Viral Video: ಬಾಯಾರಿಕೆ ತಡೆಯಲಾಗದೇ ಹ್ಯಾಂಡಲ್ ಪಂಪ್ ಒತ್ತಿ ನೀರು ಕುಡಿದ ಎಮ್ಮೆ; ವಿಡಿಯೊ ನೋಡಿ
ಎಮ್ಮೆಯೊಂದು ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿಯುತ್ತಿದೆ. ಬುದ್ದಿವಂತ ಎಮ್ಮೆ ಎಂದು ಪ್ರತಿಕ್ರಿಯಿಸುವ ಮೂಲಕ ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತವೆ. ಕೆಲವು ತಮಾಷೆಯ ದೃಶ್ಯಗಳು ಮನಸ್ಸಿಗೆ ಭಾರೀ ಇಷ್ಟವಾಗುತ್ತವೆ. ಇನ್ನು ಕೆಲವು ಪ್ರಾಣಿಗಳ ತುಂಟಾಟ, ಮೋಜು ಮಸ್ತಿಯಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುತ್ತವೆ. ಅವುಗಳಲ್ಲಿ ಕೆಲವು ಎಲ್ಲರೂ ಬೆರಗಾಗಿ ನೋಡುವಂತಿರುತ್ತದೆ. ಇದೀಗ ವೈರಲ್ ಆದ ವಿಡಿಯೊ ಕೂಡಾ ಅಂಥದ್ದೇ! ಎಮ್ಮೆಯೊಂದು ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿಯುತ್ತಿದೆ. ಎಮ್ಮೆಯ ಚತುರತೆಗೆ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಬುದ್ದಿವಂತ ಎಮ್ಮೆ ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಇಲ್ಲೊಂದು ಎಮ್ಮೆ ಕೈಪಂಪನ್ನು ಒತ್ತಿ ನೀರು ಬರುವಂತೆ ಮಾಡಿದೆ. ಪಂಪಿನಿಂದ ನೀರು ಬರುತ್ತಿದ್ದಂತೆಯೇ ಬಾಯಾರಿದ ಎಮ್ಮೆ ಗಟಗಟನೆ ನೀರು ಕುಡಿದಿದೆ. ತನ್ನ ಕೋಡುಗಳಿಂದ ಕೈಪಂಪನ್ನು ಒತ್ತಿ ನೀರು ಬರುವಂತೆ ಮಾಡಿದ ಎಮ್ಮೆಯ ಚಾಣಾಕ್ಷತನ ನಿಜವಾಗಿಯೂ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
अब बताओ – “अक्ल बड़ी या भैंस”? ? pic.twitter.com/ee4bipnEGZ
— Dipanshu Kabra (@ipskabra) November 19, 2021
ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಐಎಫ್ಎಸ್ ಅಧಿಕಾರಿ ದೀಪಾಂಶು ಅವರು ವಿಡಿಯೊ ಪೋಸ್ಟ್ ಮಾಡಿದ್ದಾರೆ. ಮಸ್ಸಿಗೆ ಮುದ ನೀಡುವ ಈ ವಿಡಿಯೊ ಸಕತ್ ವೈರಲ್ ಆಗಿದ್ದು, 214 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸುಮಾರು 15,000 ಕ್ಕೂ ಹೆಚ್ಚಿನ ಲೈಕ್ಸ್ಗಳು ಲಭ್ಯವಾಗಿವೆ. ಅನೇಕರು, ಈ ಎಮ್ಮೆ ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸಿದೆ ಎಂದಿದ್ದಾರೆ.
नये युग में आदमी अपना तो जुगाड़ कर ही रहे है जानबर भी अपना जुगाड़ कर पानी पी रही है https://t.co/G36O0Eeb09
— Rana Ranjit Singh (@RanaRan78362406) November 20, 2021
फिर भी भैंस ही बड़ी है अकल बड़ी होती तो वीडियो बनाने वाला पानी पिला देता भैंसों को? https://t.co/9ZZGzObdnK
— manu bhai (@sn75eKfUj00OaDb) November 20, 2021
ಇದನ್ನೂ ಓದಿ:
Viral Video: ರಸ್ತೆ ಬದಿಯಲ್ಲಿ ನಿಂತು ವಿದೇಶಿಗನ ಜೊತೆ ಸಕತ್ ಸ್ಟೆಪ್ ಹಾಕಿದ ವೃದ್ಧ; ವಿಡಿಯೊ ನೋಡಿ
Viral Video: ಮನಿಕೆ ಮಗೆ ಹಿತೆ ಹಾಡಿಗೆ ಪುಟ್ಟ ಬಾಲಕಿಯ ಸಕತ್ ಸ್ಟೆಪ್