ವಿವಾಹದ ದಿನವೇ ಕತ್ರಿನಾಗೆ ಕಣ್ಣೀರು ಹಾಕಿಸಿದ ವಿಕ್ಕಿ ಕೌಶಲ್​; ಮದುವೆ ಮಂಟಪದಲ್ಲಿ ನಡೆದಿದ್ದೇನು?

Vicky Kaushal | Katrina Kaif: ಮದುವೆ ಮಂಟಪದಲ್ಲಿ ಹಾರ ಬದಲಾಯಿಸಿಕೊಂಡ ಬಳಿಕ ವಿಕ್ಕಿ ಕೌಶಲ್​ ಅವರು ಎಲ್ಲರ ಎದುರು ಭಾವುಕವಾಗಿ ಮಾತನಾಡಿದರು. ಅದರಿಂದ ಕತ್ರಿನಾ ಕೈಫ್ ಎಮೋಷನಲ್​ ಆಗಿ ಕಣ್ಣೀರು ಹಾಕಿದರು ಎಂಬ ಸುದ್ದಿ ಕೇಳಿಬಂದಿದೆ.​

ವಿವಾಹದ ದಿನವೇ ಕತ್ರಿನಾಗೆ ಕಣ್ಣೀರು ಹಾಕಿಸಿದ ವಿಕ್ಕಿ ಕೌಶಲ್​; ಮದುವೆ ಮಂಟಪದಲ್ಲಿ ನಡೆದಿದ್ದೇನು?
ಕತ್ರಿನಾ ಕೈಫ್ - ವಿಕ್ಕಿ ಕೌಶಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 12, 2021 | 8:51 AM

ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ (Katrina Kaif) ಮತ್ತು ವಿಕ್ಕಿ ಕೌಶಲ್​ (Vicky Kaushal) ಮದುವೆ ನೆರವೇರಿತು. ಡಿ.9ರಂದು ಈ ಜೋಡಿ ಹಸೆಮಣೆ ಏರಿತು. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆಯ ವಿಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಹಾಗಾಗಿ ಈ ಮದುವೆಯನ್ನು ಇಷ್ಟೊಂದು ಗುಟ್ಟಾಗಿ ನೆರವೇರಿಸಲಾಯಿತು. ಮದುವೆಗೆ ಸಂಬಂಧಿಸಿದ ವಿಡಿಯೋಗಳು ಇನ್ನೂ ಲಭ್ಯವಾಗಿಲ್ಲ. ಆದರೆ ಮದುವೆ ಮಂಟಪದಲ್ಲಿ ಏನೆಲ್ಲ ನಡೆಯಿತು ಎಂಬ ಬಗ್ಗೆ ಕೆಲವು ಮಾಹಿತಿ ಕೇಳಿಬಂದಿದೆ. ಹಾರ ಬದಲಾಯಿಸಿಕೊಂಡ ಬಳಿಕ ಕತ್ರಿನಾ ಕೈಫ್​ ಕಣ್ಣೀರು ಹಾಕಿದರು ಎನ್ನಲಾಗಿದೆ. ಅದಕ್ಕೆ ಕಾರಣ ವಿಕ್ಕಿ ಕೌಶಲ್​ ಆಡಿದ ಮಾತುಗಳು! ಏನಿದು ಸಮಾಚಾರ? ಮುಂದೆ ಓದಿ..

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ತಮ್ಮ ನಡುವೆ ಪ್ರೀತಿ ಹೇಗೆ ಚಿಗುರಿತು ಎಂಬುದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಮದುವೆ ಮಂಟಪದಲ್ಲಿ ಹಾರ ಬದಲಾಯಿಸಿಕೊಂಡ ಬಳಿಕ ವಿಕ್ಕಿ ಕೌಶಲ್​ ಅವರು ಎಲ್ಲರ ಎದುರು ಭಾವುಕವಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ತಮ್ಮ ಬದುಕಿನಲ್ಲಿ ಕತ್ರಿನಾ ಹೇಗೆ ಎಂಟ್ರಿ ಆದರು? ಅವರಿಂದಾಗಿ ತಮ್ಮ ಜೀವನದಲ್ಲಿ ಆದ ಬದಲಾವಣೆಗಳು ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ವಿಕ್ಕಿ ಕೌಶಲ್​ ಮಾತನಾಡಿದ್ದಾರೆ. ಅದನ್ನು ಕೇಳಿ ಭಾವುಕರಾದ ಕತ್ರಿನಾ ಕೈಫ್​ ಅವರು ಮದುವೆ ಮಂಟಪದಲ್ಲೇ ಕಣ್ಣೀರು ಹಾಕಿದರು ಎಂದು ವರದಿ ಆಗಿದೆ.

ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ನವ ದಂಪತಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಈಗ ಸಖತ್​ ವೈರಲ್​ ಆಗುತ್ತಿವೆ. ಬಾಲಿವುಡ್​ ಸೆಲೆಬ್ರಿಟಿಗಳಾದ ಟ್ವಿಂಕಲ್​ ಖನ್ನಾ, ಪರಿಣೀತಿ ಚೋಪ್ರಾ, ಹೃತಿಕ್​ ರೋಷನ್​, ಪ್ರಿಯಾಂಕಾ ಚೋಪ್ರಾ, ಸೋನಮ್​ ಕಪೂರ್, ನಿಕ್​ ಜೋನಸ್​, ಬಿಪಾಶಾ ಬಸು, ಇಶಾನ್​ ಕಟ್ಟರ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ, ಗಾಯಕಿ ಪಲಕ್​ ಮುಚ್ಚಲ್​ ಸೇರಿದಂತೆ ಅನೇಕ ತಾರೆಯರು ಈ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

‘ಜೀವನ ಪರ್ಯಂತ ನಿಮ್ಮಿಬ್ಬರ ನಡುವೆ ನಗು, ನಿಷ್ಠೆ, ಪ್ರೀತಿ, ಗೌರವ, ಸಹಬಾಳ್ವೆ ಇರಲಿ’ ಎಂದು ದೀಪಿಕಾ ಪಡುಕೋಣೆ ವಿಶ್​ ಮಾಡಿದ್ದಾರೆ. ‘ಓಹ್​ ಮೈ ಗಾಡ್​.. ನೀವಿಬ್ಬರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಆಲಿಯಾ ಭಟ್​ ಕಮೆಂಟ್​ ಮಾಡಿದ್ದಾರೆ. ಹತ್ತಾರು ಹಾರ್ಟ್​ ಎಮೋಜಿಗಳನ್ನು ಕಮೆಂಟ್​ ಬಾಕ್ಸ್​ನಲ್ಲಿ ಹಾಕುವ ಮೂಲಕ ಜಾನ್ವಿ ಕಪೂರ್​ ಪ್ರೀತಿ ತೋರಿಸಿದ್ದಾರೆ.

ಇದನ್ನೂ ಓದಿ:

ಕತ್ರಿನಾ​ ಕೈಫ್​-ವಿಕ್ಕಿ ಕೌಶಲ್​​ ಅರಿಶಿಣ ಶಾಸ್ತ್ರದ ಕಲರ್​ಫುಲ್​ ಫೋಟೋಗಳು ವೈರಲ್​; ಇಲ್ಲಿದೆ ಫೋಟೋ ಆಲ್ಬಂ

ಕತ್ರಿನಾ​ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್​; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ