚನ್​ ಅವರೊಂದಿಗೆ ಆಭರಣದ ಜಾಹಿರಾತಿನಲ್ಲಿ ಕತ್ರಿನಾ ಮದುವೆಯ ಉಡುಗೆಯಲ್ಲಿ ಮೆಹಂದಿ ಹಾಕಿಕೊಂಡು ಕಾಣಸಿಕೊಂಡಿದ್ದರು. ಅದರ ಫೋಟೋಗಳನ್ನು ಈಗ ಹಂಚಿಕೊಳ್ಳಲಾಗಿದೆ ಮತ್ತು ಇದು ಕತ್ರಿನಾ ಮದುವೆ ಮೆಹಂದಿ ಕಾರ್ಯಕ್ರಮದ್ದು ಎಂದು ಹೇಳಲಾಗಿದೆ. ಆದರೆ, ಇದು ಸುಳ್ಳು ಎಂಬುದು ಈಗ ಖಾತ್ರಿಯಾಗಿದೆ. ಹೀಗಾಗಿ ಕತ್ರಿನಾ ಹಾಗೂ ವಿಕ್ಕಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ಪೋಟೋಗಳು ಲೀಕ್​ಆಗಲಿಲ್ಲ. ಇಂತಹ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಸೆಲೆಬ್ರಿಟಿಗಳ ಫೇಕ್​ ಫೋಟೊಗಳು ವೈರಲ್​ ಅಗಿತ್ತು.

ಇಂದು (ಡಿಸೆಂಬರ್​ 9) ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ದಾಂಪತ್ಯ ಜೀವನಕ್ಕೆ ಕಾಲಿರಸಲಿದ್ದಾರೆ. ಈಗಾಗಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯ ಮದುವೆಯ ಫೋಟೊಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಮಾಧೋಪುರದ ಖಾಸಗಿ ಹೋಟೆಲ್​ವೊಂದರಲ್ಲಿ ನಡೆಯುತ್ತಿದೆ. ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಭದ್ರತೆಯನ್ನು ನೀಡುತ್ತಿದ್ದಾರೆ.

ಕೇವಲ 120 ಜನರಿಗೆ ಮದುವೆಗೆ ಆಹ್ವಾನ ನೀಡಲಾಗಿದ್ದು, ಮದುವೆ ಬಳಿಕ ಮುಂಬೈನಲ್ಲಿ ಪಾರ್ಟಿ ಅರೇಂಜ್​ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಾಲಿವುಡ್​ ನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​ ಅವರಿಬ್ಬರಿಗೂ ಒಳ್ಳೆಯ ಫೇಮ್ ಇದೆ. ಇಬ್ಬರೂ ತಮ್ಮ ತಮ್ಮ ನಟನಾ ವೃತ್ತಿಯಲ್ಲಿ ಹೆಸರು ಮಾಡಿದವರು. ಇಬ್ಬರಿಗೂ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೂ ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ಖಾಸಗಿಯಾಗಿ ಮದುವೆಯಾಗುತ್ತಿದ್ದಾರೆ.

ಇದನ್ನೂ ಓದಿ:

ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ಶ್ರೀಮಂತೆ? ಇಲ್ಲಿದೆ ಇಬ್ಬರ ನೆಟ್​ವರ್ತ್

ಕತ್ರಿನಾ-ವಿಕ್ಕಿ ಮದುವೆಯ ಅತಿಥಿಗಳಿಗೆ ವೆಲ್​ಕಮ್ ನೋಟ್​; ಈ ಮೂಲಕ ಮುಖ್ಯ ವಿಚಾರ ತಿಳಿಸಿದ ಜೋಡಿ

Click on your DTH Provider to Add TV9 Kannada