AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ.

ರಣವೀರ್​ ಸಿಂಗ್​ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್​ ಚರಣ್​; ಕಾರಣ ಏನು?
ರಾಮ್ ಚರಣ್​-ರಣವೀರ್​
TV9 Web
| Edited By: |

Updated on:Dec 13, 2021 | 11:15 AM

Share

ಬಾಲಿವುಡ್​ ನಟ ರಣವೀರ್​ ಸಿಂಗ್​ ಹಾಗೂ ಟಾಲಿವುಡ್​ ನಟ ರಾಮ್​ ಚರಣ್​ ನಡುವೆ ಒಳ್ಳೆಯ ಗೆಳೆತನವಿದೆ. ಮುಂಬೈಗೆ ತೆರಳಿದಾಗ ರಣವೀರ್​ ಸಿಂಗ್​ ಅವರನ್ನು ರಾಮ್​ ಚರಣ್​ ಭೇಟಿ ಆಗುತ್ತಾರೆ. ಅದೇ ರೀತಿ ರಣವೀರ್​ ಸಿಂಗ್​ ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಅವರನ್ನು ಮೀಟ್​ ಮಾಡುತ್ತಾರೆ. ಈಗ ರಣವೀರ್​ ಸಿಂಗ್​ ಅವರು ಜಾಹೀರಾತು ಶೂಟ್​ಗಾಗಿ ಹೈದರಾಬಾದ್​ಗೆ ಆಗಮಿಸಿದ್ದರು. ವಿಶೇಷ ಎಂದರೆ ರಾಮ್​ ಚರಣ್​ ಅವರು ಬಾಲಿವುಡ್​ನ ಈ ಹೀರೋಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದನ್ನು ನೋಡಿ ರಣವೀರ್​ ಸಖತ್ ಖುಷಿ ಪಟ್ಟಿದ್ದಾರೆ.

ರಣವೀರ್​ ಅವರು ಭಾನುವಾರ (ಡಿಸೆಂಬರ್​ 12) ಹೈದರಾಬಾದ್​ಗೆ ಬಂದಿದ್ದರು. ಜಾಹೀರಾತು ಶೂಟ್​ ಮುಗಿದ ಬಳಿಕ ರಾಮ್​ ಚರಣ್​ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ. ಇದು ರಾಮ್​ ಚರಣ್​ ಮನೆಯಲ್ಲೇ ಮಾಡಿದ ಬಿರಿಯಾನಿ ಆಗಿತ್ತು ಅನ್ನೋದು ವಿಶೇಷ. ಇದನ್ನು ಸವಿದು ರಣವೀರ್​ ಸಖತ್​ ಖುಷಿಯಾಗಿದ್ದಾರೆ.

ಈ ಇಬ್ಬರು ಹೀರೋಗಳ ನಡುವೆ ಒಳ್ಳೆಯ ಬಾಂಡಿಗ್​ ಇದೆ. ರಾಮ್​ ಚರಣ್​ 15ನೇ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕ್ಲ್ಯಾಪ್​ ಮಾಡೋಕೆ ರಣವೀರ್​ ಸಿಂಗ್​ ಅವರು ಮುಂಬೈನಿಂದ ಹೈದರಾಬಾದ್​ಗೆ ಆಗಮಿಸಿದ್ದರು. ಇದು ರಾಮ್​ಗೆ ಖುಷಿ ನೀಡಿತ್ತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮ್​ ಚರಣ್​ ಅವರು ರಣವೀರ್​ಗೆ ಬಿರ್ಯಾನಿ ಬಡಿಸಿದ್ದಾರೆ.

ರಾಮ್​ ಚರಣ್​ ಹಾಗೂ ಸಲ್ಮಾನ್​ ಖಾನ್​ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ಹೈದರಾಬಾದ್​ಗೆ ಬಂದಾಗ ರಾಮ್​ ಚರಣ್​ ಬಿರ್ಯಾನಿ ಕಳುಹಿಸಿದ್ದರು. ರಾಮ್​ ಚರಣ್​ ನಟನೆಯ ‘ಜಂಜೀರ್​’ ಸಿನಿಮಾ ರಿಲೀಸ್​ ಆಗುವಾಗ ರಾಮ್​ ಚರಣ್​ ಬಗ್ಗೆ ಸಲ್ಮಾನ್​ ಖಾನ್​ ಹೆಚ್ಚಿನ ಕಾಳಜಿ ತೋರಿದ್ದರು. ‘ಜಂಜೀರ್​’ ಇದು ರಾಮ್​ ಚರಣ್​ ನಟನೆಯ ಮೊದಲ ಹಿಂದಿ ಸಿನಿಮಾ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

Published On - 7:00 am, Mon, 13 December 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?