ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ (Matrix Resurrections) ಚಿತ್ರ ಈಗಾಗಲೇ ತನ್ನ ಟ್ರೈಲರ್ನಿಂದ ಮೋಡಿ ಮಾಡಿದೆ. ಆದರೆ ಆ ಚಿತ್ರದಲ್ಲಿ ಪ್ರಿಯಾಂಕಾ ಪಾತ್ರದ ಕುರಿತು ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿತ್ತು. ಟ್ರೈಲರ್ನಲ್ಲಿ ಕೂಡ ಪ್ರಿಯಾಂಕಾ ಕಾಣಿಸಿಕೊಂಡಿದ್ದರೂ, ಪಾತ್ರದ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ಇಂಗ್ಲೀಷ್ ಪೋಸ್ಟರ್ಗಳಲ್ಲೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ‘ಮ್ಯಾಟ್ರಿಕ್ಸ್’ ಚಿತ್ರದ ಕೊರಿಯನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಿಯಾಂಕಾ ಪಾತ್ರದ ಗುಟ್ಟು ಹೊರಬಂದಿದೆ. ಸೋಮವಾರ ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯು ಕೊರಿಯನ್ ಭಾಷೆಯಲ್ಲಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ. ಇಂಗ್ಲೀಷ್ ಪೋಸ್ಟರ್ನಂತೆಯೇ ಈ ಪೋಸ್ಟರ್ಗಳಿದೆ. ಆದರೆ ಚಿತ್ರದ ಬರಹಗಳು ಬದಲಾವಣೆಯಾಗಿದ್ದು, ಪ್ರಿಯಾಂಕಾ ಪಾತ್ರದ ಗುಟ್ಟು ಬಿಟ್ಟುಕೊಟ್ಟಿವೆ.
ಇಂಗ್ಲೀಷ್ ಪೋಸ್ಟರ್ಗಳು ಪ್ರಿಯಾಂಕಾ ಪಾತ್ರದ ಹೆಸರನ್ನು ಆದಷ್ಟು ಗುಟ್ಟಾಗಿಡಲು ಪ್ರಯತ್ನಿಸಿದ್ದವು. ಆದರೆ ಕೊರಿಯನ್ ಪೋಸ್ಟರ್ಗಳು ಅದನ್ನು ರಿವೀಲ್ ಮಾಡಿವೆ. ಹೌದು. ಪ್ರಿಯಾಂಕಾ ‘ಮ್ಯಾಟ್ರಿಕ್ಸ್’ನಲ್ಲಿ ‘ಸತಿ’ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ಧಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ಧಾರೆ. ಕೊರಿಯನ್ ಪೋಸ್ಟರ್ನಲ್ಲಿ ಪ್ರಿಯಾಂಕಾ ಪಾತ್ರದ ಕುರಿತು ತಿಳಿಸಲಾಗಿದ್ದು, ‘ಸತಿ’ ಹೆಸರಿನ ಹ್ಯಾಶ್ಟ್ಯಾಗ್ ಕೂಡ ಬರೆಯಲಾಗಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್:
ಕೊರಿಯನ್ ಪೋಸ್ಟರ್
ಪ್ರಿಯಾಂಕಾ ಈ ಹಿಂದಿನ ಮ್ಯಾಟ್ರಿಕ್ಸ್ ಚಿತ್ರದಲ್ಲಿದ್ದ ‘ಸತಿ’ಯ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮ್ಯಾಟ್ರಿಕ್ಸ್ ಚಿತ್ರವು ಡಿಸೆಂಬರ್ 22ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರವನ್ನು ಲಾನಾ ವಚೋವ್ಸ್ಕಿ ನಿರ್ದೇಶಿಸಿದ್ದು, ಜಡಾ ಪಿಂಕೆಟ್ ಸ್ಮಿತ್ ನಿಯೋಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಸ್ಟಿನಾ ರಿಕ್ಕಿ, ಜೆಸ್ಸಿಕಾ ಹೆನ್ವಿಕ್, ಜೊನಾಥನ್ ಗ್ರಾಫ್ ಮತ್ತು ನೀಲ್ ಪ್ಯಾಟ್ರಿಕ್ ಹ್ಯಾರಿಸ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಹೇರ್ ಡ್ರೈಯರ್ ಬದಲು ಕುಕ್ಕರ್ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!