Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

TV9 Digital Desk

| Edited By: preethi shettigar

Updated on:Dec 01, 2021 | 8:51 AM

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈಗಾಗಲೇ 575,185 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಮೆಂಟ್‌ಗಳು ಬಂದಿವೆ. ಆ ಪ್ರಕಾರ ನೋಡುವುದಾದರೆ ಹಲವರು ನಗುವನ್ನು ವ್ಯಕ್ತಪಡಿಸುವ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೂರ್ಖತನ ಎಂದು ಮೂಗು ಮುರಿದಿದ್ದಾರೆ.

Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!
ಹೇರ್​ ಡ್ರೈಯರ್​ ಬದಲು ಕುಕ್ಕರ್​ ಬಳಕೆ

Follow us on

ಸಮಸ್ಯೆಯೊಂದು ಹುಟ್ಟಿಕೊಂಡಾಗ ಅದಕ್ಕೆ ಪರಿಹಾರ ಹುಡುಕುವುದು ಸಾಮಾನ್ಯ. ಆದರೆ ಪರಿಹಾರವೇ ದೊರಕದಿದ್ದಾಗ ಅದನ್ನು ಹಾಗೆಯೇ ಕೈಬಿಡುವ ಬದಲು ಅದನ್ನು ಬಗೆಹರಿಸಲು ಅನ್ಯ ಮಾರ್ಗ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಹುಡುಕುವುದು ಮುಖ್ಯ. ಹೀಗೆ ನಮಗೆ ಬೇಕಾದ್ದು ಸಿಗದೆ ಇರುವಾಗ ಇರುವುದರಲ್ಲಿಯೇ ಕೆಲಸ ಸಾಧಿಸುವುದು ನಮ್ಮ ಚಾಣಕ್ಷತೆಗೆ ಬಿಟ್ಟಿದ್ದು. ಸದ್ಯ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತಾರೆ. ಹೇರ್ ಡ್ರೈಯರ್ ಇಲ್ಲದೇ ಇರುವಾಗ ಹೇಗೆ ತಲೆ ಕೂದಲನ್ನು ಒಣಗಿಸುವುದು ಎಂಬ ಚಿಂತನೆಗೆ ಇಳಿದ ಯುವಕೊನ್ನಬ್ಬ ತನ್ನ ತಲೆ ಕೂದಲನ್ನು ಕುಕ್ಕರ್​ನಿಂದ ಡ್ರೈ ಮಾಡಿದ್ದಾನೆ. ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಹರಿಬಿಡಲಾಗಿದ್ದು, ನೆಟ್ಟಿಗರು ಈ ವಿಡಿಯೋ ಕಂಡು ಫಿದಾ ಆಗಿದ್ದಾರೆ.

ಹೇರ್ ಡ್ರೈಯರ್ ಇಲ್ಲದಿರುವಾಗ ತನ್ನ ಕೂದಲನ್ನು ಒಣಗಿಸಲು ಮನೆಯಲ್ಲಿಯೇ ಇರುವ ವಸ್ತುವಿನಿಂದ ಯುವಕನೋರ್ವ ಹೊಸ ತಂತ್ರ ರೂಪಿಸಿದ್ದಾನೆ. ಬ್ಲಾಕ್ ಲವರ್ ಒಕ್ಸ್ (Black_lover_ox ) ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಪ್ರೆಶರ್ ಕುಕ್ಕರ್‌ನಿಂದ ಹೊರಬರುವ ಸ್ಟೀಮ್‌ನಿಂದ ಯುವಕ ತನ್ನ ತಲೆ ಕೂದಲನ್ನು ಒಣಗಿಸುತ್ತಿರುವುದನ್ನು ಕಾಣಬಹುದು. ಕುಕ್ಕರ್‌ನಿಂದ ಸ್ಟೀಮ್ ಹೊರಬರುತ್ತಿದ್ದಂತೆ, ಹುಡುಗ ಅದರ ಮುಂದೆ ನಿಂತು ತನ್ನ ಕೂದಲನ್ನು ಡ್ರೈ ಮಾಡಿಕೊಂಡಿದ್ದಾನೆ.

View this post on Instagram

A post shared by black_lover__ox (@black_lover__ox)

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈಗಾಗಲೇ 575,185 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಮೆಂಟ್‌ಗಳು ಬಂದಿವೆ. ಆ ಪ್ರಕಾರ ನೋಡುವುದಾದರೆ ಹಲವರು ನಗುವನ್ನು ವ್ಯಕ್ತಪಡಿಸುವ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೂರ್ಖತನ ಎಂದು ಮೂಗು ಮುರಿದಿದ್ದಾರೆ. ಒಬ್ಬರು ಇದು ಉತ್ತಮ ಕಾನ್ಸೆಪ್ಟ್ ಮುಂದುವರಿಸು ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದು ಭಾರತ ಇಲ್ಲಿ ಅನೇಕ ವಿಚಾರಗಳು ನಡೆಯುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮಸಾಲಾ ಸ್ಟ್ರಾಬೆರಿ ತಿಂದಿದ್ದೀರಾ? ಇದೀಗ ವೈರಲ್ ಆಗಿದೆ ಹೊಸ ರೆಸಿಪಿಯ ವಿಡಿಯೊ

ಸ್ಕರ್ಟ್​, ಹೈ ಹೀಲ್ಸ್​ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ; ವಿಡಿಯೊ ವೈರಲ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada