AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ಮದುವೆಯನ್ನು ಮುಂದೂಡಿದ ಆಲಿಯಾ- ರಣಬೀರ್; ಮಹತ್ವದ ನಿರ್ಧಾರಕ್ಕೆ ಈ ಅಂಶಗಳೇ ಕಾರಣವಂತೆ!

Ranbir Kapoor: ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಜೋಡಿ ಮದುವೆ ಮುಂದೂಡಲು ನಿರ್ಧರಿಸಿದೆ. ಅದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Alia Bhatt: ಮದುವೆಯನ್ನು ಮುಂದೂಡಿದ ಆಲಿಯಾ- ರಣಬೀರ್; ಮಹತ್ವದ ನಿರ್ಧಾರಕ್ಕೆ ಈ ಅಂಶಗಳೇ ಕಾರಣವಂತೆ!
ಆಲಿಯಾ ಭಟ್, ರಣಬೀರ್ ಕಪೂರ್
TV9 Web
| Edited By: |

Updated on:Dec 01, 2021 | 10:02 AM

Share

ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ ಕೈಫ್ (Katrina kaif)​ ಮದುವೆಯ ದುಲ್ಲು ಜೋರಾಗಿರುವಂತೆಯೇ, ಅಭಿಮಾನಿಗಳು ಸದ್ಯದಲ್ಲೇ ಮತ್ತೊಂದು ತಾರಾ ಮದುವೆಯ ನಿರೀಕ್ಷೆಯಲ್ಲಿದ್ದರು. ಹೌದು. ರಣಬೀರ್ ಕಪೂರ್ (Ranbir kapoor) ಹಾಗೂ ಆಲಿಯಾ ಭಟ್ (Alia Bhatt) ಇದೀಗ ಪ್ರೇಮ ಪಕ್ಷಿಗಳಾಗಿ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಈರ್ವರೂ ತಮ್ಮ ಸಂಬಂಧವನ್ನು ಮುಚ್ಚಿಟ್ಟಿಲ್ಲ. ಅಲ್ಲದೇ ಸದ್ಯದಲ್ಲೇ ದಾಂಪತ್ಯಕ್ಕೆ ಕಾಲಿಡುವ ಸೂಚನೆಯನ್ನೂ ಅವರು ನೀಡಿದ್ದರು. ಆದರೆ ಮದುವೆ ವಿವಿಧ ಕಾರಣಗಳಿಂದ ಮುಂದೂಡತ್ತಲೇ ಬಂದಿದೆ. ಇದೀಗ ಫ್ಯಾನ್ಸ್​ಗೆ ಮತ್ತೊಮ್ಮೆ ಬೇಸರವಾಗುವ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಹೌದು. ಎಲ್ಲವೂ ಸರಿಯಾಗಿದ್ದರೆ, ಈ ವರ್ಷದ ಡಿಸೆಂಬರ್​​ನಲ್ಲಿಯೇ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ಬಲ್ಲಮೂಲಗಳ ಪ್ರಕಾರ ಈ ಜೋಡಿ ಮದುವೆಯನ್ನು ಮುಂದೂಡಿದೆ. ಅದೂ ಕೂಡ ಬರೋಬ್ಬರಿ ಒಂದು ವರ್ಷ! ಮುಂದಿನ ವರ್ಷದ ಡಿಸೆಂಬರ್​​ನಲ್ಲಿ ರಣಬೀರ್- ಆಲಿಯಾ ಕಲ್ಯಾಣವಾಗಲಿದ್ದಾರೆ ಎನ್ನುವುದು ಸದ್ಯದ ಸುದ್ದಿ.

ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ, ಮದುವೆಯನ್ನು ಮುಂದೂಡಲು ಇಬ್ಬರೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವುದೇ ಕಾರಣವಂತೆ. ಅಲ್ಲದೇ ರಣಬೀರ್ ಆಲಿಯಾ ಜೋಡಿ ಅದ್ದೂರಿಯಾದ ‘ಡೆಸ್ಟಿನೇಷನ್ ವೆಡ್ಡಿಂಗ್’ಗೆ ಪ್ಲಾನ್ ಮಾಡಿದೆಯಂತೆ. ಇದೆಲ್ಲದರ ತಯಾರಿಗೆ ಬಹಳಷ್ಟು ಕಾಲಾವಕಾಶ ಬೇಕು. ಆದರೆ ಇದೀಗ ಈ ಜೋಡಿಯ ಕೈಯಲ್ಲಿ ಹಲವಾರು ಚಿತ್ರಗಳಿವೆ. ಆದ್ದರಿಂದ ಸಿನಿಮಾ ಕಮಿಟ್​ಮೆಂಟ್ ಮುಗಿಸಿ, ನಂತರ ಕಲ್ಯಾಣವಾಗಲು ಈ ಜೋಡಿ ನಿರ್ಧರಿಸಿದೆ ಎನ್ನಲಾಗಿದೆ.

ಇದಲ್ಲದೇ ಮದುವೆ ಮುಂದೂಡಲು ಮತ್ತೊಂದು ವಿಷಯವೂ ಕಾರಣ ಎನ್ನಲಾಗುತ್ತಿದೆ. ಅದೆಂದರೆ, ರಣಬೀರ್- ಆಲಿಯಾ ಜೋಡಿಯಾಗಿ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರವನ್ನು 2022ರ ಸೆಪ್ಟೆಂಬರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದ್ದರಿಂದ ಚಿತ್ರದ ಬಿಡುಗಡೆಯನ್ನು ಪೂರೈಸಿ, ನಂತರ ಮದುವೆ ತಯಾರಿಯಲ್ಲಿ ತೊಡಗಿಕೊಳ್ಳುವ ಯೋಚನೆ ಈ ತಾರಾ ಜೋಡಿಯದ್ದು.

ರಣಬೀರ್ ಹಾಗೂ ಆಲಿಯಾ ಮೊಟ್ಟ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆದ್ದರಿಂದಲೇ ಆ ಚಿತ್ರದ ಬಗ್ಗೆ ಈರ್ವರಿಗೂ ವಿಶೇಷ ಕಾಳಜಿಯಿದೆ. ‘ಬ್ರಹ್ಮಾಸ್ತ್ರ’ವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದು, ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಮೊದಲಾದ ತಾರೆಯರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ಮ್ಯಾಟ್ರಿಕ್ಸ್’ ಚಿತ್ರತಂಡ ಕಾಪಾಡಿಕೊಂಡಿದ್ದ ಗುಟ್ಟು ಬಹಿರಂಗ!; ಪ್ರಿಯಾಂಕಾ ಪಾತ್ರದ ಹೆಸರು ತಿಳಿದು ಥ್ರಿಲ್ ಆದ ಫ್ಯಾನ್ಸ್ 

Rajinikanth: ನೆಟ್​​ಫ್ಲಿಕ್ಸ್​​ನಲ್ಲೂ ರಜಿನಿ ಹವಾ; ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ತಲೈವಾ!

Published On - 10:00 am, Wed, 1 December 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್