ಲಸಿಕೆ ನೋಡಿ ದೇವರು ಬಂದಂತೆ ನೆಲಕ್ಕೆ ಬಿದ್ದು ಅಜ್ಜಿ ಹೈ ಡ್ರಾಮ, ಅಜ್ಜಿಯ ವರ್ತನೆ‌ ನೋಡಿ ದಂಗಾದ ಅಧಿಕಾರಿಗಳು ವಾಪಸ್

ಯಾದಗಿರಿ ಜಿಲ್ಲೆಯಲ್ಲಿ ‌ವ್ಯಾಕ್ಸಿನ್ ಹೈಡ್ರಾಮಾ ‌ಮುಂದುವರೆದಿದೆ. ವ್ಯಾಕ್ಸಿನ್ ನೀಡಲು ಹೋದಾಗ ಅಜ್ಜಿಯೊಬ್ಬರು ನಾನು ವ್ಯಾಕ್ಸಿನ್ ಪಡೆಯಲ್ಲ ಅಂತ ನಾಟಕ ಶುರು ಮಾಡಿದ ಘಟನೆ ನಡೆದಿದೆ. ಮೈಯಲ್ಲಿ‌‌ ದೇವರು ಬಂದಿದೆ ಅಂತ‌ ನೆಲದ ಮೇಲೆ ಒದ್ದಾಡಿ ಅಜ್ಜಿ ಸೀನ್ ಕ್ರಿಯೆಟ್ ಮಾಡಿದ್ದಾರೆ.

ಯಾದಗಿರಿ: ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಇದರ ಜೊತೆಗೆ ಓಮಿಕ್ರಾನ್ ಕೂಡ ಈಗ ಕಾಲಿಟ್ಟಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕೆಲ ಜನ ಲಸಿಕೆಯಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಹೈ ಡ್ರಾಮ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ‌ವ್ಯಾಕ್ಸಿನ್ ಹೈಡ್ರಾಮಾ ‌ಮುಂದುವರೆದಿದೆ. ವ್ಯಾಕ್ಸಿನ್ ನೀಡಲು ಹೋದಾಗ ಅಜ್ಜಿಯೊಬ್ಬರು ನಾನು ವ್ಯಾಕ್ಸಿನ್ ಪಡೆಯಲ್ಲ ಅಂತ ನಾಟಕ ಶುರು ಮಾಡಿದ ಘಟನೆ ನಡೆದಿದೆ. ಮೈಯಲ್ಲಿ‌‌ ದೇವರು ಬಂದಿದೆ ಅಂತ‌ ನೆಲದ ಮೇಲೆ ಒದ್ದಾಡಿ ಅಜ್ಜಿ ಸೀನ್ ಕ್ರಿಯೆಟ್ ಮಾಡಿದ್ದಾರೆ. ಅಜ್ಜಿಯ ವರ್ತನೆ‌ ನೋಡಿ ದಂಗಾದ ಅಧಿಕಾರಿಗಳು ಅಜ್ಜಿಗೆ ವ್ಯಾಕ್ಸಿನ್ ನೀಡದೆ ವಾಪಸ್ ಆಗಿದ್ದಾರೆ.

ಇನ್ನು ಯಾದಗಿರಿ ತಾಲೂಕಿನ ಠಾಣಾಗುಂದಿ ಗ್ರಾಮದಲ್ಲೇ ಮತ್ತೊಂದು ಘಟನೆ ನಡೆದಿದೆ. ನಿನ್ನೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲು ಹೋಗಿದ್ದಾಗ ಕೊವಿಡ್ ಲಸಿಕೆ ಬೇಡವೆಂದು ಕುರಿ ಬಿಟ್ಟು ಕುರಿಗಾಹಿ ಓಡಿದ ಘಟನೆ ನಡೆದಿದೆ. ಜಮೀನಿನಲ್ಲೇ ಕುರಿಗಳನ್ನು ಬಿಟ್ಟು ಕುರಿಗಾಹಿ ಓಡಿಹೋಗಿ ಬಚ್ಚಿಟ್ಟುಕೊಂಡಿದ್ದಾನೆ. ಬಳಿಕ ಆರೋಗ್ಯ ಸಿಬ್ಬಂದಿ ಕುರಿಗಳನ್ನು ಹೊಡೆದುಕೊಂಡು ಬಂದು ಕುರಿಗಾಹಿಯನ್ನು ಹುಡುಕಿ ಕರೆತಂದು ಅವನ ಮನವೊಲಿಸಿ ಲಸಿಕೆ ಹಾಕಿದ್ದಾರೆ.

Published On - 11:53 am, Fri, 3 December 21

Click on your DTH Provider to Add TV9 Kannada