- Kannada News Photo gallery Katrina Kaif and Vicky Kaushal share photos of their marriage and haldi ceremony
ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಅರಿಶಿಣ ಶಾಸ್ತ್ರದ ಕಲರ್ಫುಲ್ ಫೋಟೋಗಳು ವೈರಲ್; ಇಲ್ಲಿದೆ ಫೋಟೋ ಆಲ್ಬಂ
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಸ್ಟಾರ್ ಜೋಡಿಯ ವಿವಾಹದ ಕುರಿತು ಸಿಕ್ಕಾಪಟ್ಟೆ ಸೀಕ್ರೆಟ್ ಮಾಡಲಾಗಿತ್ತು. ಆದರೆ ಈಗ ಅನೇಕ ಫೋಟೋಗಳನ್ನು ಈ ದಂಪತಿ ಹಂಚಿಕೊಳ್ಳುತ್ತಿದ್ದಾರೆ. ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ.
Updated on: Dec 11, 2021 | 1:25 PM

Katrina Kaif and Vicky Kaushal share photos of their marriage and haldi ceremony

Katrina Kaif and Vicky Kaushal share photos of their marriage and haldi ceremony

ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಈ ಜೋಡಿಹಕ್ಕಿಗಳು ಅದ್ದೂರಿಯಾಗಿಯೇ ಹಸೆಮಣೆ ಏರಿವೆ. ಮದುವೆಗಾಗಿ ಸಿಕ್ಕಾಪಟ್ಟೆ ವೆಚ್ಚ ಮಾಡಲಾಗಿದೆ.

ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ನಡೆದಿತ್ತು. ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ಡಿ.7ರಿಂದಲೇ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯನ್ನು ಗುಟ್ಟಾಗಿ ಮಾಡಲಾಗಿದೆ. ಮದುವೆಯ ದೃಶ್ಯಗಳನ್ನು ಪ್ರಸಾರ ಮಾಡಲು ಓಟಿಟಿ ಸಂಸ್ಥೆಯೊಂದು 100 ಕೋಟಿ ರೂ. ಹಣ ನೀಡಿದೆ ಎನ್ನಲಾಗಿದೆ.

ಮದುವೆ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳು ಕತ್ರಿನಾ ಮತ್ತು ವಿಕ್ಕಿಗೆ ಶುಭಾಶಯ ಕೋರುತ್ತಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಪರಿಣೀತಿ ಚೋಪ್ರಾ, ಜಾನ್ವಿ ಕಪೂರ್ ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.