ಪಬ್​ನಲ್ಲಿ ಬಿಯರ್​ ಬಾಟಲ್​ನಿಂದ ಹಲ್ಲೆಗೆ ಒಳಗಾದ ಕಿರಿಕ್​ ಕೀರ್ತಿ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿಡಿಯೋ

Kirik Keerthi Assault: ಪಬ್​ನಲ್ಲಿ ತಮ್ಮ ಫೋಟೋ ತೆಗೆದ ವ್ಯಕ್ತಿಗೆ ಕಿರಿಕ್​ ಕೀರ್ತಿ ಅವರು ಬಾಯಿಗೆ ಬಂದಂತೆ ಬೈಯ್ದಿದ್ದೂ ಅಲ್ಲದೇ ಮೊಬೈಲ್​ ಕಸಿದುಕೊಳ್ಳಲು ಮುಂದಾಗಿದ್ದರು. ಆ ಕಾರಣಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

ಸ್ನೇಹಿತರ ಜತೆ ಗುರುವಾರ (ಡಿ.2) ರಾತ್ರಿ ಪಬ್‌ಗೆ ತೆರಳಿದ್ದ ಕಿರಿಕ್​ ಕೀರ್ತಿ (Kirik Keerthi) ಮೇಲೆ ಹಲ್ಲೆ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ! ಹೌದು, ಬೆಂಗಳೂರಿನ ಸದಾಶಿವನಗರದ ಪಬ್‌ವೊಂದರಲ್ಲಿ ಮಾರಾಮಾರಿ ನಡೆದಿದೆ. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದರು. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದರು. ಫೋಟೋ ತೆಗೆದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈಯ್ದಿದ್ದೂ ಅಲ್ಲದೇ ಮೊಬೈಲ್​ ಕಸಿದುಕೊಳ್ಳಲು ಮುಂದಾದರು. ಆ ವ್ಯಕ್ತಿ ಕ್ಷಮೆ ಕೇಳಿದರೂ ಕೀರ್ತಿ ಆರ್ಭಟ ನಿಂತಿರಲಿಲ್ಲ. ಆ ಕಾರಣದಿಂದ ರೋಸಿ ಹೋಗಿದ್ದ ವ್ಯಕ್ತಿಯು ಕಿರಿಕ್​ ಕೀರ್ತಿ ಮೇಲೆ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಲ್ಲೆ ಬಳಿಕ ಕೀರ್ತಿ ಪರಿಸ್ಥಿತಿ ಹೇಗಿದೆ? ಈ ವಿಡಿಯೋ ಎಲ್ಲವನ್ನೂ ವಿವರಿಸುವಂತಿದೆ. ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ (Sadashivanagar Police Station)  ದೂರು ದಾಖಲಾಗಿದೆ.

ಇದನ್ನೂ ಓದಿ:

ಮಾಸ್​ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್​ ಮಸ್ತ್ ಮಾತುಕತೆ

‘ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ; ಮತ್ತೆ ದೇವರು ಯಾಕೆ ನೋವು ಕೊಡ್ತಾನೋ ಗೊತ್ತಿಲ್ಲ’: ಶಿವರಾಂ ಬಗ್ಗೆ ಶಿವಣ್ಣನ ಮಾತು

Click on your DTH Provider to Add TV9 Kannada