ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?

ರಣವೀರ್​ ಸಿಂಗ್​ ಮತ್ತು ದೀಪಿಕಾ ಮದುವೆ ಆಗಿದ್ದಾರೆ. ರಣಬೀರ್ ಕಪೂರ್​ ಹಾಗೂ ಆಲಿಯಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಮದುವೆ ಆದ ನಂತರದಲ್ಲಿ ನಾಯಕಿಯರಾಗಲೀ ಅಥವಾ ಹೀರೋಗಳಾಗಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಕುಟುಂಬದವರಿಗೆ ಇಷ್ಟವಾಗುವುದಿಲ್ಲ.

ಆಲಿಯಾಗೆ ಲಿಪ್​ ಲಾಕ್​ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್​ ಮಾಡಿದ ರಣವೀರ್​ ಸಿಂಗ್? ಏನಿದು ಕಥೆ?
ರಣವೀರ್​-ದೀಪಿಕಾ; ಆಲಿಯಾ

ರಣವೀರ್​ ಸಿಂಗ್​ ಹಾಗೂ ಆಲಿಯಾ ಭಟ್​ ಇಬ್ಬರನ್ನೂ ತೆರೆಮೇಲೆ ಒಟ್ಟಾಗಿ ನೋಡೋಕೆ ಅಭಿಮಾನಿಗಳು ಇಷ್ಟಪಡುತ್ತಾರೆ. ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ವರ್ಕ್​ ಆಗಿತ್ತು. ಈ ಸಿನಿಮಾದಲ್ಲಿ ಕೆಲ ಇಂಟಿಮೇಟ್​ ದೃಶ್ಯಗಳು ಇದ್ದವು. ಆಲಿಯಾ ಹಾಗೂ ರಣವೀರ್​ ಕಿಸ್ಸಿಂಗ್​ ದೃಶ್ಯಗಳು ಪಡ್ಡೆ ಹುಡುಗರಿಗೆ ಇಷ್ಟವಾಗಿತ್ತು. ಆದರೆ, ಈಗ ಆಲಿಯಾಗೆ ಕಿಸ್ ಮಾಡಲ್ಲ ಎಂದು ರಣವೀರ್​ ಪತ್ನಿ ದೀಪಿಕಾಗೆ ಪ್ರಾಮಿಸ್​ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದರೆ ಏನಿದು ವಿಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಣವೀರ್​ ಸಿಂಗ್​ ಮತ್ತು ದೀಪಿಕಾ ಮದುವೆ ಆಗಿದ್ದಾರೆ. ರಣಬೀರ್ ಕಪೂರ್​ ಹಾಗೂ ಆಲಿಯಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಮದುವೆ ಆದ ನಂತರದಲ್ಲಿ ನಾಯಕಿಯರಾಗಲೀ ಅಥವಾ ಹೀರೋಗಳಾಗಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಕುಟುಂಬದವರಿಗೆ ಇಷ್ಟವಾಗುವುದಿಲ್ಲ. ಈ ಕಾರಣಕ್ಕೆ ರಣವೀರ್​ ಸಿಂಗ್​ ಅವರು ದೀಪಿಕಾಗೆ ಪ್ರಾಮಿಸ್​ ಒಂದನ್ನು ಮಾಡಿದ್ದಾರೆ.

ರಣವೀರ್​ ಸಿಂಗ್​ ಮತ್ತು ಆಲಿಯಾ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅನೇಕ ವರ್ಷಗಳ ನಂತರ ಕರಣ್​ ಜೋಹರ್ ನಿರ್ದೇಶನಕ್ಕೆ ಕಂಬ್ಯಾಕ್​ ಮಾಡುತ್ತಿದ್ದಾರೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಶೀರ್ಷಿಕೆಯೇ ಹೇಳುವಂತೆ ಲವ್​ ಸ್ಟೋರಿಯೇ ಹೈಲೈಟ್​ ಆಗಿರಲಿದೆ.

ಈ ಸಿನಿಮಾದಲ್ಲಿ ಲಿಪ್​ ಲಾಕ್​ ದೃಶ್ಯವೊಂದನ್ನು ಕಂಪೋಸ್​ ಮಾಡಲಾಗಿದೆ. ಕಥೆ ಹೇಳುವಾಗ ಈ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆನ್​ ಸ್ಕ್ರೀನ್ ಜೋಡಿ ಮನವಿ ಇಟ್ಟಿದೆ. ಚಿತ್ರದಲ್ಲಿ ಅತಿ ಅಗತ್ಯವಿದ್ದರೆ ಮಾತ್ರ ಕಿಸ್​ ಮಾಡಲು ಇಬ್ಬರೂ ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ. ಇನ್ನು, ದೀಪಿಕಾಗೆ ರಣವೀರ್ ಪ್ರಾಮಿಸ್​ ಒಂದನ್ನು ಮಾಡಿದ್ದಾರಂತೆ. ‘ಅನಗತ್ಯವಾಗಿ ಕಿಸ್ಸಿಂಗ್​ ದೃಶ್ಯಗಳಲ್ಲಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ಚಿತ್ರದಲ್ಲಿ ಆಲಿಯಾ ಜತೆ ಯಾವುದೇ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಅವರು ದೀಪಿಕಾಗೆ ಭಾಷೆ ನೀಡಿದ್ದಾರೆ ಎನ್ನಲಾಗುತ್ತಿದೆ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ 2023ರ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರ ರಿಲೀಸ್​ ಆಗೋಕೆ ಇನ್ನೂ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕು. ಕೊವಿಡ್​ ಮೂರನೇ ಅಲೆ ಕಾಣಿಸಿಕೊಂಡರೆ ಚಿತ್ರದ ಕೆಲಸ ಮತ್ತಷ್ಟು ವಿಳಂಬವಾಗಲಿದೆ.

ಇದನ್ನೂ ಓದಿ: ‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ಭಟ್​ ಕಾಣಿಸಿಕೊಳ್ಳೋದು ಕೇವಲ ಇಷ್ಟು ನಿಮಿಷನಾ?

Alia Bhatt: ಮದುವೆಯನ್ನು ಮುಂದೂಡಿದ ಆಲಿಯಾ- ರಣಬೀರ್; ಮಹತ್ವದ ನಿರ್ಧಾರಕ್ಕೆ ಈ ಅಂಶಗಳೇ ಕಾರಣವಂತೆ!

Click on your DTH Provider to Add TV9 Kannada