AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್​ ಸಿರೀಸ್

ಅಕ್ಷಯ್​ ಕುಮಾರ್​, ಅಭಿಷೇಕ್​ ಬಚ್ಚನ್​ ಮುಂತಾದ ಬಾಲಿವುಡ್​ ಸ್ಟಾರ್​ ನಟರ ಸಿನಿಮಾಗಳು ಓಟಿಟಿ ಮೊರೆ ಹೋಗುತ್ತಿರುವುದು ಗಮನಾರ್ಹ ಸಂಗತಿ. ಈ ಡಿಸೆಂಬರ್​ನಲ್ಲಿ ಬಹುನಿರೀಕ್ಷಿತ ಚಿತ್ರಗಳು ತೆರೆಕಾಣುತ್ತಿವೆ.

ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್​ ಸಿರೀಸ್
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ
TV9 Web
| Updated By: Digi Tech Desk|

Updated on:Nov 30, 2021 | 12:30 PM

Share

ಮೊದಲ ಲಾಕ್​ಡೌನ್​ ಬಳಿಕ ಮನರಂಜನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಚಿತ್ರಮಂದಿರಗಳಿಗಿಂತಲೂ ಹೆಚ್ಚಾಗಿ ಓಟಿಟಿ ಪ್ಲಾಟ್​ಫಾರ್ಮ್ (OTT platform)​ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿತು. ನೆಟ್​ಫ್ಲಿಕ್ಸ್​ (Netflix), ಅಮೇಜಾನ್​ ಪ್ರೈಂ ವಿಡಿಯೋ, ಜೀ5, ಡಿಸ್ನಿ ಪ್ಲಸ್​ ಹಾಟ್ ಸ್ಟಾರ್​ ಮುಂತಾದ ಓಟಿಟಿ ವೇದಿಕೆಗಳ ವ್ಯವಹಾರ ವೃದ್ಧಿಸಿತು. ಹಲವು ಸ್ಟಾರ್​ ನಟರ ಸಿನಿಮಾಗಳು ಕೂಡ ನೇರವಾಗಿ ಓಟಿಟಿ ಮೂಲಕ ಬಿಡುಗಡೆಯಾಗಿ ಒಳ್ಳೆಯ ಲಾಭ ಮಾಡಿಕೊಂಡ ಉದಾಹರಣೆ ಇದೆ. ಈ ವರ್ಷಾಂತ್ಯಕ್ಕೆ ಅನೇಕ ಸಿನಿಮಾ ಮತ್ತು ವೆಬ್​ ಸಿರೀಸ್​ಗಳು (Web Series) ಆನ್​ಲೈನ್​ನಲ್ಲಿ ರಿಲೀಸ್​ ಆಗುತ್ತಿವೆ. ಅಕ್ಷಯ್​ ಕುಮಾರ್​, ಅಭಿಷೇಕ್​ ಬಚ್ಚನ್​ ಮುಂತಾದ ಬಾಲಿವುಡ್​ ಸ್ಟಾರ್​ ನಟರು ಕೂಡ ಓಟಿಟಿ ಮೊರೆ ಹೋಗುತ್ತಿರುವುದು ಗಮನಾರ್ಹ ಸಂಗತಿ. ಈ ವರ್ಷ ಡಿಸೆಂಬರ್​ನಲ್ಲಿ ಓಟಿಟಿ ಮೂಲಕ ಧೂಳೆಬ್ಬಿಸಲು ಬರುತ್ತಿರುವ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..

ಅಭಿಷೇಕ್​ ಬಚ್ಚನ್​ ನಟನೆಯ ‘ಬಾಬ್​ ಬಿಸ್ವಾಸ್​’ ಸಿನಿಮಾ ಡಿ.3ರಂದು ಓಟಿಟಿ ಮೂಲಕ ಬಿಡುಗಡೆ ಆಗುತ್ತಿದೆ. ಡಿಫರೆಂಟ್​ ಗೆಟಪ್​ನಲ್ಲಿ ಅಭಿಷೇಕ್​ ಬಚ್ಚನ್​ ಕಾಣಿಸಿಕೊಂಡಿದ್ದು ‘ಜೀ5’ ಮೂಲಕ ಈ ಸಿನಿಮಾ ರಿಲೀಸ್​ ಆಗಲಿದೆ. ಟ್ರೇಲರ್​ ಮೂಲಕ ಭಾರಿ ಕೌತುಕ ಮೂಡಿಸಿರುವ ‘ಬಾಬ್​ ಬಿಸ್ವಾಸ್​’ ಚಿತ್ರವು ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿದೆ. ಸುರ್ವೀನ್​ ಚಾವ್ಲಾ ಮತ್ತು ಆರ್​. ಮಾಧವನ್​ ನಟಿಸಿರುವ ‘ಡಿಕಪಲ್ಡ್​’ ವೆಬ್​ ಸಿರೀಸ್​ ಡಿ.17ರಂದು ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಲಿದೆ. ಇದಕ್ಕೆ ಹಾರ್ದಿಕ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ

ಅಕ್ಷಯ್​ ಕುಮಾರ್​, ಧನುಷ್​​, ಸಾರಾ ಅಲಿ ಖಾನ್​ ಅಭಿನಯದ ‘ಅತರಂಗಿ ರೇ’ ಚಿತ್ರ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಡಿ.24ರಂದು ವೀಕ್ಷಣೆಗೆ ಲಭ್ಯವಾಗುತ್ತಿದೆ. ಈ ಸಿನಿಮಾ ಮೇಲೆ ಭರವಸೆ ಮೂಡಲು ಹಲವು ಕಾರಣಗಳಿವೆ. ಘಟಾನುಘಟಿ ಕಲಾವಿದರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಆನಂದ್​ ಎಲ್​. ರಾಯ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಧನುಶ್​ ಅವರಿಗೆ ಡಿಫರೆಂಟ್​ ಆದಂತಹ ಪಾತ್ರ ನೀಡಲಾಗಿದೆ. ಈಗಾಗಲೇ ಟ್ರೇಲರ್​ ಮೂಲಕ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ.

ಖ್ಯಾತ ನಟಿ ರವೀನಾ ಟಂಡನ್​ ಅವರು ಇದೇ ಮೊದಲ ಬಾರಿಗೆ ವೆಬ್​ ಸರಣಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿರುವ ‘ಅರಣ್ಯಕ್​’ ವೆಬ್​ ಸಿರೀಸ್​ ಕೂಡ ಭಾರಿ ನಿರೀಕ್ಷೆ ಮೂಡಿಸಿದೆ. ಡಿ.10ರಂದು ನೆಟ್​ಫ್ಲಿಕ್ಸ್​ ಮೂಲಕ ‘ಅರಣ್ಯಕ್​’ ರಿಲೀಸ್​ ಆಗಲಿದೆ.

ಇದನ್ನೂ ಓದಿ:

ಯಾವ ಖಾನ್​ಗೂ ಕಮ್ಮಿ ಇಲ್ಲ ಅಕ್ಷಯ್​ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

Published On - 12:12 pm, Tue, 30 November 21

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ