Marakkar Twitter Review: ‘ಇದು ಇನ್ನೊಂದು ಬಾಹುಬಲಿ’; ಮರಕ್ಕರ್ ಚಿತ್ರ ನೋಡಿ ಮೆಚ್ಚಿಕೊಂಡ ಮೋಹನ್ಲಾಲ್ ಫ್ಯಾನ್ಸ್
Mohanlal | Marakkar Movie: ‘ಮರಕ್ಕರ್’ ಚಿತ್ರದಲ್ಲಿ ಮೋಹನ್ಲಾಲ್ ಜೊತೆಗೆ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್, ಕೀರ್ತಿ ಸುರೇಶ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಾಲಿವುಡ್ (Mollywood) ನಟ ಮೋಹನ್ಲಾಲ್ (Mohanlal) ಅವರ ಹೊಸ ಸಿನಿಮಾ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ (Marakkar: Lion of the Arabian Sea) ತೆರೆಕಂಡಿದೆ. ಅಭಿಮಾನಿಗಳು ಈ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಮರಕ್ಕರ್’ ಮೂಡಿಬಂದಿದೆ. ಮೇಕಿಂಗ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಆ ಕಾರಣಕ್ಕಾಗಿ ಕೆಲವರು ಈ ಚಿತ್ರವನ್ನು ‘ಬಾಹುಬಲಿ’ ಸಿನಿಮಾಗೆ ಹೋಲಿಸುತ್ತಿದ್ದಾರೆ. ‘ಇದು ಇನ್ನೊಂದು ಬಾಹುಬಲಿ’ ಎಂದು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರ ಮಾರ್ಚ್ನಲ್ಲಿಯೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕೊವಿಡ್ ಕಾರಣದಿಂದ ಇಷ್ಟು ದಿನಗಳವರೆಗೆ ಕಾಯಬೇಕಾಯಿತು. ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಎನ್ನುತ್ತಿದ್ದಾರೆ ಮೋಹನ್ಲಾಲ್ ಫ್ಯಾನ್ಸ್. ಆದರೆ ಕೆಲವರಿಗೆ ಚಿತ್ರ ಇಷ್ಟ ಆಗಿಲ್ಲ. ಒಟ್ಟಾರೆ ಈ ಎಲ್ಲ ಮಿಶ್ರ ಪ್ರತಿಕ್ರಿಯೆಗಳು ಅಭಿಮಾನಿಗಳ ಟ್ವಿಟರ್ ವಿಮರ್ಶೆಯಲ್ಲಿ (Marakkar Twitter Review) ವ್ಯಕ್ತವಾಗುತ್ತಿವೆ.
‘ಮರಕ್ಕರ್ ಚಿತ್ರವು ವಿರೋಧಿಗಳು ಹೇಳುವಷ್ಟು ಕೆಟ್ಟದಾಗಿಲ್ಲ. ಚಿತ್ರಕಥೆ ಸಾಧಾರಣ ಆಗಿದೆ ಎಂಬುದು ನಿಜ. ಆದರೆ ಎರಡು ಯುದ್ಧದ ಸನ್ನಿವೇಶಗಳಿಗೆ ನೀವು ಕೊಟ್ಟ ಹಣ ಸಾರ್ಥಕ ಎನಿಸುವಂತಿವೆ. ಅಂಥ ಗುಣಮಟ್ಟದ ಮೇಕಿಂಗ್ ಮತ್ತು ವಿಎಫ್ಎಕ್ಸ್ ಇದೆ. ಭಾರತೀಯ ಸಿನಿಮಾಗಳಲ್ಲೇ ಇದು ಬೆಸ್ಟ್ ಎನಿಸುತ್ತದೆ. ಚಿತ್ರತಂಡ ಹೇಳಿದಂತೆ ಇದು ಎಮೋಷನಲ್ ಚಿತ್ರ ಕೂಡ ಹೌದು’ ಎಂಬ ಅಭಿಪ್ರಾಯ ಕೇಳಿಬಂದಿದೆ.
#Marakkar is definitely not as bad as what those haters says. Yes, screenplay is average. But the two war scenes itself is worth your penny. Such quality making and VFX. Probably the best ever in Indian cinema. And as makers said, film is high on emotional side. ? pic.twitter.com/pGF8E84OVY
— amaljith (@AmaljithJithu) December 2, 2021
‘ಕೇರಳದಲ್ಲಿ ನಿರ್ಮಾಣವಾದ ಅತಿ ದೊಡ್ಡ ಸಿನಿಮಾ ಇದು ಎಂಬುದರಲ್ಲಿ ಅನುಮಾನವೇ ಬೇಡ. ದೃಶ್ಯಗಳು ಶ್ರೀಮಂತವಾಗಿವೆ. ಮಾಲಿವುಡ್ನಲ್ಲಿ ಮುಂದಿನ 5 ವರ್ಷಗಳವರೆಗೆ ಈ ರೀತಿಯ ದೃಶ್ಯವೈಭವ ನೋಡಲು ಸಾಧ್ಯವಿಲ್ಲ. ಇಂಟರ್ವಲ್ ದೃಶ್ಯ ಇನ್ನೂ ನನ್ನ ಮನಸ್ಸನ್ನು ಕಾಡುತ್ತಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
Undoubtedly The BIGGEST Ever Film Which Kerala Produced Yet !
Richness in visuals ??
Never gonna happen this kinda visual treat in next 5yrs in M’wood ??
Interval Block Still Sticking In My Mind?
Lalettan Intro ?#MarakkarArabikadalinteSimham #Marakkar #Mohanlal pic.twitter.com/5Kc1JkFw2b
— KINGSMANᵐᵃʳᵃᵏᵏᵃʳ ᵈᵃʸ ᵈᵉᶜ² ⚓ (@KingsmanKQ2) December 2, 2021
#Marakkar is a class emotional journey with amazing visuals that demand theatre experience.Good perfo from all,fight scenes r the highlights.Go watch it in an amazing 4k Dolby Atmos theater for the best experience.Priyadarshan take a bow for a technically brilliant malayalam pic.twitter.com/QQnXvaDqW7
— Adarsh Murali (@adarsh_murali__) December 2, 2021
‘ಅದ್ಭುತ ದೃಶ್ಯ ವೈಭವದ ಜತೆಗೆ ಇದೊಂದು ಎಮೋಷನಲ್ ಜರ್ನಿ. ಸಾಹಸ ದೃಶ್ಯಗಳು ಹೈಲೈಟ್ ಆಗಿವೆ. ಅತ್ಯುತ್ತಮ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಚಿತ್ರಮಂದಿರದಲ್ಲಿಯೇ ನೋಡಿರಿ’ ಎಂದು ಸಿನಿಪ್ರಿಯರೊಬ್ಬರು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಮೋಹನ್ಲಾಲ್ ಜೊತೆಗೆ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್, ಕೀರ್ತಿ ಸುರೇಶ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
#MarakkarReview DISASTER DISAPPOINTMENT
Even There’s No One Time Watchable Review ?
Can’t Understand Their Expectations #Marakkar
— CHANBAKAN (@chanbakan31) December 2, 2021
ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ‘ಇದೊಂದು ದುರಂತ’ ಎಂದು ಟ್ವಿಟರ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ:
ಡಿಸೆಂಬರ್ ಪೂರ್ತಿ ಮನರಂಜನೆಯ ಸುಗ್ಗಿ; ಪ್ರತಿ ವಾರವೂ ಬಿಗ್ ರಿಲೀಸ್: ಇಲ್ಲಿದೆ ಪೂರ್ತಿ ಲಿಸ್ಟ್
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸಿರೀಸ್