Viral Photo: ಮೂರು ದೈತ್ಯ ನಾಗರ ಹಾವುಗಳು ಮರಕ್ಕೆ ಸುತ್ತಿಕೊಂಡು ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿವೆ! ನೆಟ್ಟಿಗರು ದಿಗ್ಭ್ರಮೆಗೊಂಡ ಫೋಟೊ ವೈರಲ್​

ಇದೀಗ ವೈರಲ್ ಆದ ಫೋಟೊ ನೆಟ್ಟಿಗರು ಗಮನ ಸೆಳೆದಿದೆ. ಮೂರು ದೈತ್ಯ ನಾಗರ ಹಾವು ಮರವನ್ನೇರಿದೆ. ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿರುವಾಗ ಚಿತ್ರ ಕ್ಲಿಕ್ಕಿಸಲಾಗಿದೆ.

Viral Photo: ಮೂರು ದೈತ್ಯ ನಾಗರ ಹಾವುಗಳು ಮರಕ್ಕೆ ಸುತ್ತಿಕೊಂಡು ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿವೆ! ನೆಟ್ಟಿಗರು ದಿಗ್ಭ್ರಮೆಗೊಂಡ ಫೋಟೊ ವೈರಲ್​
ಮೂರು ದೈತ್ಯ ನಾಗರ ಹಾವುಗಳು ಮರಕ್ಕೆ ಸುತ್ತಿಕೊಂಡು ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿವೆ!
Follow us
TV9 Web
| Updated By: shruti hegde

Updated on: Nov 18, 2021 | 12:23 PM

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ತುಂಟಾಟ ಮೋಜು ಮಸ್ತಿಯದ್ದು. ವೈರಲ್​ ಆಗುವ ಇನ್ನು ಕೆಲವು ಭಯಾನಕ ವಿಡಿಯೊಗಳು ಜನರಿಗೆ ಹೆಚ್ಚು ಕುತೂಹಲ ಕೆರಳಿಸುತ್ತವೆ. ಅವುಗಳಲ್ಲಿ ಕೆಲವು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಇದೀಗ ವೈರಲ್ ಆದ ಫೋಟೊ ನೆಟ್ಟಿಗರು ಗಮನ ಸೆಳೆದಿದೆ. ಮಹಾರಾಷ್ಟ್ರದ ಮೆಲ್ಘಾಟ್ ಕಾಡಿನಲ್ಲಿ ಸೆರೆಹಿಡಿಯಲಾದ ಚಿತ್ರ ಇದಾಗಿದ್ದು, ಮೂರು ದೈತ್ಯ ನಾಗರ ಹಾವು ಮರವನ್ನೇರಿದೆ. ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿರುವಾಗ ಚಿತ್ರ ಕ್ಲಿಕ್ಕಿಸಲಾಗಿದೆ.

ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್ ಬುಕ್ ಗ್ರೂಪ್​ನಲ್ಲಿ ಫೋಟೊ ಹಂಚಿಕೊಳ್ಳಲಾಗಿದೆ. ಮ್ಯಾಜಿಕಲ್ ಮೆಲ್ಘಾಟ್, ಹರಿಸಲ್ ಕಾಡಿನಲ್ಲಿ 3 ನಾಗರಹಾವುಗಳನ್ನು ಗುರುತಿಸಲಾಗಿದೆ! ಎಂಬ ಶೀರ್ಷಿಕೆ ನೀಡುವ ಮೂಲಕ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಫುಲ್ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತಾ ನಂದಾ ಅವರು ಕೂಡಾ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ನೋಡಿದಂತೆ, ಕಪ್ಪು ಬಣ್ಣದ ಮೂರು ನಾಗರ ಹಾವುಗಳು ಮರವನ್ನು ಸುತ್ತಿಕೊಂಡು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುವ ದೃಶ್ಯ ಒಮ್ಮೆಲೆ ಮೈ ಜುಮ್ ಅನಿಸುವಂತಿದೆ.

ಅಧಿಕಾರಿ ಸುಶಾಂತಾ ನಂದಾ ಅವರ ಟ್ವೀಟ್ಅನ್ನು ಸುಮಾರು 2,200 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅವು ಸುಂದರವಾಗಿದೆ ಆದರೆ ದೂರದಲ್ಲಿದ್ದರೆ ಮಾತ್ರ! ಹತ್ತಿರಕ್ಕೆ ಬಂದರೆ ಬೆವರುತ್ತೇವೆ ಎಂಬ ಶೀರ್ಷಿಕೆ ನೀಡುವ ಮೂಲಕ ಪೋಸ್ಟ್ ಹಂಚಿಕೊಳ್ಳಲಾಗಿದೆ. ಕೆಲವರು ಚಿತ್ರಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು, ನಾನು ಆ ಸ್ಥಳದಲ್ಲಿದ್ದರೆ ಸೆಕೆಂಡುಗಳಲ್ಲಿ ಸ್ಥಳದಿಂದ ಪರಾರಿಯಾಗುತ್ತಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral Video: ವೇಗವಾಗಿ ಓಡಿ ಬಂದು ಆಸ್ಪತ್ರೆಯ ಎಸ್ಕಲೇಟರ್ ಏರಿದ ಗಾಯಾಳು ಜಿಂಕೆ!

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ