ಕಂಗನಾ ರಣಾವತ್ ಕಾರಿಗೆ ಮುತ್ತಿಗೆ; ಇಲ್ಲಿದೆ ವಿಡಿಯೋ

ಕಂಗನ ರಣಾವತ್​ ಇದ್ದಲ್ಲಿ ವಿವಾದಕ್ಕೇನು ಬರ ಇರುವುದಿಲ್ಲ. ಅವರು ಅದ್ಭುತ ನಟಿ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಇದರ ಜತೆಗೆ ಕಿರಿಕ್ ಮಾಡಿಕೊಳ್ಳುವ ಮೂಲಕವೂ ಸಾಕಷ್ಟು ಸುದ್ದಿಯಾಗುತ್ತಾರೆ.

ಕಂಗನಾ ಅವರು ಇಂದು (ಡಿಸೆಂಬರ್​ 3) ಪಂಜಾಬ್​ಗೆ ತೆರಳಿದ್ದರು. ರೈತ ಪ್ರತಿಭಟನಾಕಾರರ ವಿರುದ್ಧ ಕಂಗನಾ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈ ಕಾರಣಕ್ಕೆ ಅವರು ಪಂಜಾಬ್​ಗೆ ಎಂಟ್ರಿ ಪಡೆಯುತ್ತಿದ್ದಂತೆ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಇದನ್ನು ಕಂಗನಾ ಖಂಡಿಸಿದ್ದಾರೆ. ‘ಇವರು ತಮ್ಮನ್ನು ತಾವು ರೈತರು ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ, ನಮ್ಮಮೇಲೆ ದಾಳಿ ಮಾಡುತ್ತಾರೆ. ಬೆದರಿಕೆ ಹಾಕುತ್ತಾರೆ. ದೇಶದಲ್ಲಿ ಇಷ್ಟೊಂದು ಗುಂಪು ಹಲ್ಲೆ ನಡೆಯುತ್ತಿದೆ. ಇಷ್ಟೊಂದು ಪೊಲೀಸರಿದ್ದಾರೆ. ಆದಾಗ್ಯೂ, ನನ್ನ ಗಾಡಿಯನ್ನು ತೆಗೆದುಕೊಂಡು ಹೋಗೋಕೆ ಆಗುತ್ತಿಲ್ಲ. ನಾನು ರಾಜಕಾರಣಿಯೇ? ಇಂತಹ ವರ್ತನೆಯನ್ನು​ ಸಹಿಸಿಕೊಳ್ಳೋಕೆ ಆಗುವುದಿಲ್ಲ. ನನಗೆ ಅಲ್ಲಿಗೆ ತೆರಳದಂತೆ ಅನೇಕರು ಎಚ್ಚರಿಕೆ ನೀಡಿದ್ದರು. ಆದರೆ, ನಾನು ಇಲ್ಲಿಗೆ ಬಂದೆ’ ಎಂದಿದ್ದಾರೆ ಅವರು.

ಕೃಷಿ ಕಾಯ್ದೆಯನ್ನು ಹಿಂಪಡೆದ ಬೆನ್ನಲ್ಲೇ ಕಂಗನಾ ಅಸಮಾಧಾನ ಹೊರ ಹಾಕಿದ್ದರು. ‘ಇಂದು ಬಹುಶಃ ಖಲಿಸ್ತಾನಿ ಭಯೋತ್ಪಾದಕರು ಸರ್ಕಾರ ತೋಳನ್ನು ತಿರುಚುತ್ತಿರಬಹುದು. ಆದರೆ ಈ ಸಂದರ್ಭದಲ್ಲಿ ನಾವು ಓರ್ವ ಮಹಿಳೆಯನ್ನು ಮರೆಯುವಂತಿಲ್ಲ. ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಅವರು ಖಲಿಸ್ತಾನಿ ಉಗ್ರರನ್ನು ಸೊಳ್ಳೆಗಳಂತೆ ತಮ್ಮ ಬೂಟಿನಡಿ ಹಾಕಿ ಹೊಸಕಿದ್ದರು. ಖಲಿಸ್ತಾನಿಗಳು ದೇಶವನ್ನು ಒಡೆಯಲು ಬಿಡಲಿಲ್ಲ’ ಎಂದು ಕಂಗನಾ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಸಮಂತಾಗೆ ಕಂಗನಾ ಮೆಚ್ಚುಗೆ ಮಾತು; ಎರಡೇ ಪದಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ ಕಾಂಟ್ರವರ್ಸಿ ನಟಿ

Published On - 7:47 pm, Fri, 3 December 21

Click on your DTH Provider to Add TV9 Kannada