ಸಮಂತಾಗೆ ಕಂಗನಾ ಮೆಚ್ಚುಗೆ ಮಾತು; ಎರಡೇ ಪದಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ ಕಾಂಟ್ರವರ್ಸಿ ನಟಿ
Samantha Ruth Prabhu: ಸಾಮಾನ್ಯವಾಗಿ ಕಂಗನಾ ರಣಾವತ್ ಸುದ್ದಿ ಆಗುವುದೇ ಕಾಂಟ್ರವರ್ಸಿಗಳ ಮೂಲಕ. ಅದರ ನಡುವೆ ಅವರು ಯಾರನ್ನಾದರೂ ಹೊಗಳುತ್ತಾರೆ ಎಂದರೆ ಸ್ವಲ್ಪ ಅಚ್ಚರಿ ಆಗುವುದು ಸಹಜ.
ನಟಿ ಸಮಂತಾ (Samantha Ruth Prabhu) ಈಗ ವೃತ್ತಿಜೀವನದಲ್ಲಿ ಹೊಸ ವೇಗ ಪಡೆದುಕೊಂಡಿದ್ದಾರೆ. ನಾಗ ಚೈತನ್ಯ (Naga Chaitanya) ಜತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಅವರ ಆಯ್ಕೆಗಳು ಬದಲಾಗಿವೆ. ಮೊದಲಿನಿಂತಲೂ ಭಿನ್ನವಾದ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ಅವರು ಮುಂದೆ ಸಾಗುತ್ತಿದ್ದಾರೆ. ವಿಶೇಷ ಏನೆಂದರೆ, ಸಮಂತಾ ಮಾಡಿದ ಕೆಲಸಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಒಂದು ಖಾಸಗಿ ಮ್ಯಾಗಜಿನ್ ಸಲುವಾಗಿ ಸಮಂತಾ ಫೋಟೋಶೂಟ್ ಮಾಡಿಸಿದ್ದಾರೆ. ಅದರ ಕೆಲವು ಫೋಟೋ (Samantha Photos) ಮತ್ತು ಮೇಕಿಂಗ್ ವಿಡಿಯೋವನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಕಂಗನಾ ರಣಾವತ್ ಕೂಡ ಫಿದಾ ಆಗಿದ್ದಾರೆ. ಅದಕ್ಕೆ ಕಮೆಂಟ್ ಮಾಡಿರುವ ಅವರು ‘ಸುಂದರ ಮಹಿಳೆ’ ಎಂದು ಎರಡೇ ಪದಗಳಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಕಂಗನಾ ಸುದ್ದಿ ಆಗುವುದೇ ಕಾಂಟ್ರವರ್ಸಿಗಳ ಮೂಲಕ. ಬಾಲಿವುಡ್ನ ಬಹುತೇಕ ಸೆಲೆಬ್ರಿಟಿಗಳ ಜೊತೆಗೆ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಅದರ ನಡುವೆ ಅವರು ಯಾರನ್ನಾದರೂ ಹೊಗಳುತ್ತಾರೆ ಎಂದರೆ ಸ್ವಲ್ಪ ಅಚ್ಚರಿ ಆಗುವುದು ಸಹಜ. ಸದ್ಯ ಕಂಗನಾ ಮಾಡಿರುವ ಕಮೆಂಟ್ ನೋಡಿ ಸಮಂತಾ ಖುಷಿ ಆಗಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಧನ್ಯವಾದಗಳು’ ಎಂದಿದ್ದಾರೆ. ಪ್ರಿಯಾಮಣಿ, ರಾಶಿ ಖನ್ನಾ, ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಮಂತಾ ಅವರ ಹೊಸ ಫೋಟೋಶೂಟ್ ನೋಡಿ ಮೆಚ್ಚಿಕೊಂಡಿದ್ದಾರೆ.
View this post on Instagram
ಬೈಸೆಕ್ಸುವಲ್ ಮಹಿಳೆ ಪಾತ್ರದಲ್ಲಿ ಸಮಂತಾ:
ಇಂಗ್ಲಿಷ್ ಸಿನಿಮಾ ನಿರ್ದದೇಶಕ ಫಿಲಿಪ್ ಜಾನ್ ಆ್ಯಕ್ಷನ್-ಕಟ್ ಹೇಳಲಿರುವ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಸಮಂತಾ ಬೈಸೆಕ್ಸುವಲ್ ತಮಿಳು ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ವಿಚಾರ ಈಗ ಚರ್ಚೆಗೆ ಕಾರಣ ಆಗುತ್ತಿದೆ. ಸಮಂತಾ ನಟಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಬಗ್ಗೆ ತಮಿಳುನಾಡಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ತಮಿಳರ ಭಾವನೆಗಳಿಗೆ ಸಮಂತಾ ಪಾತ್ರವು ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಲಾಗಿತ್ತು. ಈಗ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಬೈಸೆಕ್ಸುವಲ್ ತಮಿಳು ಮಹಿಳೆಯಾಗಿ ಸಮಂತಾ ನಟಿಸಿದರೆ ಮತ್ತೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಬೈಸೆಕ್ಸುವಲ್ ಎಂದರೆ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಹೊಂದಿರುವ ವ್ಯಕ್ತಿ. ತಮಿಳುನಾಡಿನ ಮಹಿಳೆಯನ್ನು ಆ ರೀತಿಯ ಪಾತ್ರದಲ್ಲಿ ತೋರಿಸಲಾಗುತ್ತದೆ ಎಂಬ ವಿಷಯ ಕೇಳಿಬಂದ ಬಳಿಕ ಅನೇಕರು ಅದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸದ್ಯ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಚ್ಛೇದನದ ಬಳಿಕ ಈ ಇಂಟರ್ನ್ಯಾಷನಲ್ ಪ್ರಾಜೆಕ್ಟ್ ಒಪ್ಪಿಕೊಂಡಿರುವುದು ಸಮಂತಾಗೆ ಖುಷಿ ನೀಡಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಅನೌನ್ಸ್ ಮಾಡಿದ್ದ ಅವರು, ತಮ್ಮ ಮನದ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ನಿರ್ದೇಶಕ ಫಿಲಿಪ್ ಜಾನ್ ಜತೆ ತಾವು ಇರುವ ಫೋಟೋವನ್ನು ಶೇರ್ ಮಾಡಿಕೊಂಡು ಸಿಹಿ ಸುದ್ದಿ ನೀಡಿದ್ದರು.
ಇದನ್ನೂ ಓದಿ:
ಆಹಾರಕ್ಕಿಂತಲೂ ನನಗೆ ಸೆಕ್ಸ್ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ವೈರಲ್
‘ಪುಷ್ಪ’ ಚಿತ್ರದಲ್ಲಿ ನಟಿ ಸಮಂತಾಗೆ ಐಟಂ ಡ್ಯಾನ್ಸ್ ಹೇಳಿಕೊಡಲು ಬಂದ ಗಣೇಶ್ ಆಚಾರ್ಯ