ಮಾಸ್​ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್​ ಮಸ್ತ್ ಮಾತುಕತೆ

ಶ್ರೀಮುರಳಿ, ಆಶಿಕಾ ರಂಗನಾಥ್​, ಗರುಡ ರಾಮ್ ಅವರು ‘ಮದಗಜ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತೆರೆ ಹಿಂದಿನ ಅನೇಕ ವಿಚಾರಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಅದ್ದೂರಿಯಾಗಿ ‘ಮದಗಜ’ ಸಿನಿಮಾ ಬಿಡುಗಡೆ ಆಗಿದೆ. ನಿರ್ದೇಶಕ ಮಹೇಶ್​ ಕುಮಾರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಕಾಂಬಿನೇಷನ್​ನಲ್ಲಿ ಈ ಮೂಡಿಬಂದಿದೆ. ‘ಮದಗಜ’ ಚಿತ್ರದಲ್ಲಿ ಶ್ರೀಮುರಳಿ, ಆಶಿಕಾ ರಂಗನಾಥ್​, ಗರುಡ ರಾಮ್​ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಮೂವರೂ ಟಿವಿ9 ವಿಶೇಷ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಂದರ್ಭ ಹೇಗಿತ್ತು? ಯಾರ ಪಾತ್ರ ಎಷ್ಟು ಚಾಲೆಂಜಿಂಗ್​ ಆಗಿತ್ತು? ಕಲಾವಿದರಿಗೆ ಸಿನಿಮಾ ಮೇಲೆ ಯಾವ ರೀತಿ ನಿರೀಕ್ಷೆ ಇದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಮೂವರು ಪಟಪಟನೆ ಉತ್ತರಿಸಿದ್ದಾರೆ. ಈ ಚಿತ್ರಕ್ಕೆ ಗ್ರ್ಯಾಂಡ್​ ಓಪನಿಂಗ್​ ಸಿಕ್ಕಿದ್ದು, 900ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜಗಪತಿ, ಶಿವರಾಜ್​ ಕೆ.ಆರ್​.ಪೇಟೆ, ಚಿಕ್ಕಣ್ಣ, ಧರ್ಮಣ್ಣ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

‘ಮದಗಜ’ ಗ್ರ್ಯಾಂಡ್​ ರಿಲೀಸ್​; ಶ್ರೀಮುರಳಿ ನಟನೆಯ ಈ ಚಿತ್ರ ನೋಡಲು ಇಲ್ಲಿದೆ 5 ಕಾರಣ

Marakkar Twitter Review: ‘ಇದು ಇನ್ನೊಂದು ಬಾಹುಬಲಿ’; ಮರಕ್ಕರ್​ ಚಿತ್ರ ನೋಡಿ ಮೆಚ್ಚಿಕೊಂಡ ಮೋಹನ್​ಲಾಲ್​ ಫ್ಯಾನ್ಸ್​​

Click on your DTH Provider to Add TV9 Kannada