ಸ್ಕರ್ಟ್​, ಹೈ ಹೀಲ್ಸ್​ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ; ವಿಡಿಯೊ ವೈರಲ್​

ಕೆಲವು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುವ ವಿಡಿಯೊಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡಾ ಅಂಥದ್ದೇ! ಯುವತಿ ಆರಾಮವಾಗಿ ಫ್ಲಿಪ್​ ಮಾಡಿದ್ದಾಳೆ. ವಿಡಿಯೊ ಇದೆ ನೀವೇ ನೋಡಿ.

ಸ್ಕರ್ಟ್​, ಹೈ ಹೀಲ್ಸ್​ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ; ವಿಡಿಯೊ ವೈರಲ್​
ಸ್ಕರ್ಟ್​, ಹೈ ಹೀಲ್ಸ್​ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ

ಭಾರತದಲ್ಲಿ ಪ್ರತಿಭಾವಂತರಿಗೆ ಯಾವ ಕೊರತೆಯೂ ಇಲ್ಲ. ಈಗೆಲ್ಲಾ ಯುವತಿಯರೂ ಸಹ ಆರಾಮವಾಗಿ ಫ್ಲಿಪ್ ಕೌಶಲ್ಯ ಪ್ರದರ್ಶಿಸುತ್ತಾರೆ. ಇದೀಗ ವೈರಲ್ ಆದ ವಿಡಿಯೊದಲ್ಲೂ ಸಹ ಯುವತಿಯು ಫ್ಲಿಪ್ ಮಾಡಿ ನೆಟ್ಟಿಗರ ಮನಸೆಳೆದಿದ್ದಾಳೆ. ಸಾಮಾನ್ಯವಲ್ಲ! ಸ್ಕರ್ಟ್, ಹೈ ಹೀಲ್ಸ್ ತೊಟ್ಟ ಯುವತಿಯು ರಸ್ತೆಯಲ್ಲಿ ಪಲ್ಟಿಯಾಗಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಯುವತಿಯ ಕೌಶ್ಯಲ್ಯ ನೋಡಿ ನೆಟ್ಟಿಗರು ವಾವ್ ಎಂದಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಈ ಥರಹದ ಅದೆಷ್ಟೋ ಪ್ರತಿಭೆಗಳ ವಿಡಿಯೊ ಹರಿದಾಡುತ್ತಿರುತ್ತವೆ. ಕೆಲವು ತಮಾಷೆಯ ವಿಡಿಯೊಗಳಾಗಿದ್ದರೆ, ಇನ್ನು ಕೆಲವು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡಾ ಅಂಥದ್ದೇ! ಯುವತಿ ಆರಾಮವಾಗಿ ಫ್ಲಿಪ್​ ಮಾಡಿದ್ದಾಳೆ. ವಿಡಿಯೊ ಇದೆ ನೀವೇ ನೋಡಿ.

ಯುವತಿಯ ಮುಖದಲ್ಲಿ ಯಾವುದೇ ಭಯವಿಲ್ಲ. ಆತ್ಮವಿಶ್ವಾಸದಿಂದ ಫ್ಲಿಪ್ಅನ್ನು ಪೂರ್ಣಗೊಳಿಸಿದ್ದಾಳೆ. ಹೈ ಹೀಲ್ಸ್ ಎಂದು ಶೀರ್ಷಿಕೆಯಲ್ಲಿ ಬರೆಯುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು, ಬರಿಗಾಲಲ್ಲೇ ಫ್ಲಿಪ್ ಮಾಡುವುದು ಕಷ್ಟ, ಈಕೆ ಹೈ ಹೀಲ್ಸ್ ತೊಟ್ಟು ಪಲ್ಟಿಯಾಗಿದ್ದಾಳೆ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ವಿಡಿಯೊದಲ್ಲಿ ಕಾಣಿಸುವ ಯುವತಿ ಪಾರುಲ್. ಇವರು ಫಿಟ್ನೆಸ್ ಮಾಡೆಲ್ ಮತ್ತು ಇವರು ಜಿಮ್ನಾಸ್ಟ್ ಕೂಡಾ ಹೌದು. ಇವರು ಇನ್ಸ್ಟಾಗ್ರಾಮ್​ನಲ್ಲಿ 242 ಸಾವಿರಕ್ಕೂ ಹೆಚ್ಚಿನ ಹಿಂಬಾಲಕರನ್ನು ಹೊಂದಿದ್ದಾರೆ. ಈ ಹಿಂದೆಯೂ ಸಹ ಫ್ಲಿಪ್ ಮಾಡುವ ಅನೇಕ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Parul_Arora💫 (@parul_cutearora)

ಫ್ಲಿಪ್ ಮಾಡುವುದು ಸಾಮಾನ್ಯ ಕಲೆಯಲ್ಲ. ಅಷ್ಟು ಸುಲಭದಲ್ಲಿಯೂ ಈ ಕಲೆ ಕಲಿಯಲು ಸಾಧ್ಯವಿಲ್ಲ. ಹಲವು ದಿನಗಳ ತರಬೇತಿ ಮತ್ತು ಸದೃಢ ಮನಸ್ಸಿನಿಂದ ಈ ಕೌಶಲ್ಯ ಕಲಿಯಬೇಕು. ಹಾಗಿರುವಾಗ ಅಷ್ಟು ಸುಲಭದಲ್ಲಿ ಫ್ಲಿಪ್ ಮಾಡುತ್ತಿರುವ ಮಾಡೆಲ್ ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಇವರ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊವನ್ನು ಹಂಚಿಕೊಂಡಾಗಿನಿಂದ 239,830 ಕ್ಕೂ ಹೆಚ್ಚಿನ ಲೈಕ್ಸ್​ಗಳು ಲಭ್ಯವಾಗಿವೆ. ಯುವತಿಯ ದೃಢತೆಗೆ ಶ್ಲಾಘನೆ ವ್ಯಕ್ತವಾಗಿದೆ. ನೈಸ್ ಫ್ಲಿಪ್, ಹೀಲ್ಸ್​ನೊಂದಿಗೆ ಎಂದು ಓರ್ವರು ಹೇಳಿದ್ದಾರೆ. ಅದ್ಭುತ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಗಡ್ಡದಿಂದ 63 ಕೆಜಿ ತೂಕವಿರುವ ಯುವತಿಯನ್ನು ಮೇಲಕ್ಕೆತ್ತಿದ ವ್ಯಕ್ತಿ; ಗಿನ್ನಿಸ್​ ವರ್ಲ್ಡ್ ರೆಕಾರ್ಡ್

Viral Video: ಗ್ಲಾಸಿನಲ್ಲಿದ್ದ ನೀರನ್ನು ಗಟಗಟನೇ ಕುಡಿದ ದೈತ್ಯ ನಾಗರ ಹಾವು!

Click on your DTH Provider to Add TV9 Kannada