Viral Video: ರಸ್ತೆ ಬದಿಯಲ್ಲಿ ನಿಂತು ವಿದೇಶಿಗನ ಜೊತೆ ಸಕತ್ ಸ್ಟೆಪ್ ಹಾಕಿದ ವೃದ್ಧ; ವಿಡಿಯೊ ನೋಡಿ
ನೆಟ್ಟಿಗರು ಮೆಚ್ಚಿಕೊಂಡ ವಿಡಿಯೊವೊಂದು ಇದೀಗ ಸಕತ್ ವೈರಲ್ ಆಗಿದೆ. ಓ ಓ ಜಾನೆ ಜಾನಾ ಅನ್ನೋ ಹಾಡಿಗೆ ವೃದ್ಧನು ಸಕತ್ ಸ್ಟೆಪ್ ಹಾಕಿದ್ದಾರೆ. ವಿದೇಶಿಗನ ಜೊತೆಗೂಡಿ ಕುಣಿದ ವೃದ್ಧನನ್ನು ಜನರೆಲ್ಲಾ ಬೆರಗಾಗಿ ನೋಡುತ್ತಾ ನಿಂತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೊಗಳಲ್ಲಿ ಕೆಲವನ್ನು ಪದೇ ಪದೇ ನೋಡಬೇಕು ಅನ್ನುವಷ್ಟರ ಮಟ್ಟಿಗೆ ಇಷ್ಟವಾಗಿ ಬಿಡುತ್ತವೆ. ಇನ್ನು ಕೆಲವು ತಮಾಷೆ ದೃಶ್ಯಗಳಾಗಿದ್ದು ನಕ್ಕು ನಕ್ಕು ಸಾಕಾಯ್ತಪ್ಪಾ ಅನ್ನುವಷ್ಟರ ಮಟ್ಟಿಗೆ ನಗು ತರಿಸುತ್ತವೆ. ಇನ್ನು ಕೆಲವು ವಿಡಿಯೊಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಕೆಲವು ದೃಶ್ಯಗಳನ್ನು ಬೆರಗಾಗಿ ನೋಡುವಷ್ಟು ಕುತೂಹಲಕಾರಿಯಾಗಿರುತ್ತವೆ. ನೆಟ್ಟಿಗರು ಮೆಚ್ಚಿಕೊಂಡ ವಿಡಿಯೊವೊಂದು ಇದೀಗ ಸಕತ್ ವೈರಲ್ ಆಗಿದೆ. ಓ ಓ ಜಾನೆ ಜಾನಾ ಅನ್ನೋ ಹಾಡಿಗೆ ವೃದ್ಧನು ಸಕತ್ ಸ್ಟೆಪ್ ಹಾಕಿದ್ದಾರೆ. ವಿದೇಶಿಗನ ಜೊತೆಗೂಡಿ ಕುಣಿದ ವೃದ್ಧನನ್ನು ಜನರೆಲ್ಲಾ ಬೆರಗಾಗಿ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವೃದ್ಧ ಮತ್ತು ವಿದೇಶಿಗ ಇಬ್ಬರು ಜೊತೆ ಸೇರಿ ರಸ್ತೆಯ ಪಕ್ಕದಲ್ಲಿ ನಿಂತು ನೃತ್ಯ ಮಾಡಿದ್ದಾರೆ. ವೃದ್ಧನು ಖುಷಿಯಿಂದ ಹೆಜ್ಜೆ ಹಾಕಿದ್ದಾನೆ. ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ವೃದ್ಧನ ನೃತ್ಯ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಇನ್ನು ಕೆಲವರು ಒಳ್ಳೆಯ ಮನಸ್ಸು ಎಂದಿದ್ದಾರೆ. ಇದೇ ರೀತಿ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
देशी के अंदाज के आगे विदेशी भी फीका @nitinjrnlist @SuYuting8 @Naveen_K_Singh_ pic.twitter.com/HGdzn8SjIY
— sudhirdandotiya (@sudhirdandotiya) November 19, 2021
ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೊವನ್ನು ನಾನು ಇಷ್ಟಪಟ್ಟಿದ್ದೇನೆ ಎಂದು ಓರ್ವರು ಹೇಳಿದ್ದಾರೆ. ವಯಸ್ಸಿಗೂ ಮೀರಿನ ವೃದ್ಧನ ಪ್ರತಿಭೆ ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವರು ನಗುವ ಎಮೋಜಿಗಳನ್ನು ಕಳುಹಿಸಿದ್ದರೆ ಇನ್ನು ಕೆಲವರು ಹೃದಯ ಮತ್ತು ಪ್ರೀತಿಯ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: